www.karnatakatv.net ಬೆಂಗಳೂರು : ಕೊರೊನಾ ಎರಡು ಅಲೆಗಳು ಸರ್ಕಾರದ ಖಜಾನೆ ಖಾಲಿ ಮಾಡಿಸುತ್ತಿದೆ. ಹೀಗಾಗಿ ಅಭಿವೃದ್ದಿ ಯೋಜನೆಗಳು ಅರ್ಧಬಂರ್ಧ ನಿಂತಿವೆ.. ಬೆಂಗಳೂರಿಗೆ ಮತ್ತೆ ಜನ ವಾಪಸ್ ಬಂದ ಕಾರಣ ಅರ್ಧಕ್ಕೆ ನಿಂತ ಕಾಮಗಾರಿಗಳು ಓಡಾಟಕ್ಕೆ ತೊಂದರೆ ಉಂಟು ಮಾಡ್ತಿವೆ. ಸ್ವತಃ ಬಿಜೆಪಿ ಶಾಸಕರೇ ಅನುದಾನ ತರಲು ಸಾಧ್ಯವಾಗದೆ ಕೈಚೆಲ್ಲಿ ಕೂತಿದ್ದಾರೆ. ಬೆಂಗಳೂರಿನ ಏಕೈಕ ಜೆಡಿಎಸ್ ಶಾಸಕ ದಾಸರಹಳ್ಳಿಯ ಎಂಎಲ್ ಎ ಮಂಜುನಾಥ್ ಅವರು ಹಠ ಮಾಡಿ ಸರ್ಕಾರದ ಬಳಿ ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡಿಸ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಚೆನ್ನಪಟ್ಟಣ, ರಾಮನಗರ ವಿಚಾರವಾಗಿ ಸಿಎಂ ಬಳಿ ಹೋದವರಲ್ಲ. ಆದ್ರೆ ದಾಸರಹಳ್ಳಿ ಶಾಸಕ ಮಂಜುನಾಥ್ ಪಟ್ಟು ಬಿಡದೆ ಕುಮಾರಸ್ವಾಮಿಯವರನ್ನ ಯಡಿಯೂರಪ್ಪ ಬಳಿ ಕರೆದುಕೊಂಡು ಹೋಗಿ ಅನುದಾನ ತಂದು ಕೆಲಸ ಮಾಡಿಸ್ತಿದ್ದಾರೆ.
ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡ್ ಕಿರ್ಲೋಸ್ಕರ್ ಬಡಾವಣೆ, ಸಿದ್ದೇಶ್ವರ ಬಡಾವಣೆ, ಸೌಂದರ್ಯ ಬಡಾವಣೆ, ಭೈರವೇಶ್ವರನಗರ ಭಾಗದ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು ಹಾಗೂ ಬಾಗಲಗುಂಟೆ ವಿಜಯಲಕ್ಷ್ಮಿ ಬಡಾವಣೆಯ ರಸ್ತೆಗಳ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಕರೋನಾ ಹಾಗೂ ಈ ಹಿಂದಿನ ಸರ್ಕಾರ ಅಭಿವೃದ್ಧಿಗೆ ನೀಡಿದ ಹಣವನ್ನ, ಸರ್ಕಾರ ತಡೆ ಹಿಡಿದಿದ್ದ ಕಾರಣ ಅಭಿವದ್ಧಿ ಕಾಮಗಾರಿ ವಿಳಂಬವಾಗಿವೆ, ಆದರೆ ನೆನ್ನೆ ಹೈಕೋರ್ಟ್ 1 ತಿಂಗಳೊಳಗೆ 110.75 ಕೋಟಿ ಹಣ ಬಿಡುಗಡೆಗೊಳಿಸುವಂತೆ ಆದೇಶಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದ್ದರೂ, ಕಾಣದ ಕೈಗಳು ಅನುದಾನವನ್ನು ತಡೆ ಹಿಡಿಯುವ ಕೆಲಸ ನಿರಂತರವಾಗಿ ಮಾಡುತ್ತಿವೆ, ಇಂತಹ ಕೆಲಸ ಮಾಡುವವರಿಗೆ ಜಗ್ಗುವುದು ಇಲ್ಲಾ- ಬಗ್ಗುವುದೂ ಇಲ್ಲಾ, ಇದರಿಂದ ನಮ್ಮ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಮೂಲಮಂತ್ರ ವಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಹಿರಿಯ ಮುಖಂಡರಾದ ಗುಂಡಪ್ಪ, ತಮ್ಮಣ್ಣ, ಹನುಮಂತರಾಜು, ಗ್ಯಾಸ್ ರಾಜಣ್ಣ, ಚಂದ್ರಣ್ಣ, ಮುದ್ದಹನುಮೇಗೌಡ, ಸಿತಾ ಮರಿಗೌಡ,ಸಿದ್ಧರಾಜು, ಜಯಣ್ಣ, ಸದಾಶಿವ, ರಾಣಿ ಪ್ರತಾಪ್, ನೂರಾರು ಸ್ಥಳೀಯ ಮುಖಂಡರು ಬಡಾವಣೆ ನಿವಾಸಿಗಳು ಹಾಜರಿದ್ದರು.




