Friday, July 18, 2025

Latest Posts

ಆನೆಗಳ ದಾಳಿಗೆ ಬೇಸತ್ತ ರೈತರು

- Advertisement -

www.karnatakatv.net : ಗುಂಡ್ಲುಪೇಟೆ : ಬಂಡೀಪುರ ಅರಣ್ಯ ವ್ಯಾಪ್ತಿಯ ಕುಂದಕೆರೆ ವಲಯದ ಕಾಡಂಚಿನ ಕಡಬೂರು ಗ್ರಾಮದಲ್ಲೂ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ರೈತರ ಜಮೀನುಗಳಿಗೆ ಕಾಡನೆಗಳು ಲಗ್ಗೆಯಿಟ್ಟು ಬೆಳೆ ನಾಶ ಮಾಡುತ್ತಿದ್ದು, ಎಷ್ಟೇ ಬಾರಿ ರೈತರು ಮನವಿ ಮಾಡಿದರು ಸಹ ಆರ್.ಎಫ್.ಓ ಶ್ರೀನಿವಾಸ್ ಸ್ಥಳಕ್ಕೆ ಬಾರದೇ ಉಡಾಫೆ ಉತ್ತರ ನೀಡುತ್ತಾ ಬಂದಿರುತ್ತಾರೆ.

ಕಳೆದ ರಾತ್ರಿಯೂ ಸಹ ಕಾಡನೆಗಳು ಕಡಬೂರು ಗ್ರಾಮದ ರೈತರೊಬ್ಬರ ಜಮೀನಿಗೆ ದಾಳಿ ಮಾಡಿ ಬೆಳೆ ನಾಶ ಮಾಡಿದ್ದು, ಇಂದು ಸಹ ಆರ್.ಎಫ್.ಓ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿರುವುದಿಲ್ಲ, ಇದರಿಂದ ಬೇಸತ್ತ ಗ್ರಾಮದ ರೈತರು ಕೆಳವರ್ಗದ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಸ್ಥಳದಲ್ಲೇ ಕೂರಿಸಿಕೊಂಡು ಆರ್ ಎಫ್ ಓ ಶ್ರೀನಿವಾಸ್ ಸ್ಥಳಕ್ಕೆ ಭೇಟಿನೀಡುವ ತನಕ ಸಿಬ್ಬಂದಿಗಳನ್ನು ಹೋಗಲು ಬಿಡುವುದಿಲ್ಲ ಎಂದು ಪಟ್ಟುಹಿಡಿದಿರುವ ಘಟನೆ ನಡೆದಿದೆ.

ಇನ್ನಾದರೂ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಸೂಕ್ತ ಸಮಯಕ್ಕೆ ಕಾಡು ಪ್ರಾಣಿಗಳಿಂದ ಹಾನಿಯುಂಟಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಕಾದು ನೋಡಬೇಕಿದೆ.

- Advertisement -

Latest Posts

Don't Miss