Wednesday, July 2, 2025

Latest Posts

ಜೈಲಿಗೆ ಹಾಕಿದರು ಸಹ ಪಾದಯಾತ್ರೆ ನಿಲ್ಲಿಸುವುದಿಲ್ಲ: ಡಿ.ಕೆ ಶಿವಕುಮಾರ್ ಹೇಳಿಕೆ

- Advertisement -

ಮೈಸೂರು: ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ, ನನ್ನನ್ನು ಜೈಲಿಗೆ ಕಳುಹಿಸಿದರು ಸಹ ಪಾದಯಾತ್ರೆ ಮಾಡೇಮಾಡುತ್ತೇವೆ ಡಿ.ಕೆ ಶಿವಕುಮಾರ್ (dk shivakumar) ಹೇಳಿಕೆ. ನಮ್ಮ ಪಾದಯಾತ್ರೆ ನಿಲ್ಲಿಸಲು ಸರ್ಕಾರ ಲಾಕ್‌ಡೌನ್ ಮಾಡಲು ಹೊರಟಿದೆ. ಮೇಕೆದಾಟು ಯೋಜನೆ ಮೈಸೂರು ಮತ್ತು ಬೆಂಗಳೂರು ಜಿಲ್ಲೆಗಳಿಗೆ ಸೇರಿರುವ ಯೋಜನೆ. ಆದ್ದರಿಂದ ಪಾದಯಾತ್ರೆ ಮಾಡೇಮಾಡುತ್ತೇವೆ. ಜನರು ಚುಣಾವನೆಗಳಲ್ಲಿ ನಮ್ಮನ್ನ ಗೆಲ್ಲಿಸಿದ್ದಾರೆ. ಜನರು ನಮ್ಮ ಮೇಲೆ ಒಲವು ಹೊಂದಿದ್ದಾರೆ. ಭವಿಷ್ಯದಲ್ಲಿ ನಮಗೆ ಸಂರ್ಪೂಣ ಬೆಂಬಲ ಸಿಗಲಿದೆ. ಪಾದಯಾತ್ರೆಗೆ ಬರುವವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಮೈಸೂರಿನಲ್ಲಿ ಪಾದಯಾತ್ರೆಗೆ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಬಸವೇಶ್ವರ ವೃತ್ತದಿಂದ ಕಾಂಗ್ರೆಸ್ ಕಚೇರಿಯವರೆಗೆ ರ‍್ಯಾಲಿ ಮಾಡಿದರು. ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (dk shivakumar) ಎಲ್ಲಾ ಪಕ್ಷದವರಿಗೂ, ಎಲ್ಲಾ ಕಲಾವಿದರಿಗೂ, ರೈತರಿಗೂ ಹಾಗೂ ರಾಜ್ಯದ ಎಲ್ಲಾ ಜನರಿಗೆ  ಮೇಕೆದಾಟು ಯೋಜನೆಯ ಪಾದಯಾತ್ರೆಗೆ ಕರೆಯನ್ನ ನೀಡಿದ್ದಾರೆ.

- Advertisement -

Latest Posts

Don't Miss