Karnataka News:
ಗದಗ ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿದ ಮಹಾ ಮಳೆಗೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿನ ಪೌರಾಣಿಕ ಪ್ರಸಿದ್ಧ ಅಗಸ್ತ್ಯ ತೀರ್ಥ ದೇವಾಲಯದ ಹಿಂದಿನ ಭಾಗದ ಗೋಡೆ ಕುಸಿದಿದೆ. ಗೋಡೆ ಕುಸಿದ ಕಾರಣ ಈಶ್ವರನ ಮೂರ್ತಿ ಮುಚ್ಚಿಹೋಗಿದೆ. ಅಗಸ್ತ್ಯ ಮುನಿಗಳು ಈ ಜಾಗದಲ್ಲಿ ತಪಸ್ಸು ಮಾಡಿದ್ದರು ಎಂಬ ಪೌರಾಣಿಕ ಹಿನ್ನೆಲೆ ಹೊಂದಿದ್ದ ಸನ್ನಿಧಿ ಮುಚ್ಚಿ ಹೋಗಿದೆ ಎನ್ನಲಾಗಿದೆ.
ಕಳೆದ ಕೆಲ ದಿನದಿಂದ ಈ ದೇವಸ್ಥಾನದ ಗೋಡೆ ಶಿಥಿಲಾವಸ್ಥೆಯಲ್ಲಿತ್ತು. ಆದ್ರೆ ಸತತ ಮಳೆಯಿಂದ ಗೋಡೆ ಕುಸಿದು ದೇವಸ್ಥಾನ ವಿರೂಪಗೊಂಡಿದೆ. ಡಿಸಿ ವೈಶಾಲಿ ಎಂಎಲ್, ಪುರಸಭೆ ಅಧ್ಯಕ್ಷೆ ಅಶ್ವಿನಿ ಎ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐತಿಹಾಸಿಕ ಹಿನ್ನೆಲೆಯ ದೇವಸ್ಥಾನ ಸಂರಕ್ಷಣೆಗೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
17 ಯುವತಿಯರು ಅರ್ಧ ಗಂಟೆ ಲಿಫ್ಟ್ ನಲ್ಲಿ ಲಾಕ್…! ಮುಂದೇನಾಯ್ತು ಗೊತ್ತಾ..?!
ಭಾರತದ 7ನೇ ಅತಿ ದೊಡ್ಡ ನದಿ ದಾಟಿ ನಾಡಿಗೆ ಕಾಡಾನೆ ಎಂಟ್ರಿ…! ಆಹಾರಕ್ಕಾಗಿ ಆನೆ ಪರದಾಟ…!