ಕರ್ನಾಟಕ ಟಿವಿ : ಗುರುವಾರ ಬೆಳಗ್ಗೆ ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿಗೆ ಅಗ್ನಿಪರೀಕ್ಷೆ ಪಾಸ್ ಮಾಡ್ತಾರಾ..? ಅಗ್ ನಿಪರೀಖ್ಷೆ ಎದುರಿಸಲಾಗದೇ ವಿದಾಯ ಭಾಷಣ ನೀಡಿ ರಾಜೀನಾಮೆ ಘೋಷಣೆ ಮಾಡ್ತಾರಾ..? ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.. 16 ಕಾಂಗ್ರೆಸ್, ಜೆಡಿಎಸ್ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿದೆ.. ಆದ್ರೆ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡದ ಹಿನ್ನೆಲೆ ಕಾನೂನಾತ್ಮಕವಾಗಿ ದೋಸ್ತಿ ಸರ್ಕಾರ ಜೀವಂತವಾಗಿದೆ.. ಶಾಸಕರು ರಾಜೀನಾಮೆ ಅಂಗೀಕಾರ ವಾಗದಿದ್ದರೂ ನೈತಿಕ ಹೊಣೆ ಹೊತ್ತು ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರೆ ಅಂತ ಬಿಜೆಪಿ ನಾಯಕರು ಭಾವಿಸಿದ್ರು. ಆದ್ರೆ, ತಂದೆ ಹಾಗೂ ಪುತ್ರ ಸೋತಾಗಲೇ ಸೋಲನ್ನ ಸೈಡಿಗೆ ತಳ್ಳಿ ಅಧಿಕಾರ ಮುಂದುವರೆಸಿದ ಕುಮಾರಸ್ವಾಮಿ ಶಾಸಕರು ರಾಜೀನಾಮರ ಕೊಟ್ಟ ತಕ್ಷಣ ಸಿಎಂ ಖುರ್ಚಿ ಬಿಡ್ತಾರೆ ಅನ್ನೋ ಬಿಜೆಪಿ ನಾಯಕರ ಲೆಕ್ಕಾಚಾರ ಉಲ್ಟಾ ಆಗಿತ್ತು.. ಅಂತಿಮವಾಗಿ ಕೆಲವೇ ಗಂಟೆಗಳಲ್ಲಿ ಕುಮಾರಸ್ವಾಮಿ ವಿಶ್ವಾಸ ಮತವನ್ನ ಸಾಬೀತು ಮಾಡಬೇಕಿದೆ.
ಗುರುವಾರವೂ ಮಂಡನೆಯಾಗಲ್ಲ ವಿಶ್ವಾಸಮತ..!
ಇನ್ನು ಸರ್ಕಾರ ಬಹುಮತ ಕಳೆದುಕೊಂಡಿದ್ರು ರಾಜೀನಾಮೆ ಕೊಡದೆ ತಂತ್ರಗಾರಿಕೆ ಮುಂದುವರೆಸಿರುವ ಕುಮಾರಸ್ವಾಮಿ ಇಂದು ವಿಶ್ವಾಸ ಮತಯಾಚನೆ ಮಾಡುವಾಗ ಹೊಸ ದಾಳವನ್ನ ಉರುಳಿಸಲು ಮುಂದಾಗಿದ್ದಾರೆ. ಸ್ವತಃ ಕಾಂಗ್ರೆಸ್ ಶಾಸಕ ಸಂಗಮೇಶ್ ಈ ವಿಷಯವನ್ನ ಬಹಿರಂಗ ಮಾಡಿದ್ದಾರೆ.. ಕುಮಾರಸ್ವಾಮಿ ಸೋಮವಾರದ ವಿಶ್ವಾಸಮತ ಸಾಬೀತು ಮಾಡ್ತಾರೆ ಅಂತ ದೋಸ್ತಿಗಳ ತಂತ್ರವನ್ನ ಬಹಿರಂಗ ಮಾಡಿದ್ದಾರೆ..
ಬಿಜೆಪಿ ಶಾಸಕರನ್ನ ರೊಚ್ಚಿಗೆಬ್ಬಿಸಿ ಅನರ್ಹ ಮಾಡುವ ತಂತ್ರ..!
ಇನ್ನು ಗುರುವಾರ, ಶುಕ್ರವಾರ ನಿರಂತರವಾಗಿ ವಿಶ್ವಾಸಮತದ ಮೇಲೆ ಮಾತನಾಡಿ ಮತಕ್ಕೆ ಹಾಕದಂತೆ ಮಾಡಿದ್ರೆ ಬಿಜೆಪಿ ಶಾಸಕರು ಗಲಾಟೆ ಮಾಡ್ತಾರೆ.. ಈ ವೇಳೆ ಅನುಚಿತ ವರ್ತನೆ ತೋರಿದ್ರು ಅಂತ ಗಲಾಟೆ ಮಾಡಿದ ಬಿಜೆಪಿ ಶಾಸಕರನ್ನ ಸದನದಿಂದ ಅಮಾನತು ಮಾಡಿಸಿ ಬಹುಮತ ಸಾಬೀತು ಮಾಡುವುದು, ಇಲ್ಲವಾದಲ್ಲಿ ಅತೃಪ್ತರಲ್ಲಿ ಕೆಲವರು ವಾಪಸ್ ಸದನಕ್ಕೆ ಕರೆತಂದು ಸರ್ಕಾರ ಳಿಸಿಕೊಳ್ಳುವುದು ಕುಮಾರಸ್ವಾಮಿ ಟೀಂ ತಂತ್ರ.. ಗುರುವಾರ, ಶುಕ್ರವಾರ ವಿಶ್ವಾಸಮತದ ಚರ್ಚೆ ಮಾಡಿದ್ರೆ ಶನಿವಾರ, ಭಾನುವಾರ ಸದನ ನಡೆಯೋದಿಲ್ಲ.. ಆಗ ಸೋಮವಾರ ಸದನ ಸೇರುವ ವೇಳೆಗೆ ಬಿಜೆಪಿ ಶಾಸಕರನ್ನ ಅಮಾನತು ಮಾಡಿಸಿ, ಇಲ್ಲವೇ ರಿವರ್ಸ್ ಆಪರೇಷನ್ ಮಾಡೋದು. ಅದು ಮಿಸ್ ಆದ್ರೆ ಅಂತಿಮವಾಗಿ ಸೋಮವಾರ ರಾಜೀನಾಮೆ ನೀಡೋದು. ಅಲ್ಲಿವರೆಗೆ ಯಾವುದೇ ಕಾರಣಕ್ಕೂ ವಿಶ್ವಾಸ ಮತಕ್ಕೆ ಹೋಗದ ಹಾಗೆ ನೋಡಿಕೊಳ್ಳಬೇಕು ಅಂತ ಕಾಂಗ್ರೆಸ್-ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ.. ಒಂದು ವೇಳೆ ಸ್ಪೀಕರ್ ಇದಕ್ಕೆ ಆಸ್ಪದ ನೀಡದೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೆಶ್ವರ್ ಮಾತನಾಡಿದ ನಂತರ ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡಿ ವಿಶ್ವಾಸ ಮತಕ್ಕೆ ಹಾಕಬಹುದು.. ಸ್ಪೀಕರ್ ರಮೇಶ್ ಕುಮಾರ್ ಹೀಗೆ ಮಾಡಿದ್ರೆ ಸರ್ಕಾರ ಗುರುವಾರವೇ ಪತನ ಗ್ಯಾರಂಟಿ. ಆದ್ರೆ, ರಾಜೀನಾಮೆ ನೀಡಿದ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಸ್ಪೀಕರ್ ಅಸಮಾಧಾನಕ್ಕೆ ಕಾರಣವಾಗಿದ್ದಾರೆ.. ಕಾಂಗ್ರೆಸ್-ಜೆಡಿಎಸ್ ನಾಯಕರ ತಂತ್ರದಂದೆ ದಿನಗಟ್ಟಲೇ ಮಾತನಾಡಲು ಅವಕಾಶ ಕೊಟ್ಟರೆ ಮತ್ತಷ್ಟು ರಾಜಕೀಐ ಟೆನ್ಶನ್ ರಾಜ್ಯದಲ್ಲಿ ಮುಂದುವರೆಯಲಿದೆ. ಆದರೂ ವಿಶ್ವಾಸ ಮತದ ವಿಚಾರದಲ್ಲಿ ರಮೇಶ್ ಕುಮಾರ್ ಯಾವ ರೀತಿ ನಡೆದುಕೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ..