ವಿದ್ಯಾರ್ಥಿಗಳಿಗೆ ಇಲ್ಲೊಂದು ಅತ್ಯಂತ ಉಪಯುಕ್ತವಾದ ಗುಡ್ನ್ಯೂಸ್ ಬಂದಿದೆ. HDFC ಬ್ಯಾಂಕ್ನ ‘ಪರಿವರ್ತನ್ ECSS ಪ್ರೋಗ್ರಾಂ 2026-27’ ಅಡಿಯಲ್ಲಿ 1ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಅಂದ್ರೆ PG ಹಂತದವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₹15,000 ದಿಂದ ಗರಿಷ್ಠ ₹75,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
ಆರ್ಥಿಕ ಮುಗ್ಗಟ್ಟಿನಿಂದ ಯಾರ ವಿದ್ಯಾಭ್ಯಾಸವೂ ನಿಲ್ಲಬಾರದು ಎಂಬ ಉದ್ದೇಶದಿಂದ ಈ ಸ್ಕಾಲರ್ಶಿಪ್ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 31, 2026 ಕೊನೆಯ ದಿನವಾಗಿದೆ.
ಈ ಸ್ಕಾಲರ್ಶಿಪ್ಗೆ ಯಾರ್ಯಾರು ಅರ್ಹರು ಅಂತ ನೋಡೋದಾದರೆ; ಅರ್ಹತೆ: 1 ರಿಂದ 12ನೇ ತರಗತಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಹಾಗೂ ಸಾಮಾನ್ಯ ಮತ್ತು ವೃತ್ತಿಪರ ಪದವಿ ಅಥವಾ UG & PG ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕ ಗಳಿಸಿರಬೇಕು ಮತ್ತು ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಧನಸಹಾಯ ಎಷ್ಟು ಸಿಗುತ್ತೆ ಗೊತ್ತಾ?
1 ರಿಂದ 6ನೇ ತರಗತಿಗೆ: ₹15,000
7 ರಿಂದ 12ನೇ ತರಗತಿ, ಡಿಪ್ಲೊಮಾ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ: ₹18,000
ಸಾಮಾನ್ಯ ಪದವಿ ಅಂದ್ರೆ UG ವಿದ್ಯಾರ್ಥಿಗಳಿಗೆ: ₹30,000
ಹಾಗೇನೇ ವೃತ್ತಿಪರ ಪದವಿ ಕೋರ್ಸ್ಗಳಿಗೆ: ₹50,000
ಇನ್ನು ಸ್ನಾತಕೋತ್ತರ ಅಥ್ವಾ PG ಸಾಮಾನ್ಯ ಕೋರ್ಸ್ಗಳಿಗೆ ₹35,000
ಹಾಗೂ ವೃತ್ತಿಪರ PG ಕೋರ್ಸ್ಗಳಿಗೆ ಬರೋಬ್ಬರಿ ₹75,000
ಸ್ಕಾಲರ್ಶಿಪ್ ಸಿಗಲಿದೆ ಅಂತ ಹೇಳಲಾಗ್ತಿದೆ. ವಿಶೇಷವಾಗಿ ಕೌಟುಂಬಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳೆಂದರೆ – ಇತ್ತೀಚಿನ ಫೋಟೋ, ಹಿಂದಿನ ವರ್ಷದ ಅಂಕಪಟ್ಟಿ, ಪ್ರವೇಶಾತಿ ಪುರಾವೆ, ಆದಾಯ ಪ್ರಮಾಣಪತ್ರ ಹಾಗೂ ಬ್ಯಾಂಕ್ ಪಾಸ್ಬುಕ್. ಆಸಕ್ತ ವಿದ್ಯಾರ್ಥಿಗಳು Buddy4Study ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ, Parivartan ECSS Programme 2026-27 ವಿಭಾಗವನ್ನು ಆಯ್ಕೆ ಮಾಡಿ, ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31, 2026 ಆಗಿರುವುದರಿಂದ, ಅರ್ಹ ವಿದ್ಯಾರ್ಥಿಗಳು ಕೂಡಲೇ ಈ ಅವಕಾಶವನ್ನು ಬಳಸಿಕೊಳ್ಳಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ವಿದ್ಯಾರ್ಥಿಗಳೊಂದಿಗೆ ತಪ್ಪದೇ ಶೇರ್ ಮಾಡಿ.




