Health tips :
ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಕ್ಕಳಿಂದ ಇಡಿದು ದೊಡ್ಡವರವರೆಗೆ ಎಲ್ಲರೂ ಕ್ಯಾರೆಟ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಮಿತವಾಗಿ ತಿಂದರೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ, ಹಾಗೂ ಈ ವಿಷಯವನ್ನು ಪ್ರಯೋಗ ಮಾಡಿ ನಿರೂಪಿಸಿದ್ದಾರೆ. ಕ್ಯಾರಟ್ಅನ್ನು ಮಿತವಾಗಿ ತಿಂದರೆ ಔಷಧಿ ಅದಕ್ಕೂ ಮೀರಿ ತಿಂದರೆ ವಿಷ ಎಂದು ವೈದ್ಯರು ಹೇಳುತ್ತಾರೆ. ಕ್ಯಾರೆಟ್ ನಲ್ಲಿರುವ ಫೈಬರ್ ಅಂಶ ಮತ್ತು ಪೋಷಕಾಂಶಗಳು ರಕ್ತದ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿದೆ. ಅದೇ ಕ್ಯಾರೆಟ್ಅನ್ನು ಜಾಸ್ತಿ ಸೇವಿಸಿದರೆ ಮಕ್ಕಳು, ಹಾಗೂ ದೊಡ್ಡವರು ಪ್ರಾಣವನ್ನೇ ಕಳೆದುಕೊಳ್ಳಬಹುದು ,ಕ್ಯಾರೆಟ್‌ನಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್ ಅಧಿಕವಾಗಿರುತ್ತದೆ. ಇವುಗಳು ಮಾನವನ ದೇಹಕ್ಕೆ ಶಕ್ತಿಯನ್ನು ಒದಗಿಸಿ ಆರೋಗ್ಯವಾಗಿಡುತ್ತದೆ. ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕಾರ್ಬೋಹೈಡ್ರೇಟ್ ನೀಡಿದರೆ ಆರೋಗ್ಯ ಸಮಸ್ಯೆಗಳು ಕಾಡುತ್ತದೆ.
ಮಧುಮೇಹ ಇರುವವರು ಕ್ಯಾರೆಟ್ ತಿನ್ನುವುದರಿಂದ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಕ್ಯಾರೆಟ್ನಲ್ಲಿರುವ ಗ್ಲೂಕೋಸ್ ಪ್ರಮಾಣವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ ,ಹಾಗಾಗಿ ಶುಗರ್ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚಿನ ಗ್ಲೂಕೋಸ್ ಇರುವ ಕ್ಯಾರೆಟ್ ಅನ್ನು ದಿನವೂ ಸೇವಿಸುವುದರಿಂದ ಶುಗರ್ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಗರ್ಭಿಣಿಯರು ಹೆಚ್ಚು ಕ್ಯಾರೆಟ್ ತಿನ್ನುವುದು ಒಳ್ಳೆಯದಲ್ಲ. ಹೆಚ್ಚು ಕ್ಯಾರೆಟ್ ಸೇವಿಸುವುದರಿಂದ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಹೆರಿಗೆಯಾದ ನಂತರ ರಕ್ತ ಹೆಚ್ಚಲು ಮಿತವಾಗಿ ಕ್ಯಾರೆಟ್ ಸೇವಿಸಬೇಕು ಕ್ಯಾರೆಟ್ ನಿಂದ, ವಿಶೇಷವಾಗಿ ಕ್ಯಾರೆಟ್ ಹಲ್ವಾ ತಯಾರಿಸುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಹಾನಿಕಾರಕ ಎನ್ನುತ್ತಾರೆ ವೈದ್ಯರು. ಕ್ಯಾರೆಟ್ ಆರೋಗ್ಯಕ್ಕೆ ಒಳ್ಳೆಯದು ಆದರೆ ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದಿರಿ.