ಭರಪೂರ ಪೋಷಕಾಂಶಗಳನ್ನು ಹೊಂದಿರುವ ಒಣ ಹಣ್ಣುಗಳಲ್ಲಿ ಖರ್ಜೂರ ಕೂಡ ಒಂದು. ಹಲವು ಆರೋಗ್ಯಕರ ಗುಣಗಳನ್ನು ಹೊಂದಿರುವ ಖರ್ಜೂರವನ್ನು ಸೇವಿಸುವುದರಿಂದ ಉತ್ತಮ ಲಾಭ ಪಡೆಯಬಹುದು.
ಹಾಗಾದ್ರೆ ಖರ್ಜೂರ ಸೇವನೆಯಿಂದಾಗುವ ಲಾಭಗಳೇನು ನೋಡೋಣ ಬನ್ನಿ..
1.. ರಕ್ತ ಹೆಚ್ಚಿಸುವಲ್ಲಿ ಖರ್ಜೂರ ಸೇವನೆ ಸಹಕಾರಿಯಾಗಿದೆ. ರಕ್ತಕ್ಕೆ ಸಂಬಂಧಿಸಿದ ಖಾಯಿಲೆ, ಹಿಮೋಗ್ಲೋಬಿನ್ ಕಡಿಮೆ ಇದ್ದರೆ ಖರ್ಜೂರ ಸೇವನೆ ಮಾಡಬೇಕು. ಅಲ್ಲದೇ ನಿಶ್ಯಕ್ತಿ ಉಂಟಾದಲ್ಲಿ ಖರ್ಜೂರ ಸೇವಿಸಿ.
2.. ಖರ್ಜೂರದ ಸೇವನೆ ನಮ್ಮನ್ನು ಶಕ್ತಿಯುತವನ್ನಾಗಿಸುವುದಲ್ಲದೇ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಖರ್ಜೂರ ರಕ್ತಸಂಚಾರ ಸರಿದೂಗಿಸುವ ಕೆಲಸವನ್ನು ಮಾಡುತ್ತದೆ. ರಕ್ತ ಸಂಚಾರ ಸರಿಯಿದ್ದಲ್ಲಿ, ಆಕ್ಸಿಜನ್ ಕೊರತೆ ಉಂಟಾಗುವುದಿಲ್ಲ.
3.. ರಂಜಾನ್ ವೇಳೆ ಮುಸ್ಲಿಂ ಬಾಂಧವರು ಉಪವಾಸ ಮುಗಿದ ಮೇಲೆ ಮೊದಲು ಖರ್ಜೂರ ಸೇವಿಸುತ್ತಾರೆ. ಇದಕ್ಕೆ ಕಾರಣ ಉಪವಾಸವಿದ್ದಾಗ ಆಗಿದ್ದ ನಿಶಕ್ತಿಯನ್ನ ಮತ್ತೆ ಸರಿಪಡಿಸುವ ತಾಕತ್ತು ಖರ್ಜೂರದಲ್ಲಿದೆ.
4.. ಫ್ರೂಟ್ ಸಲಾಡ್, ಪಾಯಸ, ಮಿಲ್ಕ್‌ಶೇಕ್ ಮಾಡುವಾಗ ಖರ್ಜೂರ ಬಳಸಿ. ಇದರಿಂದ ಆಹಾರವೂ ರುಚಿಕರವಾಗಿರುವುದಲ್ಲದೇ, ಆರೋಗ್ಯಕರವೂ ಆಗಿರುತ್ತದೆ.
5.. ಮಕ್ಕಳಿಗೆ ಹಾಲುಣಿಸುವ ಮಹಿಳೆಯರು ಖರ್ಜೂರ ತಿಂದರೆ, ಇದರಿಂದ ತಾಯಿ- ಮಗು ಇಬ್ಬರ ದೇಹಕ್ಕೂ ಲಾಭವಿದೆ. ಇದರಿಂದ ಮಕ್ಕಳ ಮೂಳೆ ಧೃಡಗೊಳ್ಳುತ್ತದೆ.
6.. ಶಾಲೆಗೆ ಹೋಗುವ ಮಕ್ಕಳಿಗೆ ಖರ್ಜೂರ ತಿನ್ನಲು ಕೊಡಿ. ಶಾಲೆಗೆ ಹೋಗುವಾಗ ಬ್ಯಾಗ್ ಹೊತ್ತ ಮಕ್ಕಳ ಭುಜ ಬಾಗಿದಂತಾಗಿರುತ್ತದೆ. ಈ ವೇಳೆ ಖರ್ಜೂರ ತಿನ್ನುವುದರಿಂದ ಮೂಳೆಗಳು ಗಟ್ಟಿಗೊಳ್ಳುತ್ತದೆ.
7.. ಖರ್ಜೂರವನ್ನು ತುಪ್ಪದಲ್ಲಿ ನೆನೆಸಿಟ್ಟು ತಿನ್ನುವುದರಿಂದ ತುಪ್ಪ ಮತ್ತು ಖರ್ಜೂರ ಎರಡರ ಪೋಷಕಾಂಶಗಳು ದೇಹಕ್ಕೆ ದೊರಕುತ್ತದೆ.
8.. ಪ್ರತಿದಿನ 3ರಿಂದ 4 ಖರ್ಜೂರ ತಿನ್ನಿ. ಅದಕ್ಕಿಂತ ಹೆಚ್ಚು ತಿನ್ನಬೇಡಿ. ಅದೂ ಅಲ್ಲದೇ, ನಿಮಗೆ ಖರ್ಜೂರ ತಿಂದರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆಯಿರಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ