Sunday, October 26, 2025

Latest Posts

‘ಹಿಂದುಗಳು ಆತ್ಮರಕ್ಷಣೆಗೆ ಶಸ್ತ್ರಾಸ್ತ್ರಗಳನ್ನ ಇಟ್ಟುಕೊಳ್ಳಿ’ – ನಾರಾಯಣಸಾ ಭಾಂಡಗೆ ವಿವಾದಾತ್ಮಕ ಹೇಳಿಕೆ!

- Advertisement -

ಹಿಂದುಗಳು ಆತ್ಮರಕ್ಷಣೆಗೆ ಶಸ್ತ್ರ ಇಟ್ಟುಕೊಳ್ಳಿ ಅಂತ ಸಂಸದ ನಾರಾಯಣಸಾ ಭಾಂಡಗೆ ಹೇಳಿರೋ ಹೇಳಿಕೆ ಭಾರಿ ವಿವಾದಕ್ಕೀಡಾಗಿದೆ. ಹಿಂದುಗಳು ತಮ್ಮ ಆತ್ಮರಕ್ಷಣೆಗಾಗಿ ಶಸ್ತ್ರಗಳು ಮತ್ತು ಆಯುಧಗಳನ್ನು ಇಟ್ಟುಕೊಳ್ಳಬೇಕು. ಎಲ್ಲ ಕಡೆ ಪೊಲೀಸರ ಹಾಜರಾತಿ ಸಾಧ್ಯವಿಲ್ಲ. ನಾವು ನಮ್ಮನ್ನು ರಕ್ಷಿಸಿಕೊಳ್ಳದೆ ಇದ್ದರೆ, ದೇಶವನ್ನು ಹೇಗೆ ರಕ್ಷಿಸಬಹುದು? ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ದೇವತೆಗಳು ಕೂಡ ದುಷ್ಟರ ಸಂಹಾರಕ್ಕಾಗಿ ಆಯುಧಗಳನ್ನು ಬಳಸಿದ್ದಾರೆ ಎಂಬುದನ್ನು ಪುರಾಣಗಳಿಂದ ಕೇಳಿದ್ದೇವೆ. ಆದ್ದರಿಂದ ಎಲ್ಲರೂ ತಮ್ಮ ಮನೆಗಳಲ್ಲಿ ಶ್ರದ್ಧಾಭಕ್ತಿಯಿಂದ ಆಯುಧ ಪೂಜೆ ಮಾಡಬೇಕು. ಸುಮ್ಮನೆ ಕಾರು ಜೀಪು ವಾಹನ ಪೂಜೆ ಮಾಡೋದಲ್ಲ. ಆಯುಧ ಪೂಜೆ ನಮ್ಮ ಸಂಸ್ಕೃತಿ. ಆಯುಧ ಇಲ್ಲದವರು ಆಯುಧ ಖರೀದಿ ಮಾಡಿ ಪೂಜೆ ಮಾಡಿ’ ಎಂದು ಸಲಹೆ ನೀಡಿದರು. ಸದ್ಯ ಇದು ಭಾರಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇನ್ನು ರಾಜ್ಯ ಸರ್ಕಾರ ಕೈಗೊಂಡಿರುವ ಗಣತಿ ಕುರಿತಂತೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಕೈಗೊಂಡಿರುವ ಗಣತಿ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವು ಕಾಣಿಸುತ್ತಿಲ್ಲ. ಸರ್ಕಾರದ ಈ ನಿರ್ಧಾರವು ಸ್ಪಷ್ಟತೆಯಿಲ್ಲದೆ ಗೊಂದಲಗಳಿಂದ ಕೂಡಿದೆ. ಹಲವಾರು ಅಂಶಗಳನ್ನು ಸರ್ಕಾರ ಕೈ ಬಿಡುವ ಮೂಲಕ ಮುಜುಗರ ಅನುಭವಿಸಿದೆ ಎಂದಿದ್ದಾರೆ.

ಯಾವ ಪುರುಷಾರ್ಥಕ್ಕಾಗಿ ಸರ್ಕಾರ ಈ ಗಣತಿ ನಡೆಸುತ್ತಿದೆ ಅಂತ ಪ್ರಶ್ನಿಸಿದ್ದಾರೆ. ಇದು ಜನತೆಗೆ ಲಾಭಕಾರಿಯಾಗುತ್ತದೆ ಎಂಬ ಭರವಸೆ ಇಲ್ಲ. ಅಷ್ಟಾಗಿ ರಾಜ್ಯದ ಜನತೆಯೂ ಕೂಡ ಈ ಬಗ್ಗೆ ಆಸಕ್ತಿ ಹೊಂದಿಲ್ಲ. ಆದರೂ ಗಣತಿ ವಿರೋಧಿಸುವುದಿಲ್ಲ. ಗಣತಿದಾರರು ಬಂದರೆ ನಾವು ಅಗತ್ಯ ಮಾಹಿತಿಯನ್ನು ನೀಡುತ್ತೇವೆ ಎಂದು ಹೇಳಿದರು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss