Health Tips: ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತದೆ. ಅದರಲ್ಲೂ ಆಹಾರ ಸೇವನೆ ಮತ್ತು ನೀರಿನ ಸೇವನೆಯಿಂದಲೇ ನಮಗೆ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಆರೋಗ್ಯಕರ ಆಹಾರ ಮತ್ತು ಬಿಸಿ ಮಾಡಿ, ತಣಿಸಿದ ನೀರನ್ನೇ ಕುಡಿಯಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಬಿಸಿ ಬಿಸಿ ಆಹಾರವನ್ನೇ ಸೇವಿಸಬೇಕು. ಬಿಸಿ ನೀರನ್ನೇ ಕುಡಿಯಬೇಕು. ಆಹಾರವನ್ನು ಪ್ರಿಜ್‌ನಲ್ಲಿ ಇರಿಸಿ, ಮತ್ತೆ ಬಿಸಿ ಮಾಡಿ ತಿನ್ನುವುದು ತಪ್ಪು. ಹಾಗಾಗಿ ಫ್ರೆಶ್ ಆಹಾರವನ್ನು ಸಿದ್ಧಪಡಿಸಿ, ಅದನ್ನೇ ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ, ಬಿಸಿ ಬಿಸಿ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
ಫ್ರಿಜ್‌ನಲ್ಲಿ ಇರಿಸಿದ ಆಹಾರವನ್ನು ಬಿಸಿ ಮಾಡಿ ತಿನ್ನುವುದರಿಂದ, ನಮ್ಮ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಅಲ್ಲದೇ, ಫ್ರಿಜ್‌ನಲ್ಲಿ ಇರಿಸಿದ ನೀರು, ಪಾನೀಯದ ಸೇವನೆಯಿಂದಲೂ ನಮ್ಮ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಹಾಗಂತ, ಬಾಯಿ ಸುಡುವಷ್ಟು ಬಿಸಿ ಪದಾರ್ಥ, ಬಿಸಿ ನೀರು ಕುಡಿಯುವಂತಿಲ್ಲ. ಹದವಾಗಿ ಬಿಸಿಯಾಗಿರುವುದನ್ನೇ ಸೇವಿಸಬೇಕು.
ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಆರೋಗ್ಯ ಸಮಸ್‌ಯೆ ಅಂದ್ರೆ, ಬೇಧಿಯಾಗೋದು, ಹೊಟ್ಟೆ ನೋವು, ಲೂಸ್‌ಮೋಷನ್ ಇತ್ಯಾದಿ. ಹಾಗಾಗಿ ಉತ್ತಮ, ಆರೋಗ್ಯಕರ ಆಹಾರಗಳನ್ನೇ ಸೇವಿಸಬೇಕು. ನಿನ್ನೆ ಪದಾರ್ಥ ಇಂದು, ಇಂದಿನ ಪದಾರ್ಥ ನಾಳೆ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.




