ಪ್ರೀತಿ-ಪ್ರೇಮ ಹೆಸರಲ್ಲಿ ಮೋಸ ಕಾಮನ್. ಅಷ್ಟೇ ಅಲ್ಲ, ಪ್ರೀತಿಯ ನೆಪ ಲೈಂಗಿಕ ದೌರ್ಜನ್ಯಕ್ಕೂ ಕಾರಣವಾಗುತ್ತೆ. ಇದು ಸಹಜವಾಗಿ ಅಲ್ಲಿ ಇಲ್ಲಿ ಕೇಳುತ್ತಿದ್ದ ಸುದ್ದಿ. ಇಲ್ಲೊಬ್ಬ ಕಿರುತೆರೆ ನಟ ಪ್ರೀತಿ ಹೆಸರಲ್ಲಿ ತನ್ನ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಚರಿತ್ ಬಾಳಪ್ಪನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಕಿರುತೆರೆಯ ನಟರೆಂದರೆ ಸಾಕು ಅವರನ್ನು ಅಷ್ಟೇ ಗೌರವ ಮತ್ತು ಪ್ರೀತಿಯಿಂದ ಕಾಣುವ ಮನೆ ಮಂದಿ ಇದ್ದಾರೆ. ತಮ್ಮ ಮನೆ ಹುಡುಗ ಅನ್ನುವ ರೀತಿಯಲ್ಲೇ ಕಿರುತೆರೆ ನಟರನ್ನು ಮೆಚ್ಚುವ ಅದೆಷ್ಟೋ ಜನರಿದ್ದಾರೆ. ಆದರೆ, ಕನ್ನಡದ ಮುದ್ದು ಲಕ್ಷ್ಮಿ, ಲವಲವಿಕೆ, ಸರ್ಪ ಸಂಬಂಧ ಸೇರಿದಂತೆ ತೆಲುಗಿನ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಚರಿತ್ ಬಾಳಪ್ಪ ಮಾತ್ರ ತಾನು ಪ್ರೀತಿಸುತ್ತಿದ್ದ ಗೆಳತಿ ಮೇಲೆಯೇ ಪ್ರೀತಿ ನೆಪವೊಡ್ಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆ ಆರೋಪದಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇಷ್ಟಕ್ಕೂ ಯಾರು ಈ ಚರಿತ್ ಬಾಳಪ್ಪ?
ಈ ಡೀಟೇಲ್ಸ್ ನೋಡಿ… ಕನ್ನಡದ ಕಿರುತೆರೆಯಲ್ಲಿ ಮುದ್ದುಲಕ್ಷ್ಮಿ, ಲವಲವಿಕೆ ಹಾಗು ಸರ್ಪ ಸಂಬಂಧ ಸೀರಿಯಲ್ಸ್ ಸಾಕಷ್ಟು ಸುದ್ದಿ ಮಾಡಿದ್ದವು. ಆ ಧಾರಾವಾಹಿಯ ಹೀರೋ ಈ ಚರಿತ್ ಬಾಳಪ್ಪ. ಕನ್ನಡ ಮಾತ್ರವಲ್ಲ, ತೆಲುಗಿನ ಅನೇಕ ಸೀರಿಯಲ್ ಗಳಲ್ಲೂ ಈ ಚರಿತ್ ಬಾಳಪ್ಪ ಕಾಣಿಸಿಕೊಂಡಿದ್ದಾರೆ. ಕಿರುತೆರೆ ನಟನಾಗಿದ್ದ ಕಾರಣ, ಚರಿತ್ ಬಾಳಪ್ಪ ಅವರು ಸಹಜವಾಗಿಯೇ ಖ್ಯಾತಿ ಪಡೆದಿದ್ದರು. ಫೇಸ್ ವ್ಯಾಲ್ಯು ಇದ್ದುದರಿಂದ, ಅವರನ್ನು ನೋಡಿದ ಅನೇಕರು ಸೆಲ್ಫಿ ಫೋಟೋ ತೆಗೆಸಿಕೊಳ್ಳುತ್ತಿದ್ದದ್ದು ಕಾಮನ್. ನಟನೆಂಬ ಕಾರಣಕ್ಕೋ, ಅಥವಾ ಅವರು ಇಷ್ಟವಾದರೂ ಎಂಬ ಕಾರಣಕ್ಕೋ ಹುಡುಗಿಯೊಬ್ಬಳು ಪ್ರೀತಿ ಶುರುವಿಟ್ಟುಕೊಂಡಿದ್ದಾಳೆ. ಅತ್ತ, ನಟ ಚರಿತ್ ಬಾಳಪ್ಪ ಕೂಡ ಪ್ರೀತಿಗೆ ಜೈ ಅಂದಿದ್ದಾನೆ.
ಹೀಗೆ ಹಲವು ದಿನಗಳನ್ನು ಕಳೆದ ಚರಿತ್, ನಿನ್ನನ್ನು ಪ್ರೀತಿಸುತ್ತೇನೆ ಅಂತ ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲ, ಆ ಯುವತಿ ವಾಸಿಸುತ್ತಿದ್ದ ಮನೆಗೂ ನುಗ್ಗಿ, ಸಹಚರರ ಜೊತೆ ಕಿರುಕುಳವನ್ನೂ ನೀಡಿದ್ದಾನೆ. ಅದಷ್ಟೇ ಅಲ್ಲ, ಹಣಕ್ಕೂ ಬೇಡಿಕೆ ಇಟ್ಟಿದ್ದಾನೆ. ನೀನು ಹಣ ಕೊಡದೇ ಇದ್ದರೆ, ನಿನ್ನ ಖಾಸಗಿ ಕ್ಷಣದ ಫೋಟೋ ಹಾಗೂ ವಿಡಿಯೋವನ್ನೆಲ್ಲ ಹರಿದು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತು ಸ್ವತಃ ಆ ಹುಡುಗಿಯೇ ಪೊಲೀಸರ ಮುಂದೆ ಆರೋಪ ಮಾಡಿದ್ದಾಳೆ.
ಇದಕ್ಕೂ ಮುನ್ನ. 2017ರಲ್ಲಿ ನಟಿ ಮಂಜುಶ್ರೀ ಜೊತೆ ಚರಿತ್ ಬಾಳಪ್ಪ ಅವರಿಗೆ ವಿವಾಹ ಆಗಿತ್ತು. 2022ರ ಬಳಿಕ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ನಂತರ ಅವರಿಬ್ಬರು ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. ಕೋರ್ಟ್ ಆಜ್ಞೆಯಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಮಾಜಿ ಪತ್ನಿ ಮಂಜುಶ್ರೀ ಅವರಿಗೂ ಚರಿತ್ ಬೆದರಿಕೆ ಹಾಕಿದ್ದರಂತೆ. ಈ ಬಗ್ಗೆ ಚರಿತ್ ವಿರುದ್ಧ ಪತ್ನಿ ಮಂಜುಶ್ರೀ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು.
ಸದ್ಯ ಗೆಳತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಹಾಗು ಕೊಲೆ ಬೆದರಿಕೆ ಮತ್ತು ಹಲ್ಲೆ ಮಾಡಿರುವುದಾಗಿ ಆತನ ವಿರುದ್ಧ ಆರೋಪ ಮಾಡಲಾಗಿದೆ. ಹೀಗಾಗಿ ಚರಿತ್ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರಿಗೆ ದೂರು ನೀಡಿರುವ ಸಂತ್ರಸ್ಥೆ, ಹೆಣ್ಣು ಮಕ್ಕಳ ಬಗ್ಗೆ ಅಸಹ್ಯ ಹುಟ್ಟಿಸುವಂತಹ ಮಾತುಗಳನ್ನಾಡುತ್ತಾನೆ. ವಿನಾಕಾರಣ ಬೆದರಿಕೆ ಹಾಕಿ, ಖಾಸಗಿ ಫೋಟೋ ಹರಿಬಿಡುವ ಬಗ್ಗೆ ಧಮ್ಮಿ ಹಾಕುತ್ತಾನೆ. ಹೆಚ್ಚು ಹಣ ಇರುವ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾನೆ ಎಂದು ದೂರಿದ್ದಾರೆ. ಅವನು ಮದ್ವೆಯಾಗಿರುವ ಹೆಂಡತಿಗೂ ಅವನ ಆಟಗಳು, ಹುಡುಗಿಯರ ಜೊತೆಗಿನ ಸುತ್ತಾಟ ಎಲ್ಲವೂ ಗೊತ್ತಾಗಿದ್ದರಿಂದ ಅವನ ಕಾಟ ಹೆ್ಚ್ಚಾಗಿ ರೋಸಿದ್ದರಿಂದಲೇ ಡಿವೋರ್ಸ್ ನೀಡಿದ್ದಾರೆ ಎನ್ನಲಾಗಿದೆ.
ಆತ ಜೋರಾಗಿ ಧಮ್ಕಿ ಹಾಕುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಆ ವೀಡಿಯೋದಲ್ಲಿ ನನ್ನ ಜೊತೆ ಮದ್ವೆಯಾಗಿ, ಬಾಗಿಲು ಹಾಕಿಕೊಂಡು ಯಾರೊಂದಿಗೆ ಮಾತನಾಡುತ್ತಿದ್ದೆ ಎಂದು ಜೋರು ಮಾಡುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅದೇನೆ ಇರಲಿ, ಫೇಸ್ ವ್ಯಾಲ್ಯು ಇದ್ದವರೇ ಇಂತಹ ಪ್ರಕರಣಗಳಲ್ಲಿ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಪ್ರೀತಿ, ಪ್ರೇಮ ಮೋಸ ಅನ್ನೋದು ಅಂತಹವರಿಗೆ ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಜನಪ್ರಿಯತೆಯ ಉತ್ತುಂಗದಲ್ಲಿರೋರೇ ಈ ರೀತಿ ಮಾಡಿದರೆ, ಸಾಮಾನ್ಯ ಜನರು ಹೆಂಗಿರಬೇಡ ಅನ್ನುವ ಪ್ರಶ್ನೆ ಎದ್ದಿದೆ.