Political News: ಸದನಕಲಾಪದಲ್ಲಿ ಮತ್ತೆ ಹೆಚ್.ಡಿ.ಕೆ ಕಾಂಗ್ರೆಸ್ ವಿರುದ್ಧ ಮತ್ತೊಂದು ಬಾಂಬ್ ಹಾಕಿದ್ದಾರೆ. ಸದನಕ್ಕೆ ಪೆನ್ ಡ್ರೈವ್ ಸಮೇತವಾಗಿ ಆಗಿಮಿಸಿದ ಹೆಚ್.ಡಿ ಕುಮಾರಸ್ವಾಮಿ ಈ ಪೆನ್ ಡ್ರೈವ್ ನಲ್ಲಿ ಕಾಂಗ್ರೆಸ್ ದಂದೆಯ ಮಹಾ ಸಂಚಿನ ದಾಖಲೆಗಳು ಇದರಲ್ಲಿದೆ.
ಸಮಯ ಬಂದಾಗ ಸಾಕ್ಷಿ ಸಮೇತ ದಾಖಲೆಗಳನ್ನು ಖಂಡಿತವಾಗಿ ಬಿಡುಗಡೆ ಮಾಡುತ್ತೇನೆ ಎಂಬುವುದಾಗಿ ಕೆಂಗಲ್ ಗೇಟ್ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಹೆಚ್.ಡಿ.ಕೆ ಪೆನ್ ಡ್ರೈವ್ ಸಮೇತವಾಗಿ ಆಗಮಿಸ ಸಮಯ ಬಂದಾಗ ಎಲ್ಲ ದಾಖಲೆ ಬಿಡುಗಡೆ ಮಾಡುವೆ ಎಂದರು. ಜೊತೆಗೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಈ ಪೆನ್ ಡ್ರೈವ್ ನಲ್ಲಿ ಸಂಪೂರ್ಣ ಕಾಂಗ್ರೆಸ್ ಅಕ್ರಮಗಳ ಸಾಕ್ಷಿಗಳ ಸುರಿಮಾಲೆಗಳಿವೆ. ಹಾಗೆಯೆ ಇದರಲ್ಲಿ ಮುಖ್ಯವಾಗಿ ವರ್ಗಾವಣೆ ಕುರಿತಾಗಿ ಇರುವಂತಹ ದಾಖಲೆಗಳು ಮುಖ್ಯವಾಗಿವೆ. ಕಾಂಗ್ರೆಸ್ ನವರ ವಿರುದ್ಧ ಸಮಯ ಬಂದಾಗ ದಾಖಲೆ ಬಿಡುಗಡೆ ಖಂಡಿತ ಎಂದು ಸವಾಲನ್ನು ಹಾಕಿದರು.
ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ..!? ವಿಪಕ್ಷನಾಯಕನ ಸುಳಿವು ನೀಡಿದ ಬಿಎಸ್ ವೈ..!