Thursday, January 23, 2025

Latest Posts

ಹಸಿದವರಿಗೆ ಅನ್ನ ಹಾಕಬೇಕು ಅದೇ ಮನುಷ್ಯತ್ವ

- Advertisement -

ರಾಮನಗರ : ಕೊರೊನಾ ಹಿನ್ನೆಲೆ ಇಡೀ ದೇಶ ಲಾಕ್ ಡೌನ್ ನಲ್ಲಿದೆ. ಬಡವರು, ಕೂಲಿಕಾರ್ಮಿಕರು, ನಿರ್ಗತಿಕರು ಊಟಕ್ಕೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಹಲವೆಡೆ ಜನರೇ ಮುಂದೆ ಬಂದು ಹಸಿದವರಿಗೆ ಊಟ ನೀಡುವ ಕೆಲಸ ಮಾಡ್ತಿದ್ದಾರೆ.. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಲಾಕ್ ಡೌನ್ ನಿಂದ ಪರದಾಡುವವರಿಗೆ ಜೆಡಿಎಸ್ ಕಾರ್ಯಕರ್ತರು ನಿರಂತರವಾಗಿ ಊಟ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.  ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷ ಜಯಮುತ್ತು ಹಾಗೂ ಜೆಡಿಎಸ್ ಮುಖಂಡ ಮಾಜಿ ತಾಲೂಕಿ ಕಾರ್ಯದರ್ಶಿ ಪ್ರಕಾಶ್  ನೇತೃತ್ವದಲ್ಲಿ ನಿತ್ಯವೂ ಸಾವಿರಾರು ಜನರಿಗೆ ಊಟ ನೀಡುವ ಕಾರ್ಯಕ್ರಮ ಮಾಡಲಾಗ್ತಿದೆ.

ಜನಸಮಾನ್ಯರು ಸಂಕಷ್ಟಕ್ಕೆ ಗುರಿಯಾದಾಗ ನಾವೇ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ನೆರವಾಗಬೇಕು.. ಜನ ಕೊರೊನಾಗಿಂತ ಹಸಿವಿನಿಂದ ಸಾಯುವ ಸನ್ನಿವೇಶ ಬರಬಾರದು.. ಹೀಗಾಗಿ  ಮಾಜಿ ಮುಖ್ಯಮಂತ್ರಿ ಹೆಸರಲ್ಲಿ ಜನತಾ ದಾಸೋಹ ಮಾಡುತ್ತಿರುವುದಾಗಿ ಜೆಡಿಎಸ್ ಮುಖಂಡ ಪ್ರಕಾಶ್ ಹೇಳಿದ್ರು..

ಕರ್ನಾಟಕ ಟಿವಿ, ರಾಮನಗರ

- Advertisement -

Latest Posts

Don't Miss