Saturday, December 21, 2024

Latest Posts

ಡಿಕೆಶಿ ದರೋಡೆ ಮಾಡಿದ್ರಾ..? ಹೆಚ್ಡಿಕೆ ಹೀಗಂದ್ರಾ..?

- Advertisement -

ಕರ್ನಾಟಕ ಟಿವಿ : 33 ವರ್ಷ ದೇವೇಗೌಡರ ವಿರೋಧಿ ರಾಜಕಾರಣ ಮಾಡಿದ್ದ ಡಿಕೆ ಶಿವಕುಮಾರ್ 2018ರ ವಿಧಾನಸಭೆ ಚುನಾವಣಾ ಫಲಿತಾಂಶ ಬಂದಾಗ ರಾಹುಲ್ ಗಾಂಧಿ ಕೊಟ್ಟ ಸೂಚನೆಯಂತೆ 33 ವರ್ಷಗಳ ರಾಜಕೀಯ ದ್ವೇಷ ಮರೆತು ಕುಮಾರಸ್ವಾಮಿಯನ್ನ ಸಿಎಂ ಮಾಡಿದ್ರು. ಬರೀ ಬೆಂಬಲ ಕೊಟ್ಟು ಸುಮ್ಮನಾಗದ ಡಿಕೆಶಿವಕುಮಾರ್ ಆಪರೇಷನ್ ಕಮಲದಿಂದ ದೋಸ್ತಿ ಸರ್ಕಾರವನ್ನ 14 ತಿಂಗಳು ಕಾಪಾಡಿದ್ರು.. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ರಾಜಕಾರಣದಲ್ಲಿ ಜೋಡೆತ್ತುಗಳು ಅಂತ ಡಿಕೆ ಶಿವಕುಮಾರ್ -ಕುಮಾರಸ್ವಾಮಿ ಮಂಡ್ಯದಲ್ಲಿ ಹೇಳಿಕೆ ಕೊಟ್ಟಿದ್ರು. ರಾಜಕೀಯದಲ್ಲಿ ನಾವು ಜೋಡೆತ್ತುಗಳು ಅಂತ ಹೇಳಿ ಆರು ತಿಂಗಳಾಗಿಲ್ಲ ಈಗಾಗಲೇ ಈ ಜೋಡೆತ್ತುಗಳ ಹೇಳಿಕೆ ಬರೀ ರಾಜಕೀಯ ಬಿಲ್ಡಪ್ ಅನ್ನೋದು ಬಯಲಾಗಿದೆ. ಕಾಂಗ್ರೆಸ್ ನಾಯಕರು ಎಷ್ಟೇ ಒಳಗೊಳಗೆ ವಿರೋಧ ಮಾಡಿದ್ರು ಡಿಕೆ ಶಿವಕುಮಾರ್ ಮಾತ್ರ ಕುಮಾರಸ್ವಾಮಿ ಸರ್ಕಾರವನ್ನ ಚೌಕಿದಾರ್ ರೀತಿ ಕಾವಲು ಕಾಯ್ತಿದ್ರು.. ದೋಸ್ತಿ ಸರ್ಕಾರ ಬಿದ್ದ ಮೇಲೂ, ಸಿದ್ದರಾಮಯ್ಯ ಗೌಡರ ಫ್ಯಾಮಿಲಿಯನ್ನ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ ನಂತರವೂ ಡಿಕೆ ಶಿವಕುಮಾರ್ ಮಾತ್ರ ನಮ್ಮ ಹಾಗೂ ದೇವೇಗೌಡರ ಕುಟುಂಬದ ಜೊತೆಗಿನ ದೋಸ್ತಿ ಹಾಳಾಗಲ್ಲ ಅಂತ ಹೇಳಿದ್ರು. ಡಿಕೆ ಶಿವಕುಮಾರ್ ಇಷ್ಟೇಲ್ ನಿಯತ್ತು, ಪ್ರೀತಿ ಇಟ್ಕೊಂಡಿದ್ರು ಕುಮಾರಸ್ವಾಮಿ ಕೊಟ್ಟಿರುವ ಹೇಳಿಕೆ ಡಿಕೆ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟಿದೆ.

ಡಿಕೆ ಶಿವಕುಮಾರ್ ಗೆ ಲೂಟಿ ಮಾಡಲು ನಾನು ಹೇಳಿದ್ನಾ..?

ಬೆಂಗಳೂರಿನಲ್ಲಿ ನಡೆದ ಒಕ್ಕಲಿಗ ಹೋರಾಟದಲ್ಲಿ ಕುಮಾರಸ್ವಾಮಿ ಭಾಗಿಯಾಗಿರಲಿಲ್ಲ, ಈ ಬಗ್ಗೆ ಕೇಳಿದ್ದಕ್ಕೆ ನನಗೆ ಕರೆದಿಲ್ಲ, ಅವರು ಆತುರಾತುರವಾಗಿ ಕಾರ್ಯಕ್ರಮ ಮಾಡಿದ್ದಾರೆ ಅಂತ ಅಸಡ್ಡೆ ಮಾತನಾಡಿದ್ರು. ಆಗಲೇ ಡಿಕೆ ಅಭಿಮಾನಿಗಳಿಗೆ ಕುಮಾರಸ್ವಾಮಿ ಮೇಲೆ ಬೇಜಾರಾಗಿತ್ತು. ಶಾಸಕರು ಸ್ಪೀಕರ್ ಕಚೇರಿಗೆ ರಾಜೀನಾಮೆ ನೀಡಲು ಬಂದು ಕೂತಾಗ ಡಿಕೆ ಶಿವಕುಮಾರ್ ಕನಕಪುರದಲ್ಲಿ ಇದ್ರು. ವಿಷಯ ತಿಳಿದ ತಕ್ಷಣ ಒಂದೇ ಉಸಿರಿನಲ್ಲಿ ಕನಕಪುರದಿಂದ ವಿಧಾನಸೌಧಕ್ಕೆ ಓಡೋಡಿ ಬಂದು ರಾಜೀನಾಮೆ ಪತ್ರವನ್ನ ಹರಿದು ಹಾಕಿದ್ರು. ಆಗ ಡಿಕೆ ಶಿವಕುಮಾರ್ ಗೆ ಯಾರೂ ಆಹ್ವಾನ ಕೊಟ್ಟಿರಲಿಲ್ಲ. ನಂತರ ಮುಂಬೈ ಹೋಟೆಲ್ ಮುಂದೆ ಮಳೆಯಲ್ಲೇ ಕುಮಾರಸ್ವಾಮಿ ಸರ್ಕಾರ ಉಳಿಸುವ ಸಲುವಾಗಿ ಶಾಸಕರನ್ನ ಕರೆತರಲು ಧರಣಿ ಕೂತು ಬಂಧನಕ್ಕೆ ಒಳಗಾಗಿದ್ರು.. ಆದ್ರೀಗ ಕುಮಾರಸ್ವಾಮಿ ನೀಡಿದ್ದಾರೆ ಎನ್ನಲಾಗ್ತಿರುವ ಹೇಳಿಕೆ ಡಿಕೆಶಿ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಮೈಸೂರಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕುಮಾರಸ್ವಾಮಿ ನಾನೇನು ಡಿಕೆಶಿಗೆ ದರೋಡೆ ಮಾಡಲು ಹೇಳಿದ್ನಾ ಅಂತ ಹೇಳಿಕೆ ನೀಡಿದ್ದಾರೆ ಅಂತ ಕುಮಾರಸ್ವಾಮಿ ಒಂದು ಕಾಲದ ಆಪ್ತ ಪ್ರಸ್ತುತ ವಿರೋಧಿಯಾದ ಚಲುವರಾಯಸ್ವಾಮಿ ಬಾಂಬ್ ಸಿಡಿಸಿದ್ದಾರೆ.

ಚಲುವರಾಸ್ವಾಮಿ ಹೇಳಿದ ರೀತಿ ಕುಮಾರಸ್ವಾಮಿ ಹೇಳಿದ್ದೆ ಆದಲ್ಲಿ ಇದು ಜೆಡಿಎಸ್ ಗೆ ಹಳೇ ಮೈಸೂರು ಭಾಗದಲ್ಲಿ ದೊಡ್ಡ ಡ್ಯಾಮೇಜ್ ಆಗೋದು ಗ್ಯಾರಂಟಿ. ಯಾಕಂದ್ರೆ ಡಿ ಕೆ ಶಿವಕುಮಾರ್ ಈ ಹಿಂದೆ ಕುಮಾರಸ್ವಾಮಿ ಸರ್ಕಾರ ಉಳಿಸಲು ಏನೆಲ್ಲಾ ಸರ್ಕಾರ ಮಾಡಿದ್ರು ಅನ್ನೋದು ಜೆಡಿಎಸ್ ಕಾರ್ಯಕರ್ತರಿಗೂ ಗೊತ್ತು ಹೀಗಾಗಿ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಮಾತನ್ನ ಒಪ್ಪಲು ಸಾಧ್ಯವಿಲ್ಲ.

ಯಸ್ ವೀಕ್ಷಕರೇ ಕುಮಾರಸ್ವಾಮಿ ಬೇಕಂತಲೇ ಡಿಕೆಶಿಯಿಂದ ಅಂತರ ಕಾಯ್ದುಕೊಂಡ್ರಾ..? ಹೌದು ಅಥವಾ ಇಲ್ಲ ಅಂತ ಕಾಮೆಂಟ್ ಮಾಡಿ

- Advertisement -

Latest Posts

Don't Miss