Friday, September 20, 2024

Latest Posts

HD Revanna: ಎತ್ತಿನಹೊಳೆ ಕಾಮಗಾರಿ ವೀಕ್ಷಿಸಿದ ಮಾಜಿ ಸಚಿವ ಹಾಲಿ ಶಾಸಕ ಹೆಚ್ ಡಿ ರೇವಣ್ಣ**

- Advertisement -

ಆಲೂರು: ತಾಲ್ಲೂಕಿನ ಜಿ ಕೊಪ್ಪಲು ಗ್ರಾಮಕ್ಕೆ ಇಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಭೇಟಿ ನೀಡಿ ಎತ್ತಿನಹೊಳೆ ಕಾಮಗಾರಿ ಯೋಜನೆಯ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಡನೆ ಚರ್ಚೆ ನಡೆಸಿದರು.

ನಂತರ ಮಾಧ್ಯಮದವರೊಂದಿಗೆ ಮಾತಾನಾಡಿ ಜಿ,ಜಿ ಕೊಪ್ಪಲು ಗ್ರಾಮದ ಅಜ್ಜೇನಹಳ್ಳಿ ಬೀರಕನಹಳ್ಳಿ,ಬೆಳ್ಳಾವರ ಸಮುದ್ರವಳ್ಳಿ, ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದಲ್ಲಿ ಎತ್ತಿನಹೊಳೆ ಕಾಮಗಾರಿ ಹಾದು ಹೋಗಿದ್ದು ಬೇರೆ ಜಿಲ್ಲೆಗಳಿಗೆ ನೀರು ಒದಗಿಸುವ ಸಲುವಾಗಿ ಕೆಲಸಮಾಡುತ್ತಿರುವುದು ಶ್ಲಾಘನೀಯ ಆದರೆ ಇಲ್ಲಿರುವ ರೈತರಿಗೆಅನ್ಯಾಯವಾಗುತ್ತಿರುವುದು ಮಾತ್ರ ಅಧಿಕಾರಿಗಳಿಗೆ ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ ಈ ಕಾಮಗಾರಿ ಕೆಲಸದಿಂದ ಇಲ್ಲಿರುವ ಸ್ಥಳೀಯ ರೈತರಿಗೆ ಅಪಾರ ಸಂಕಷ್ಟ ಮತ್ತು ನಷ್ಟ ಉಂಟುಮಾಡಿದೆ ಕಾರಣ ಭೂಮಿಯನ್ನು 120 ಹಾಗೂ 180 ಅಡಿ ಆಳ ಗುಂಡಿ ತೆಗೆದು ಸಿಡಿಮದ್ದು ಸಿಡಿಸುತ್ತಿರುವುದರಿಂದ ರೈತರಿಗೆ ತೊಂದರೆ ಹಾಗಿದೆ ಎತ್ತಿನಹೊಳೆ ಕೆಲಸದಿಂದ ರೈತರ ಜಮೀನಿನಲ್ಲಿದ್ದ ಬೋರುವೆಲ್ ಗಳಲ್ಲಿ ನೀರು ಇಲ್ಲಾದಂತಾಗಿದ್ದು ಬೋರ್ ವೆಲ್ ಗಳಲ್ಲಿ ನೀರು ಇಲ್ಲದೆ ರೈತರು ಕಣ್ಣು ಬಾಯಿ ಬಿಡುತ್ತಿದ್ದಾರೆ,
ಈ ಉರಿ ಬೀಸಿಲಿನ ತಾಪಕ್ಕೆ ರೈತರು ಬೇಳೆದ ಬೇಳೆಗೆ ನೀರು ಇಲ್ಲದಂತಾಗಿದ್ದು ಇತ್ತ ರೈತರಿಗೆ ಪರಿಹಾರವು ಇಲ್ಲದೆ ಕುಡಿಯುವ ನೀರು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ಧಾರೆ,
ಇನ್ನೂ 50 ರಿಂದ 100 ಅಡಿ ಅಂತರದಲ್ಲಿ ಸುಮಾರು 40 ಕ್ಕೂ ಹೆಚ್ಚು ಮನೆಗಳಿದ್ದು ಸಿಡಿಮದ್ದು ಸ್ಫೋಟಕ್ಕೆ ಮನೆಗಳಿಗೂ ಹಾನಿಯಾಗಿದ್ದು ಜನರು ಸಂಕಷ್ಟಕ್ಕಿಡಾಗಿದ್ದಾರೆ ಇದರ ಬಗ್ಗೆ ನಾನು ಹಾಸನ ಜಿಲ್ಲಾಧಿಕಾರಿಗಳ ಜೊತೆ ಮಾತಾನಾಡಿ ಅಧಿಕಾರಿಗಳು ಹಾಗೂ ಇಲ್ಲಿಯ ಜನರನ್ನು ನಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ನ್ಯಾಯದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಇಲ್ಲಿಯ ಜನರು ಹೇಳಿದಂತೆ ಅಧಿಕಾರದ ದರ್ಪದಿಂದ ಪೊಲೀಸರಾಗಲಿ ಬೇರೆ ಅಧಿಕಾರಿಗಳಗಲಿ ಯಾರೂಕೂಡ ರೈತರಿಗೆ ತೊಂದರೆಕೊಡುವುದಾಗಲಿ ಹೆದರಿಸುವುದಾಗಲಿ ಮಾಡಿದರೆ ನಾವು ಸಹಿಸುವುದಿಲ್ಲ ಹಾಗೂ ರಾತ್ರೋ ರಾತ್ರಿ ಕೆಲಸ ಮಾಡಿ ಜನರಿಗೆ ಇಲ್ಲಸಲ್ಲದ ಅಶ್ವಸನೆ ನೀಡಿ ರೈತರಿಗೆ ಕಣ್ಣು ಒರೆಸುವ ಕೆಲಸ ಮಾಡಬಾರದು ಅಂಥಹದೇನಾದರೂ ನನ್ನ ಗಮನಕ್ಕೆ ಬಂದರೆ ನಮ್ಮ ಎಲ್ಲಾ ಸುತ್ತಮುತ್ತಲಿನ ಹಳ್ಳಿಯ ಜನರು ಹಾಗೂ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರುಗಳು ಸೇರಿ ಉಗ್ರಹೋರಾಟ ಮಾಡುತ್ತೇವೆ ಗ್ರಾಮಸ್ಥರು ಯಾರೂ ಕೂಡ ಭಯ ಪಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಹಾಗೂ ಈ ವಿಷಯದ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ ಯೆಂದು ಗ್ರಾಮಸ್ಥರಿಗೆ ಭರವಸೆ ನೀಡಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್ ಕೆ ಕುಮಾರಸ್ವಾಮಿ ಜೆಡಿಎಸ್ ಮುಖಂಡರುಗಳಾದ ತಾಲ್ಲೂಕು ಅಧ್ಯಕ್ಷ ಕೆ, ಎಸ್ ಮಂಜೇಗೌಡ ನಟರಾಜ್ ನಾಕಲಗೂಡು, ವೇದಾ, ಸುರೇಶ್ ಮೂರ್ತಿ, ಯೋಗೇಶ್ ಗೌಡೇಗೌಡ ಹಾಗೂ ಗ್ರಾಮಸ್ಥರಿದ್ದರು.

Siddaramaiah: ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಸರ್ವಪಕ್ಷ ಸಭೆ; ಸಿಎಂ

Kaveri Water : ಕಾವೇರಿ ನೀರು ತಮಿಳುನಾಡಿಗೆ ಬಿಡದಂತೆ ಕನ್ನಡಪರ ಸಂಘಟನೆ ಪ್ರತಿಭಟನೆ

Kaveri Water : ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸರ್ಕಾರ ನಿರ್ಧಾರ

- Advertisement -

Latest Posts

Don't Miss