Health Tips: ನಮ್ಮ ದೇಹದ ಎಲ್ಲ ಭಾಗಗಳೂ ಆರೋಗ್ಯವಾಗಿ ಇರುವುದು ತುಂಬಾ ಮುಖ್ಯ. ಯಾವುದಾದರೂ ಒಂದು ಭಾಗದಲ್ಲಿ ಹೊಡೆತ ಬಿದ್ದರೂ, ಜೀವನದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೃದಯ, ಲಿವರ್, ಕೈ, ಕಾಲು, ಕಿಡ್ನಿ ಎಲ್ಲದ ಆರೋಗ್ಯ ಚೆನ್ನಾಗಿರಿಸಿಕೊಳ್ಳುವುದು ಮುಖ್ಯ. ಕಿಡ್ನಿಯ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನಾವು ಯಾವ ಆಹಾರ ಸೇವನೆ ಮಾಡಬೇಕು ಅಂತಾ ತಿಳಿಯೋಣ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಿಂದ ಪದಾರ್ಥ ಮಾಡಿ ಸೇವಿಸುವುದರಿಂದ ನಮ್ಮ ಕಿಡ್ನಿ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೇ, ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕೂಡ ಹೆಚ್ಚಾಗುತ್ತದೆ. ದೇಹದಲ್ಲಿ ನಿಶ್ಶಕ್ತಿಯಾಗುತ್ತಿದೆ ಎಂದಾದಲ್ಲಿ, ಪಾಲಕ್ ಪದಾರ್ಥ ಸೇವಿಸಿದರೆ, ನಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಆದರೆ ಪಾಲಕ್ ಸೊಪ್ಪನ್ನು ಬಳಸುವಾಗ, ಚೆನ್ನಾಗಿ ತೊಳೆದು, ಬಿಸಿನೀರಿನಲ್ಲಿ ಹಾಕಿ ತೆಗೆದು, ಬಳಸಬೇಕು. ಪಾಲಕ್ ಸೊಪ್ಪಿನಲ್ಲಿ ವಿಟಾಮಿನ್ ಎ, ಬಿ, ಕೆ ಇರುವುದರಿಂದ ಇದು ಕಿಡ್ನಿಯ ಆರೋಗ್ಯವನ್ನು ಚೆನ್ನಾಗಿ ರಕ್ಷಣೆ ಮಾಡುತ್ತದೆ.
ಕೊತ್ತೊಂಬರಿ ಸೊಪ್ಪು, ಎಲೆಕೋಸು, ಬೂದುಗುಂಬಳಕಾಯಿ ಸೇವನೆಯಿಂದಲೂ ನಮ್ಮ ಕಿಡ್ನಿಯ ಆರೋಗ್ಯ ಚೆನ್ನಾಗಿರುತ್ತದೆ. ಏಕೆಂದರೆ, ಈ ಮೂರು ತರಕಾರಿಗಳು ಮೂತ್ರದ ಮೂಲದ, ನಮ್ಮ ದೇಹದಲ್ಲಿರುವ ಕಲ್ಮಶ ಹೊರಹೋಗಲು ಅನುಕೂಲ ಮಾಡಿಕೊಡುತ್ತದೆ. ಹಾಗಾಗಿ ಆದಷ್ಟು ಆರೋಗ್ಯಕರ ರೀತಿಯಲ್ಲಿ ಕೊತ್ತೊಂಬರಿ ಸೊಪ್ಪು, ಎಲೆಕೋಸು, ಬೂದುಗುಂಬಳಕಾಯಿ ಬಳಕೆ ಮಾಡುವುದು ಒಳ್ಳೆಯದು.
ಇನ್ನೊಂದು ವಿಚಾರ ಅಂದ್ರೆ, ನಮಗೆ ಸಾಧ್ಯವಾದಷ್ಟು ನೀರಿನ ಸೇವನೆ ಮಾಡಬೇಕು. ಮೂತ್ರವನ್ನು ತಡೆದಿಟ್ಟುಕೊಳ್ಳಬಾರದು. ಮೂತ್ರ ತಡೆದಿಟ್ಟುಕೊಳ್ಳುವುದರಿಂದ ಸೋಂಕು ಬರುವುದಲ್ಲದೇ, ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯಬೇಕು ಮತ್ತು ಮೂತ್ರ ತಡೆದುಕೊಳ್ಳಬಾರದು. ಇನ್ನು ಸಕ್ಕರೆಯ ಬಳಕೆ ಕಡಿಮೆ ಮಾಡಿಬಿಡಿ. ಅಥವಾ ಸಕ್ಕರೆ ಸೇವಿಸುವುದನ್ನೇ ಬಿಟ್ಟುಬಿಡಿ. ಸಕ್ಕರೆ ಬದಲಾಗಿ, ಉತ್ತಮ ಕ್ವಾಲಿಟಿಯ ಬೆಲ್ಲದ ಸೇವನೆ ಮಾಡಿ.





