Saturday, July 5, 2025

Latest Posts

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲು

- Advertisement -

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಮೋದಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀರಾ ಬೆನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್ ಹೇಳಿಕೆ ನೀಡಿದೆ. ಪ್ರಧಾನಿ ಕೂಡ ಅಹಮದಾಬಾದ್‌ಗೆ ತೆರಳಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ತೆರಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಮತ್ತು ಕುಟುಂಬ ಸದಸ್ಯರು ಗಾಯಗೊಂಡ ಒಂದು ದಿನದ ನಂತರ ಈ ದುಃಖದ ಮಾಹಿತಿ ಬಂದಿದೆ. ಮಂಗಳವಾರ ಮೈಸೂರು ಬಳಿ ಪ್ರಹ್ಲಾದ್ ಮೋದಿ ಅವರ ಕಾರು ಅಪಘಾತಕ್ಕೀಡಾಗಿತ್ತು.

ಜೆಡಿಎಸ್, ಕಾಂಗ್ರೆಸ್ ವಿರುದ್ಧ ಮುಂದುವರೆದ ಬಿಜೆಪಿ ಟ್ವೀಟ್ ವಾರ್

ಹೀರಾ ಬೆನ್ ಅವರಿಗೆ 99 ವರ್ಷ. ಜೂನ್‌ನಲ್ಲಿ ಅವರ 99 ನೇ ಹುಟ್ಟುಹಬ್ಬದಂದು ಹೀರಾ ಬೆನ್ ಅವರನ್ನು ಭೇಟಿ ಮಾಡಲು ಪ್ರಧಾನಿ ಹೋಗಿದ್ದರು. ಈ ಸಂದರ್ಭದಲ್ಲಿ ಪ್ರಧಾನಿಯವರು ‘ಮಾ’ ಎಂಬ ಭಾವನಾತ್ಮಕ ಬ್ಲಾಗ್ ಕೂಡ ಬರೆದಿದ್ದಾರೆ. ಪ್ರಧಾನಿಯವರು ಆಗಾಗ್ಗೆ ತಮ್ಮ ತಾಯಿಯೊಂದಿಗಿನ ಭಾವನಾತ್ಮಕ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಇತ್ತೀಚೆಗಷ್ಟೇ ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆಯೂ ಪ್ರಧಾನಿ ತಮ್ಮ ತಾಯಿಯನ್ನು ಭೇಟಿಯಾಗಲು ಹೋಗಿದ್ದರು. ಆಗ ಹೀರಾ ಬೆನ್ ಮೋದಿ ಜತೆ ಪ್ರಧಾನಿ ಮಾತನಾಡುತ್ತಾ ಟೀ ಕುಡಿಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಮೋದಿ ಅವರ ತಾಯಿ ಹೀರಾ ಬೆನ್ ಅವರನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸುದ್ದಿ ಬಂದ ತಕ್ಷಣ ಅಹಮದಾಬಾದ್‌ನ ಶಾಸಕ ದರ್ಶನಾಬೆನ್ ವಘೇಲಾ, ಅಸರ್ವಾ ಮತ್ತು ದರಿಯಾಪುರದ ಶಾಸಕ ಕೌಶಿಕ್ ಜೈನ್ ಅವರು ಯುಎನ್ ಮೆಹ್ತಾ ಆಸ್ಪತ್ರೆಗೆ ತಲುಪಿದ್ದಾರೆ.

3 ದಿನಗಳ ಕಾಲ ರಾಜ್ಯದಲ್ಲಿ ಅಮಿತ್ ಶಾ ಪ್ರವಾಸ

ಈ ನದಿಗಳು ನಮ್ಮ ದೇಶದಲ್ಲಿ ಆಧ್ಯಾತ್ಮಿಕತೆಯ ಸ್ಥಳವಾಗಿದೆ..ಅತ್ಯಂತ 10 ಪವಿತ್ರ ನದಿಗಳು ನಿಮಗಾಗಿ..!

- Advertisement -

Latest Posts

Don't Miss