Wednesday, September 11, 2024

Latest Posts

ಗೃಹಲಕ್ಷ್ಮೀ ಹಣ ಬರುವುದು ತಡವಾಗುತ್ತಿರುವುದು ಏಕೆ ಅನ್ನೋ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ

- Advertisement -

Political News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮದವರ ಜೊತೆ ಮಾತನಾಡಿದ್ದು,ಗೃಹಲಕ್ಷ್ಮೀ ಹಣ ಬರುತ್ತಿರುವುದು ಏಕೆ ತಡವಾಗುತ್ತಿದೆ ಅಂತಾ ಕಾರಣ ಹೇಳಿದ್ದಾರೆ.

ಹಲವು ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ಬರುವುದು ನಿಂತು ಹೋಗಿದೆ. ಯಾಕೆ ಖಾತೆಗೆ ಹಣ ಬರುತ್ತಿಲ್ಲವೆಂದು ಚಿಂತೆಯಲ್ಲಿದ್ದು, ಇದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ನೀಡಿದ್ದಾರೆ. ಗೃಹಲಕ್ಷ್ಮೀ ಖಾತೆಗೆ ಹಣ ಹಾಕಲು ಪ್‌ರತೀ ತಿಂಗಳು 2,400 ಕೋಟಿ ಖರ್ಚು ಮಾಡುತ್ತಿದ್ದು, ಇಷ್ಟು ದೊಡ್ಡ ಮೊತ್ತದ ಹಣವಾಗಿರುವ ಕಾರಣ, ಅದು ಸ್ಥಳೀಯ ಬ್ಯಾಂಕ್‌ಗೆ ಹೋಗಿ, ಯಜಮಾಾನಿಯರ ಖಾತೆಗೆ ಹೋಗಲು, ಸಮಯ ತೆಗೆದುಕೊಳ್ಳುತ್ತದೆ.

ನಾವು ಬ್ಯಾಂಕ್‌ಗಳಿಗೆ ಹಣವನ್ನು ತಲುಪಿಸಿರುತ್ತೇವೆ. ಆದರೆ ಅಲ್ಲಿಂದ ಖಾತೆಗೆ ಹೋಗಲು, ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಖಾತೆಗೆ ಗೃಹಲಕ್ಷ್ಮೀ ಹಣ ಬರುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಅಲ್ಲದೇ, ಈ ಬಗ್ಗೆ ಮಾಹಿತಿ ಕೇಳಲು, ಒಂದು ದಿನಕ್ಕೆ 500 ಕ್ಕೂ ಹೆಚ್ಚು ಕರೆಗಳು ಬರುತ್ತದೆ. ಓರ್ವ ಸಚಿವೆಯಾಗಿ ನಾನು ಇದಕ್ಕೆಲ್ಲ ಉತ್ತರ ನೀಡುತ್ತಿದ್ದೇನೆ. ಹಣ ವರ್ಗಾಾವಣೆಾಗುತ್ತದೆ. ಏನೇನು ತೊಂದರೆಯಾಗಿರಬಹುದು ಎಂದು ತಿಳಿಸಿ ಹೇಳುತ್ತೇನೆ. ನಾವು ಎಷ್ಟು ಬೇಗ ಹಣ ವರ್ಗಾವಣೆ ಮಾಡಿದರೂ, ಅದು ಖಾತೆಗೆ ಹೋದಲು 10ರಿಂದ 12 ದಿನ ತೆಗೆದುಕೊಳ್ಳುತ್ತದೆ ಎಂದು ಸಚಿವೆ ಹೇಳಿದ್ದಾರೆ.

- Advertisement -

Latest Posts

Don't Miss