Hassan News : ಅದು ಸಾವಿನ ಹೆದ್ದಾರಿ ಎಂದೇ ಖ್ಯಾತಿ ಪಡೆದ ರಸ್ತೆ. ಈ ರಸ್ತೆಯಲ್ಲಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಆದರೆ ಇನ್ನೂ ಕೂಡ ಮರಣ ಮೃದಂಗ ಮಾತ್ರ ನಿಂತಿಲ್ಲ. ಇಂತಹ ಸಮಸ್ಯೆಗೆ ಬ್ರೇಕ್ ಹಾಕಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಆ ಕಾಮಗಾರಿ ಜನರಿಗೆ ಅನುಮಾನ ಹುಟ್ಟು ಹಾಕಿದೆ.
ಇರುವೆಯಂತೆ ಸಾಗುತ್ತಿರುವ ಬೆಂಗಳೂರು – ಮಂಗಳೂರು ನಡುವೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿನಿಗದಿತ ಸಮಯಕ್ಕೆ ಮುಗಿಯುವುದೇ? ಇನ್ನೆಷ್ಟು ಜೀವಗಳನ್ನು ಬಲಿ ಪಡೆದ ನಂತರ ರಾಷ್ಟ್ರೀಯ ಹೆದ್ದಾರಿ ಸೌಭಾಗ್ಯ ಬಳಕೆದಾರರಿಗೆ ದೊರೆಯಲಿದೆ? ಇನ್ನು ಎಷ್ಟು ವರ್ಷಕ್ಕೆ ಹೆದ್ದಾರಿ ಗುತ್ತಿಗೆ ಅವಧಿ ಮುಗಿಯುತ್ತದೆ , ಕೇಂದ್ರ ಸರ್ಕಾರ ಟೋಲ್ (ಸುಂಕ) ವಸೂಲಿಗೆ ಏನು ಆಲೋಚನೆ ಮಾಡಿದೆ? ಇವು ಬಳಕೆದಾರರು ಮತ್ತು ಪ್ರಜ್ಞಾವಂತರಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಗಳಾಗಿವೆ.
ಹೌದು..ಕಳೆದ ಐದಾರು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಅಂತಿಮಗೊಂಡಿತ್ತು. ಮೊದಲ ಹಂತವಾಗಿ ಪಥಗಳ ಹೆದ್ದಾರಿ ಪೂರ್ಣಗೊಳಿಸಿಕೊಳ್ಳಲು ನಿರ್ಧರಿಸಿ ಕೆಲಸ ಆರಂಭವಾಗಿತ್ತು. ಈಗಲೂ ಭರದಿಂದ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಅದೆಷ್ಟು ವರ್ಷದ ಗಡುವು ನೀಡಿದೆ. ಆದರೆ ಇನ್ನೂ ಸ್ವಾಧೀನ ಪ್ರಕ್ರಿಯೆಗಳು ಅಂತಿಮಗೊಳ್ಳಬೇಕಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಗಡುವಿನ ಒಳಗೆ ಹೆದ್ದಾರಿ ಪೂರ್ಣಗೊಳ್ಳುವುದು ಅನುಮಾನ ಎಂಬ ಭಾವನೆ ಮೂಡುವಂತಾಗಿದೆ ಹಾಗೂ ಹಾಸನದಿಂದ ಸಕಲೇಶಪುರ ಮದ್ಯೆ ಇರುವ ಆಲೂರು ತಾಲ್ಲೂಕು ಕೇಂದ್ರ ಭಾಗದಲ್ಲಿ ದಿನನಿತ್ಯ ಸಾವಿರಾರು ವಾಹನ ಸವಾರರು ಸಂಚಾರ ನಡೆಸುತ್ತಾರೆ ಆದರೆ ಈ ರಸ್ತೆಗೆ ಒಂದು ತಿರುವು ಇದ್ದು ಇಲ್ಲಿ ಯಾವುದೇ ಅಂಡರ್ಪಾಸ್ ಹಾಗೂ ಮೇಲ್ಸೇ ಸೇತುವೆ ನಿರ್ಮಿಸದ ಕಾರಣ ತಾಲ್ಲೂಕಿನ ಜನರಲ್ಲಿ ಅನುಗುಣವಾಗಿ ಕಾಮಗಾರಿ ಮಾಡುತ್ತಾರೋ ಇಲ್ಲವೂ ಎಂಬುದು ಯಕ್ಷ ಪ್ರಶ್ನೆಯಾಗೆ ಉಳಿದಿದ್ದುಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ
ಒಟ್ಟಿನಲ್ಲಿ ಸಾವಿನ ಹೆದ್ದಾರಿಯ ಬಗ್ಗೆ ಕೇಂದ್ರ ಸರ್ಕಾರ ಮುತುವರ್ಜಿಯಿಂದ ಕಾಮಗಾರಿಗೆ ಚುರುಕು ನೀಡುವ ಕಾರ್ಯವನ್ನು ಮಾಡಬೇಕಿದೆ. ಅಲ್ಲದೇ ಆಗುವ ಅಪಘಾತಗಳಿಗೆ ಬ್ರೇಕ್ ಹಾಕಿ ಬಲಿಯಾಗುವ ಜೀವಗಳ ರಕ್ಷಣೆ ಮಾಡಬೇಕಿದೆ.
Vande Bharat Express : ಹುಬ್ಬಳ್ಳಿ : ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ
Television : ಟಿವಿ ದೋಷ ಸರಿಪಡಿಸದ ಝಿಯೋಮಿ ಕಂಪನಿಗೆ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ