ಮಲಗಿದ್ದಾಗಲೇ ಹಿಂದೂಗಳ ಮೇಲೆ ಬೆಂಕಿ ದಾಳಿ

ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಮುಂದುವರಿದ ದೌರ್ಜನ್ಯ ಘಟನೆಗಳ ನಡುವೆ, ಫಿರೋಜ್‌ಪುರ ಜಿಲ್ಲೆಯ ದುಮ್ರಿತಾಲಾದಲ್ಲಿ ಭಾನುವಾರ ರಾತ್ರಿ ಏನಿಲ್ಲಾ ಅಂದ್ರು 5 ಹಿಂದೂ ಕುಟುಂಬಗಳ ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ದಾಳಿ ನಡೆಸಿದ್ದು, ಈ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ.

5 ಹಿಂದೂ ಕುಟುಂಬಗಳ ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಹತ್ಯೆ ಯತ್ನ ನಡೆಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮುಂದುವರಿದಿರುವುದಕ್ಕೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಪ್ಯಾಲೇಸ್ತೀನ್‌, ಗಾಜಾ ಹಾಗೂ ಮಧ್ಯಪ್ರಾಚ್ಯದ ದೇಶಗಳ ಮೇಲೆ ದಾಳಿಗಳಾದ ಬೊಬ್ಬಿರಿಯುವ ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಬುದ್ಧಿಜೀವಿಗಳು ಈಗ ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಗಳು ವ್ಯಕ್ತವಾಗಿವೆ.

ಈ ದಾಳಿಯಲ್ಲಿ ಮನೆಗಳು ಸಂಪೂರ್ಣವಾಗಿ ಭಸ್ಮವಾಗಿದೆ. ಪ್ರಾಣಿಗಳು ಸಾವು ಹೊಂದಿವೆ. ಆದರೆ, ಮನೆ ಗುಟ್ಟುಗಳಿಂದ ಟಿನ್ ಶೀಟ್ ಮತ್ತು ಬಿದಿರಿನ ಬೇಲಿ ಕತ್ತರಿಸಿ ಗುರ್ತಿಸಿಕೊಳ್ಳುವ ವೇಳೆ ಎರಡು ಕುಟುಂಬಗಳ 8 ಸದಸ್ಯರು ಅದೃಷ್ಟವಶಾತ್ ಜೀವಂತರಾಗಿ ಹೊರಬಂದಿದ್ದಾರೆ, ಸ್ಥಳೀಯರು ತಿಳಿಸಿದ್ದಾರೆ.

ಮನೆಯೊಳಗೆ ಕುಟುಂಬ ಸದಸ್ಯರು ಮಲಗಿದ್ದಾಗ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಅವರಿಗೆ ಗೊತ್ತಾಗದಂತೆ ಪ್ರವೇಶಿಸಿದ ದುಷ್ಕರ್ಮಿಗಳು, ಒಂದು ಕೋಣೆಯೊಳಗೆ ಬಟ್ಟೆಯನ್ನ ಹಾಕಿ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಇಡೀ ಮನೆಗೆ ಬೆಂಕಿ ಆವರಿಸಿದೆ. ಅತ್ತ ಮನೆಯ ಸದಸ್ಯರು ಹೊರಬರದಂತೆ ಅವರಿದ್ದ ದುಷ್ಕರ್ಮಿಗಳು ಹೊರಗಿಂದ ಬೀಗ ಜಡಿದಿದ್ದಾರೆ. ಹೀಗಾಗಿ ಬೆಂಕಿ ಹೊತ್ತಿದರೂ ಸುಲಭವಾಗಿ ಹೊರಬರಲು ಸಾಧ್ಯವಾಗಿಲ್ಲ.

ಈ ಹಿಂದೆ ಡಿಸೆಂಬರ್ 18ರಂದು ನಡೆದಿದ್ದ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿ ಹತ್ಯೆಯ ನಂತರ ಹಿಂದೂಗಳ ಮೇಲೆ ದಾಳಿ ಹಾಗೂ ಮನೆಗಳಿಗೆ ಬೆಂಕಿ ಹಚ್ಚುವ ಘಟನೆಗಳು ಹೆಚ್ಚಿರುವಂತೆ ವರದಿಯಾಗಿದೆ. ಈ ಘಟನೆಗಳಿಗೆ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author