ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆ ಮಾಡಿದ ಬಳಿಕ ಹೆಚ್.ಕೆ ಪಾಟೀಲ್ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ನಾವು ವಿಜ್ಞಾನವನ್ನು ನಂಬಿ ರೈತರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಮೋಡಗಳನ್ನು ಬಿತ್ತನೆ ಮಾಡಿದ್ದೇವೆ. ಶಾಸಕ ಪ್ರಕಾಶ್ ಕೋಳಿವಾಡ ಅವರು ಕುಟುಂಬದ ಮಾರ್ಗದರ್ಶನದ ಜೊತೆಗೆ ಹಾವೇರಿ ಶಾಸಕರು ಪ್ರಾರಂಭ ಮಾಡಿದ್ರು. ನಾನು, ರುದ್ರಪ್ಪ ಲಮಾಣಿ ಚಾಲನೆ ಕೊಟ್ಟು ಬಂದ್ವಿ. ಪೈಲೇಟ್ ಹೇಳಿದ್ದಾರೆ ಹಾವೇರಿ, ರಾಣೇಬೆನ್ನೂರು ತಾಲೂಕುಗಳಲ್ಲಿ ಗುಣಮಟ್ಟ ನೋಡಿ ಬಿತ್ತನೆ ಮಾಡ್ತೀವಿ. ಶೀತ ಮೋಡ ಬಿತ್ತನೆ ಹಾಗೂ ವಾರ್ಮ್ ಮೋಡ ಬಿತ್ತನೆ ಮಾಡ್ತೇವೆ ಅಂತ ಕ್ಯಾಪ್ಟನ್ ಹೇಳಿದ್ದಾರೆ ಎಂದು ತಿಳಿಸಿದರು.
ಹನಿ ಆಗೋದಕ್ಕೆ ನ್ಯೂಕ್ಲಿಯರ್ಸ್ ಅನುಕೂಲ ಮಾಡುತ್ತವೆ ವಿಜ್ಞಾನ ರೈತರಿಗೆ ಅನುಕೂಲ ಆಗುತ್ತೆ ಅಂತ ನಂಬಿಕೆ ಇದೆ. ಬಹಳ ವೆಚ್ಚದಾಯಕ ಹಾಗೂ ಅದ್ಬುತ ಪ್ರಯತ್ನ ಇದಾಗಿದ್ದು ಕೋಳಿವಾಡ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ವಿಮಾನ ಹಾರಿದಾಗ ನಮ್ಮ ಗದಗ ಜಿಲ್ಲೆಯಲ್ಲೂ ಮೋಡ ಬಿತ್ತನೆ ಮಾಡಿ ಅಂತ ಹೇಳಿದ್ದೇನೆ. ಅದಕ್ಕೆ ಕೋಳಿವಾಡ ಅವರು ಮೋಡ ಸಿಕ್ಕರೆ ಧಾರವಾಡ, ಗದಗ ಎರಡು ಕಡೆ ಮಾಡುತ್ತೇವೆ ಅಂತ ಹೇಳಿದ್ದಾರೆ. 2003 ರಲ್ಲಿ 85 ದಿನಗಳ ಕಾಲ ಮೋಡ ಬಿತ್ತನೆ ಮಾಡಿದ್ದೇವೆ, 60ಕ್ಕೂ ಹೆಚ್ಚು ದಿವಸಗಳ ಯಶಸ್ಸು ಕಂಡಿತ್ತು. 2003 ರಲ್ಲಿ ಎಸ್.ಎಂ ಕೃಷ್ಣ ಅವರು ಸಿಎಂ ಇದ್ದಾಗ ಬಿತ್ತನೆ ಮಾಡಿದ್ದೆವು.
ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ರೈತರಿಗೆ ಅನುಕೂಲವಾಗುವ ಹಾಗೆ ಮೋಡಗಳ ಬಿತ್ತನೆ ಮಾಡಿ ಅಂತ ಮನವರಿಕೆ ಮಾಡಿ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇನೆ. ಎಂದು ಹೆಚ್.ಕೆ ಪಾಟಿಲ್ ತಿಳಿಸಿದರು.
Rayareddy Angry: ನಾನು ಸಿಟ್ಟಾಗಿದ್ದಕ್ಕೆ ಸಮಸ್ಯೆಗೆ ಪರಿಹಾರ’ : ರಾಯರೆಡ್ಡಿ
Ganesh Festival: ಹುಬ್ಬಳ್ಳಿಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ವಿಘ್ನ..!
Letter Story: ಯಾರೋ ಬರೆದು ಕೊಟ್ಟ ಪತ್ರವನ್ನು ಅಧ್ಯಕ್ಷರು ಬಹಿರಂಗ ಪಡಿಸಿದ್ದಾರೆ: ಪ್ರದೀಪ್ ಶೆಟ್ಟರ್..!