Banglore news:
ಶಾಲೆಗಳಲ್ಲಿ ಹಿಜಾಬ್ ವಿಚಾರವಾಗಿ ಗಲಾಟೆ ಆರಂಭವಾಗಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು.ಆದೇ ಪ್ರಕಾರವಾಗಿ ಇದೀಗ ಗಣೇಶ ಗಲಾಟೆ ಶುರುವಾಗಿದೆ. ಮುಸ್ಲಿಂ ಮುಖಂಡರು ಗಣೇಶ ಕೂರಿಸುವ ವಿಚಾರವಾಗಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಶಾಲೆಗಳಲ್ಲಿ ಗಣೇಶ ಕೂರಿಸಲು ಅನುಮತಿ ನೀಡಿದ್ದೇ ಆದಲ್ಲಿ ನಮ್ಮ ಸಮುದಾಯಕ್ಕೂ ನಮಾಜ್ ಮಾಡಲು ಅನುಮತಿ ನೀಡಬೇಕು ಎಂಬುವುದಾಗಿ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಗಣೇಶ ಕೂರಿಸಲು ಅನುಮತಿ ನೀಡಲಾಗಿದ್ದರೂ ಈ ತಕರಾರು ಶುರುವಾಗಿದೆ. ಹಿಜಾಬ್ ಬೇಡ ಎಂದವರು ಗಣೇಶ ಕೂರಿಸಲು ಹೇಗೆ ಅವಕಾಶ ನೀಡಿದರು ಎಂಬ ಪ್ರಶ್ನೆಯನ್ನು ಮುಸ್ಲಿಂ ಮುಖಂಡರು ಶಿಕ್ಷಣ ಸಚಿವರಿಗೆ ಕೇಳುತ್ತಿದ್ದಾರೆ.
ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯಿಸುತ್ತಾ ಗಣೇಶ ಕೂರಿಸುವುದರಲ್ಲಿ ಯಾವ ಬದಲಾವಣೆಯೂ ಇಲ್ಲ ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಕೂರಿಸಲಾಗುವುದು. ಹೊಸದಾಗಿ ಗಣೇಶ ಕೂರಿಸುವವ ವಿಚಾರದಲ್ಲೂ ಗೊಂದಲ ಬೇಡ ಎಂದಿದ್ದಾರೆ.