ಹೋಮ್ ವರ್ಕ್ ,ಹೋಮ್ ವರ್ಕ್ , ಈ ಹೆಸ್ರು ಕೇಳ್ತಾ ಇದ್ದಾಹಾಗೆ ಮಕ್ಕಳಿಗೆ ಸಿಟ್ಟು ಬರುತ್ತೆ. ಯಾಕಂದ್ರೆ ಶಾಲೆ ಮುಗಿಸಿ ಬಂದ್ ಮೇಲೂ ರಾಶಿ ರಾಶಿ ಹೋಮ್ ವರ್ಕ್ ಗಳು ಮಕ್ಕಳಿಗೆ ನೆಮ್ಮದಿನೇ ಇಲ್ದೇ ಇರೋ ತರ ಮಾಡಿ ಬಿಟ್ಟಿದೆ. ಆಟ ಆಡೋಕ್ಕೂ ಫ್ರೀ ಇಲ್ದೆ ಹೋಮ್ ವರ್ಕ್ ಮಾಡ್ಬೇಕಲ್ಲಾ ಇದನ್ನ ಮಾಡ್ದೋನ್ ಸಿಕ್ಕಿದ್ರೆ ಅಂತಾ ಮಕ್ಕಳು ಸಿಟ್ಟಾಗೋದು ಇದೆ . ಹಾಗಿದ್ರೆ ಮಕ್ಕಳು ಇಷ್ಟೊಂದು ಹೇಟ್ ಮಾಡೋ ಈ ಹೋಮ್ ವರ್ಕ್ ಕಾನ್ಸೆಪ್ಟ್ ಬಂದಿದ್ದಾದ್ರು ಹೇಗೆ ಇದನ್ನು ಜಾರಿಗೆ ತಂದೋರು ಯಾರು ಗೊತ್ತಾ ತೋರೀಸ್ತೀವಿ
ಹೌದು ವೀಕ್ಷಕರೇ …. ಸ್ಕೂಲ್ ನಲ್ಲಿ ಕೊಡೋ ರಾಶಿ ಹೋಮ್ ವರ್ಕ್ ಗಳು ಮಕ್ಕಳ ಮಾನಸಿಕ ನೆಮ್ಮದಿಯನ್ನ ಕಡಿಸಿದ್ರೆ, ಇತ್ತ ಪೋಷಕರಿಗೂ ಇದು ತಲೆನೋವಾಗಿ ಪರಿಣಮಿಸಿದೆ . ಮಕ್ಕಳನ್ನ ಹಿಡಿದು ಕೂರಿಸಿ ಹೋಮ್ ವರ್ಕ್ನ ಮುಗಿಸೋದೇ ದೊಡ್ಡ ಕೆಲಸ ಆಗಿದೆ . ಹೀಗೆ ಮಕ್ಳು ಇಷ್ಟ ಇಲ್ಲದೆ ಕಷ್ಟ ಪಟ್ಟು ಮಾಡೋ ಈ ಹೋಮ್ ವರ್ಕ್ ಅನ್ನು ಪರಿಚಯಿಸಿದ್ದು ಇಟಲಿಯ “ರಾಬರ್ಟೊ ನೆವಿಲಿಸ್” ಎಂಬ ಶಿಕ್ಷಕ .
ಅಂದಹಾಗೆ ರಾಬರ್ಟೊ ನೆವಿಲಿಸ್”, ವೃತ್ತಿಯಲ್ಲಿ ಶಿಕ್ಷಕನಾಗಿದ್ದ . ಈತ 1905ರಲ್ಲಿ ತಮ್ಮ ವಿದ್ಯಾರ್ಥಿಗಳು ಏನಾದ್ರೂ ತಪ್ಪು ಮಾಡಿದ್ರೆ, ಪೆಟ್ಟು ನೀಡೋ ಬದಲು ಆ ತಪ್ಪಿಗೆ ಹೋಮ್ ವರ್ಕ್ ಮಾಡುವ ಶಿಕ್ಷೆಯನ್ನು ನೀಡುತ್ತಿದ್ರಂತೆ.ಕ್ರಮೇಣ ಇದೇ ಪದ್ಧತಿ ಮುಂದುವರೆದು ಇದೀಗ ಈ ಹೋಮ್ ವರ್ಕ್ ಎಂಬ ಕಾನ್ಸೆಪ್ಟ್ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.
ಸದ್ಯ ಇದೀಗ ಕಲಿಕೆಯ ಭಾಗವಾಗಿ ಪ್ರತಿಯೊಂದು ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ನೀಡುತ್ತಿದ್ದಾರೆ . ಈ ಕುರಿತ ಇಂಟರೆಸ್ಟಿಂಗ್ ಮಾಹಿತಿಯನ್ನ ಆಮೆಜಿಂಗ್ ಫ್ಯಾಕ್ಟ್ಸ್ ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ಇವರೇ ನೋಡಿ ಹೋಮ್ ವರ್ಕ್ ಅನ್ನು ಕಂಡುಹಿಡಿದ ಶಿಕ್ಷಕ ರಾಬರ್ಟೊ ನೆವಿಲಿಸ್” ಎಂಬ ಟೈಟಲ್ ಜೊತೆ ಬರೆದು ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಹಂಚಿಕೊಳ್ಳಲಾದ ಈ ಪೋಸ್ಟ್‌ಗೆ ಬರೋಬ್ಬರಿ 6 ಲಕ್ಷಕ್ಕೂ ಅಧಿಕ ವೀವ್ಸ್ ಹಾಗೂ ಕಾಮೆಂಟ್ಸ್‌ಗಳು ಬಂದಿದೆ. ಇನ್ ಸ್ಟಾಗ್ರಾಮ್ ಬಳಕೆದಾರನೊಬ್ಬ ʼಈ ವ್ಯಕ್ತಿ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷೆ, ಇಂದೂ ಪ್ರಪಂಚದ ಪ್ರತಿಯೊಬ್ಬ ವಿದ್ಯಾರ್ಥಿಗೂ ದೊಡ್ಡ ಶಿಕ್ಷೆಯಾಗಿದೆʼ ಎಂಬ ತಮಾಷೆಯಾಗಿ ಕಾಮೆಂಟ್ ಹಾಗಿದ್ದಾನೆ . ʼಹಾಗಿದ್ರೆ ಇಂದು ನಾವು ಕಷ್ಟ ಪಡಲು ಇವರೇ ಕಾರಣವೇʼ ಎಂದು ಕೆಲವ್ರು ಕಾಮೆಂಟ್ ಮಾಡಿದ್ರೆ ಇನ್ನೂ ಕೆಲವ್ರು ʼಜ್ಞಾನವನ್ನು ಹೆಚ್ಚಿಸುವ ಶಿಕ್ಷೆಯನ್ನು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ.ಒಟ್ಟಾರೆ ಇಷ್ಷೂ ದಿನ ಹೋಮ್ ವರ್ಕ್ಸ ಪತ್ತೆಮಾಡಿದವ ಯಾರು ಎಂಬ ಪ್ರಶ್ನೆ ಗೆ ಇದೀಗ ಉತ್ತರ ಸಿಕ್ಕಿದೆ.