Saturday, October 25, 2025

Latest Posts

ತೆರಿಗೆ ವಿನಾಯಿತಿಗಳನ್ನು ನಿಲ್ಲಿಸುವ ಸುಳಿವು; ಕೇಂದ್ರ ಹಣಕಾಸು ಸಚಿವಾಲಯ

- Advertisement -

www.karnatakatv.net : 2022-23 ರ ಬಜೆಟ್ ಗೆ ತಯಾರಿ ನಡೆಸುತ್ತಿರುವ ಕೇಂದ್ರ ಹಣಕಾಸು ಸಚಿವಾಲಯ ಕಾರ್ಪೊರೇಟ್ ನ ಹಲವು ತೆರಿಗೆ ವಿನಾಯಿತಿಗಳನ್ನು ನಿಲ್ಲಿಸುವ ಸುಳಿವು ನೀಡಿದೆ.

ಸಚಿವಾಲಯವು ಯಾವುದನ್ನು ಮುಂದುವರೆಸಬೇಕು ಯಾವುದನ್ನು ಬಿಡಬೇಕು ಎಂಬ ನಿರ್ಧಾರವನ್ನು ಅಂತಿಮಗೊಳಿಸುವುದಕ್ಕು ಮುನ್ನ ಆರ್ಥಿಕ ವೆಚ್ಚಗಳು ಹಾಗೂ ಉಪಯೋಗಗಳನ್ನು ಮೌಲ್ಯಮಾಪನ ಮಾಡಲು ಮುಂದಾಗಿದೆ. ದರವನ್ನು ಕಡಿಮೆ ಮಾಡಿ ಹಾಗೂ ವಿನಾಯಿತಿಗಳನ್ನು ತೆಗೆದುಹಾಕುವ ಮೂಲಕ ತೆರಿಗೆ ಬೇಸ್ ನ್ನು ಹೆಚ್ಚಿಸುವ ಸರ್ಕಾರದ ಯೋಜನೆಯ ಭಾಗವಾಗಿ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಲವು ತೆರಿಗೆ ವಿನಾಯಿತಿಗಳಿಗೆ ಈ ವರ್ಷ ಬ್ರೇಕ್ ಬೀಳಲಿದೆ ಅಥವಾ ಅವುಗಳನ್ನು ಮುಂದುವರೆಸಲು ಹೋಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ನಿರ್ದಿಷ್ಟ ಯೋಜನೆಗಳ ಹೆಸರನ್ನು ಬಹಿರಂಗಪಡಿಸುವುದಕ್ಕೆ ಅಧಿಕಾರಿ ನಿರಾಕರಿಸಿದ್ದು, ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡುವುದಕ್ಕೆ ನೀಡಲಾಗುತ್ತಿರುವ ಬಂಡವಾಳ ಲಾಭ ತೆರಿಗೆ ವಿನಾಯಿತಿ ಮಾ.2022ಕ್ಕೆ ಅಂತ್ಯಗೊಳ್ಳಲಿದ್ದು ಇದನ್ನು ವಿಸ್ತರಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ರಫ್ತು ಆಧಾರಿತ ಘಟಕಗಳಿಗೂ ಇದೇ ಅನ್ವಯವಾಗಲಿದೆ. ಇದೇ ವೇಳೆ ಕೈಗಾರಿಕೋದ್ಯಮಿಗಳಿಂದ ಈ ಬಾರಿಯ ಬಜೆಟ್ ಗೆ ಸಲಹೆಗಳನ್ನು ಕೇಳಿರುವ ಹಣಕಾಸು ಸಚಿವಾಲಯ, ಶಿಫಾರಸ್ಸುಗಳನ್ನು ಆರ್ಥಿಕ ಸಮರ್ಥನೆಯೊಂದಿಗೆ ಬೆಂಬಲಿಸಬೇಕೆoದು ಒತ್ತಾಯಿಸಿದೆ.

- Advertisement -

Latest Posts

Don't Miss