Friday, September 20, 2024

Latest Posts

Maharashtra Bundh Restrain: ಮಹಾರಾಷ್ಟ್ರ ಬಂದ್​ಗೆ ಹೈಕೋರ್ಟ್​ ತಡೆ: ಶರದ್ ಪವಾರ್ ಹೇಳಿದ್ದೇನು..?

- Advertisement -

ಮುಂಬೈ: ಬದ್ಲಾಪುರ ಶಾಲೆಯಲ್ಲಿ 4 ವರ್ಷದ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಮಹಾ ವಿಕಾಸ್ ಅಘಾಡಿ(MVA) ಕರೆ ನೀಡಿದ್ದ ಆಗಸ್ಟ್​ 24ರ ಮಹಾರಾಷ್ಟ್ರ ಬಂದ್ (Maharashtra Bundh)​ಗೆ ಬಾಂಬೆ ಹೈಕೋರ್ಟ್ (Bombay High Court)​ ತಡೆ ನೀಡಿದೆ.

ಮಹಾರಾಷ್ಟ್ರ ಬಂದ್​​ ವಿಚಾರದಲ್ಲಿ ಮಧ್ಯಪ್ರವೇಶಿಸಿರೋ ಬಾಂಬೆ ಹೈಕೋರ್ಟ್​ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳು ರಾಜ್ಯ ಬಂದ್‌ಗೆ ಕರೆ ನೀಡದಂತೆ ಆದೇಶ ನೀಡಿದೆ. ಮಹಾರಾಷ್ಟ್ರ ಬಂದ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ (Chief Justice Devendra Kumar Upadhyaya) ನೇತೃತ್ವದ ಪೀಠ, ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳು ಬಂದ್‌ಗೆ ಬೆಂಬಲ ನೀಡದಂತೆ ಅಥವಾ ಭಾಗವಹಿಸದಂತೆ ನಿರ್ಬಂಧಿಸುತ್ತಿರುವುದಾಗಿ ತಿಳಿಸಿದೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರ ಬಂದ್​ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೈಕೋರ್ಟ್​ ಹೇಳಿದೆ. ಅಲ್ಲದೆ, ಕಾಂಗ್ರೆಸ್, ಶಿವಸೇನೆ (UBT) ಮತ್ತು ಎನ್​ಸಿಪಿಯ ಶರದ್ ಪವಾರ್​ಗೆ ಬಾಂಬೆ ಹೈಕೋರ್ಟ್​ ನೋಟಿಸ್ ನೀಡಿದೆ.

 

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಶರದ್ ಪವಾರ್ (Sharad Pawar)​, ಬಂದ್​ ಅನ್ನು ಹೈಕೋರ್ಟ್​ ಅಸಾಂವಿಧಾನಿಕ ಎಂದು ತೀರ್ಪು ನೀಡಿದೆ. ಸಮಯದ ಕೊರತೆ ಇರುವುದರಿಂದ ಬಾಂಬೆ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಭಾರತೀಯ ನ್ಯಾಯಾಂಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು,​ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಬಂದ್ ಕರೆಯನ್ನು ಹಿಂಪಡೆಯಬೇಕು ಎಂದು ಶರದ್​ ಪವಾರ್ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರ ಬಂದ್​ಗೆ ಬಾಂಬೆ ಹೈಕೋರ್ಟ್​ ತಡೆ ನೀಡಿದ ಬಳಿಕ ಕಾಂಗ್ರೆಸ್ ಬಂದ್​ಗೆ ನೀಡಿದ್ದ ಕರೆಯನ್ನು ಹಿಂಪಡೆದಿದೆ. ಆಗಸ್ಟ್​ 24ರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಘಟನೆಯನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್​ ಘಟಕದ ಮುಖ್ಯಸ್ಥ ನಾನಾ ಪಟೋಲೆ (Nana Patole) ತಿಳಿಸಿದ್ದಾರೆ.

- Advertisement -

Latest Posts

Don't Miss