Monday, April 14, 2025

Latest Posts

ಗಂಡನಿಂದ ಪ್ರತಿ ತಿಂಗಳು 6 ಲಕ್ಷ ಬೇಕು – ಮಹಿಳೆಗೆ ಹೈಕೋರ್ಟ್ ತರಾಟೆ

- Advertisement -

ತನ್ನಿಂದ ದೂರವಾದ ಪತಿಯಿಂದ ಪ್ರತಿ ತಿಂಗಳು 6 ಲಕ್ಷ ರೂಪಾಯಿ ಜೀವನಾಂಶ ಕೋರಿದ ಪತ್ನಿಯ ನಡೆಗೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಷ್ಟು ಹಣ ಬೇಕಾದ್ರೆ ತಾನೇ ದುಡಿಯುವುದು ಉತ್ತಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿದ್ದ ಪತ್ನಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ ಅವರಿದ್ದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರಿಗೆ ತರಾಟೆಗೆ ತೆಗೆದುಕೊಂಡಿದೆ. ಮಹಿಳೆಯ ಖರ್ಚಿಗೆ ಪ್ರತಿ ತಿಂಗಳಿಗೆ 6,16,300 ಬೇಕೇ? ಆಕೆಗೆ ಅಷ್ಟೊಂದು ಹಣದ ಅಗತ್ಯವೇನು ಪತಿ 10 ಕೋಟಿ ಸಂಪಾದಿಸಬಹುದು, ಹಾಗೆಂದು ಆಕೆಗೆ 5 ಕೋಟಿ ಕೊಡೋಕೆ ಆಗುತ್ತಾ? ಮಹಿಳೆ ತನಗಾಗಿ ತಿಂಗಳಿಗೆ ಇಷ್ಟು ಖರ್ಚು ಮಾಡುತ್ತಾರೆಯೇ? ಹಾಗಾದರೆ ಅರ್ಜಿದಾರರೇ ಅಷ್ಟು ಹಣ ಸಂಪಾದಿಸಲಿ.

 

ದಾವೆದಾರರು ಚೌಕಾಸಿ ನಡೆಸಲು ನ್ಯಾಯಾಲಯ ಮಾರುಕಟ್ಟೆಯಲ್ಲ ಎಂದು ಲಲಿತಾ ಅವರ ಪೀಠ ಗರಂ ಆಗಿದೆ.
ಅರ್ಜಿದಾರರ ಪರ ವಕೀಲರ ವಾದವೇನು ಅನ್ನೋದನ್ನ ನೋಡೋದಾದ್ರೆ, ಅರ್ಜಿದಾರೆಗೆ ಪೌಷ್ಟಿಕಾಂಶಯುಕ್ತ ಆಹಾರ ಬೇಕಿದೆ. ಈಗ ಅವರು ಹೊರಗಡೆ ಊಟ ಮಾಡುವಂತಾಗಿದೆ. ಊಟಕ್ಕೆ ತಿಂಗಳಿಗೆ 40,000 ಬೇಕಿದೆ. ಅರ್ಜಿದಾರರ ಪತಿ ಪ್ರತಿದಿನ ಬ್ರಾಂಡೆಡ್‌ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಅವರ ಪತಿ ಧರಿಸುವ ಶರ್ಟಿನ ಬೆಲೆ 10,000 ಇದೆ. ಆದರೆ ಅರ್ಜಿದಾರ ಮಹಿಳೆ ಹಳೆಯ ಬಟ್ಟೆ ಧರಿಸಬೇಕಿದೆ. ಬಟ್ಟೆ, ಸೌಂದರ್ಯ ವರ್ಧಕ, ಔಷಧಿಗಳ ವೆಚ್ಚಕ್ಕೆ 60,000 ಬೇಕು ಎಂದು ತಿಳಿಸಿದ್ರು. ಈ ಕುರಿತು ವಿಚಾರಣೆಯನ್ನು ಮುಂದೂಡಲಾಗಿದೆ.

- Advertisement -

Latest Posts

Don't Miss