ಮದುವೆಯಾದ 6 ತಿಂಗಳಿಗೆ ಪತ್ನಿಗೆ ಚಿತ್ರ ಹಿಂಸೆ ಕೊಡ್ತಿದ್ದ. ಗರ್ಭಿಣಿ ಅನ್ನೋದನ್ನೂ ನೋಡದೇ ಮಾರಕಾಸ್ತ್ರಗಳಿಂದಲೂ ಹಲ್ಲೆ ನಡೆಸಿದ್ದಾನೆ. ಪರಿಣಾಮ, ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗು ಭೂಮಿಗೆ ಬರುವುದಕ್ಕೂ ಮುನ್ನವೇ ಸಾವನ್ನಪ್ಪಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ಘಟನೆ.
ಮುಂಡಗೋಡ ತಾಲೂಕಿನ ಓಣಕೇರಿ ಗ್ರಾಮದ ಅಮೀರಬಿ ಮತ್ತು ಪಯಾಜ್ ಮತ್ತೆಸೂರು ಪ್ರೀತಿಸಿ ಮದುವೆಯಾಗಿದ್ರು. ಮದುವೆಗೆ ಮುಂಚಿತವೇ ಅಮೀರಬಿ 3 ತಿಂಗಳ ಗರ್ಭಿಣಿಯಾಗಿದ್ಲು. ಬಳಿಕ ಕುಟುಂಬಸ್ಥರನ್ನ ಒಪ್ಪಿಸಿ ಇಬ್ಬರೂ ಮದುವೆಯಾಗಿದ್ರು. ಬಳಿಕ ಪತ್ನಿಗೆ ಪಾಪಿ ಪಯಾಜ್, ಲಾಠಿ, ಕೊಡಲಿಯಿಂದ ಗರ್ಭಿಣಿಗೆ ಚಿತ್ರಹಿಂಸೆ ನೀಡುತ್ತಿದ್ದನಂತೆ.
ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡು ಅಸ್ವಸ್ಥಗೊಂಡಿದ್ದ ಗರ್ಭಿಣಿಯನ್ನ, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಿ ಮಗು ಮೃತಪಟ್ಟಿತ್ತು, ಸದ್ಯ ತೀವ್ರ ಅಸ್ವಸ್ಥಗೊಂಡಿರುವ ತಾಯಿಗೆ ಚಿಕಿತ್ಸೆ ಮುಂದುವರೆದಿದೆ. ಅಮೀರಬಿ ಕುಟುಂಬಸ್ಥರಿಂದ ಪತಿ ಪಯಾಜ್ ವಿರುದ್ಧ ದೂರು ನೀಡಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

