Recipe: ಸಂಜೆ ಹೊತ್ತಲ್ಲಿ ಅಥವಾ ರಾತ್ರಿ ಏನಾದ್ರೂ ಸ್ಪೆಶಲ್ ಆಗಿ ಆರೋಗ್ಯಕರವಾದ, ರುಚಿಯಾದ ತಿಂಡಿ ಮಾಡಬೇಕು ಎನ್ನಿಸಿದ್ದಲ್ಲಿ, ನೀವು ಆರೋಗ್ಯಕರವಾದ ಹೆಸರು ಕಾಳಿನ ಢೋಕ್ಲಾ ಮಾಡಬಹುದು. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಏನೇನು ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಹೆಸರು ಕಾಳು, ಎರಡರಿಂದ ಮೂರು ಹಸಿಮೆಣಸಿನಕಾಯಿ, ಸಣ್ಣ ತುಂಡು ಶುಂಠಿ, ಅರ್ಧ ಕಪ್ ಮೊಸರು, ಒಂದು ಕಪ್ ರವೆ, ಕೊಂಚ ಕೊತ್ತೊಂಬರಿ ಸೊಪ್ಪು, ಒಂದು ಟೇಬಲ್ ಸ್ಪೂನ್ ಈನೋ ಅಥವಾ ಬೇಕಿಂಗ್ ಸೋಡಾ, ಎರಡರಿಂದ ಮೂರು ಸ್ಪೂನ್ ಎಣ್ಣೆ, ಕರಿಬೇಕು, ಸಾಸಿವೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಹೆಸರು ಕಾಳು, ಹಸಿ ಮೆಣಸು, ಶುಂಠಿ, ಮೊಸರು ಸೇರಿಸಿ, ಮಿಕ್ಸಿ ಜಾರ್‌ಗೆ ಹಾಕಿ, ರುಬ್ಬಿ. ಈ ಮಿಶ್ರಣಕ್ಕೆ ರವಾ ಮಿಕ್ಸ್ ಮಾಡಿ, 20 ನಿಮಿಷ ಪಕ್ಕಕ್ಕಿರಿಸಿ. ಬಳಿಕ ಈ ಮಿಶ್ರಣಕ್ಕೆ ಉಪ್ಪು, ಎಣ್ಣೆ, ಬೇಕಿಂಗ್ ಸೋಡಾ ಮಿಕ್ಸ್ ಮಾಡಿ. ಈಗ ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ, 10 ನಿಮಿಷ ಪ್ರಿಹೀಟ್ ಮಾಡಿ, ಬಳಿಕ ಇಡ್ಲಿ ತಟ್ಟೆಗೆ ಅಥವಾ ದೊಡ್ಡ ಪ್ಲೇಟ್‌ಗೆ ಎಣ್ಣೆ ಸವರಿ, ಈ ಮಿಶ್ರಣವನ್ನು ಹಾಕಿ, ಇಡ್ಲಿ ಬೇಯಿಸುವಷ್ಟು ಹೊತ್ತು, ಬೇಯಿಸಿದರೆ, ಡೋಕ್ಲಾ ರೆಡಿ.
ನೀವು ಇದನ್ನು ಕಾಯಿಚಟ್ನಿಯೊಂದಿಗೆ ತಿನ್ನಬಹುದು. ಅಥಾವ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಟ್ಟು, ಜೊತೆಗೆ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಗಾರ್ನಿಶ್ ಮಾಡಿ, ಢೋಕ್ಲಾ ಮಾಡಿ, ತಿನ್ನಬಹುದು.