Sunday, July 6, 2025

Latest Posts

“ಎಲ್ಲಾ ಭಾಷೆಗಳ ಮಿತ್ರ ಭಾಷೆ ಹಿಂದಿ”: ಅಮಿತ್ ಶಾ

- Advertisement -

National News:

ಸೂರತ್‌ನ ಅಖಿಲ ಭಾರತ ಅಧಿಕೃತ ಭಾಷೆಗಳ ಸಮ್ಮೇಳನದಲ್ಲಿ ಮಾತನಾಡಿದ ಅಮಿತ್ ಶಾ ಪ್ರಾದೇಶಿಕ ಭಾಷೆಗಳ ಮೇಲೆ ಯಾರೂ ಹಿಂದಿಯನ್ನು ಹೇರಿಕೆ ಮಾಡುತ್ತಿಲ್ಲ. ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದರು.

ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಪರಸ್ಪರ ಪ್ರತಿಸ್ರ‍್ಧಿಗಳೆಂಬುದಾಗಿ ಕೆಲವರು ಅನಗತ್ಯವಾಗಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ದೇಶದ ಯಾವುದೇ ಭಾಷೆಗೆ ಹಿಂದಿ ಪ್ರತಿಸ್ಪರ್ಧಿ ಭಾಷೆಯಲ್ಲ. ಎಲ್ಲಾ ಭಾಷೆಗಳ ಮಿತ್ರ ಭಾಷೆ ಹಿಂದಿ ಎಂಬುದನ್ನು ದೇಶದ ಪ್ರತಿಯೊಬ್ಬರೂ ಅಗತ್ಯವಾಗಿ ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಭಾಷೆಗಳಲ್ಲಿ ಸಹಬಾಳ್ವೆಯನ್ನು ಎಲ್ಲಿವರೆಗೆ ನಾವು ಒಪ್ಪಲು ಬಯಸುವುದಿಲ್ಲವೋ, ಅಲ್ಲಿಯವರೆಗೂ ಭಾಷೆಯಲ್ಲಿ ದೇಶ ನಡೆಸುವ ಕನಸು ಈಡೇರುವುದು ಅಸಾಧ್ಯ. ಮಾತೃಭಾಷೆ ಸಹಿತ ಎಲ್ಲಾ ಭಾಷೆಗಳಲ್ಲಿರುವ ಸೊಗಡು, ಸಂಸ್ಕೃತಿಯನ್ನು ರ‍್ಥ ಮಾಡಿಕೊಂಡು ಆ ಭಾಷೆಗಳನ್ನು ಸಮೃದ್ದವಾಗಿಡಲು ನಾವು ಮುಂದಾಗಬೇಕು ಎಂದು ಹೇಳಿದ್ರು.

ವಿಮಾನ ಟೇಕ್ ಆಫ್ ಆಗುವ ಮೊದಲೇ ಇಂಜಿನ್ ನಲ್ಲಿ ಬೆಂಕಿ…!

ಕಂದಕಕ್ಕೆ ಉರುಳಿದ ಮಿನಿ ಬಸ್…!

ನಾಲ್ವರು ಸಾಧುಗಳ ಮೇಲೆ ಹಲ್ಲೆ.. ಕಾರಣವೇನು ಗೊತ್ತಾ..?

- Advertisement -

Latest Posts

Don't Miss