Wednesday, April 16, 2025

Latest Posts

ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಕಥೆಯಲ್ಲಿ ‘ಬಘೀರ’ನಾದ ಶ್ರೀಮುರುಳಿ…!

- Advertisement -

ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ‌ ಫಿಲ್ಮಂಸ್ ನ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಇವತ್ತು ಹೊಸ ಸಿನಿಮಾ ಘೋಷಣೆ ಮಾಡೋದಾಗಿ ಹೇಳಿದ್ದ ಹೊಂಬಾಳೆ ಚಿತ್ರತಂಡ ತಮ್ಮ‌ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ರಿವೀಲ್ ಮಾಡಿದೆ. ಯಾವ ಸ್ಟಾರ್ ಗೆ ಈ ಬಾರಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಲಿದ್ದಾರೆ ಅನ್ನೋ‌ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡ್ತಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮೊನ್ನೆ‌‌ಮೊನ್ನೆಯಷ್ಟೇ ಪ್ರಭಾಸ್ ಜೊತೆ ಸಲಾರ ಸಿನಿಮಾ ಘೋಷಣೆ ಮಾಡಿದ್ದ ಹೊಂಬಾಳೆ ಫಿಲ್ಮಂಸ್ ಮೇಲೆ‌ ನಿರೀಕ್ಷೆ ದುಪ್ಪಟ್ಟು ಆಗಿತ್ತು. ಈ ಬಾರಿ ಬಿಗ್ ಸ್ಟಾರ್ ಗೆ ಮತ್ತೆ ನಿರ್ಮಾಣ ಮಾಡೋದು‌ ಪಕ್ಕ ಎನ್ನಲಾಗ್ತಿತ್ತು. ಅದರಂತೆ ಹೊಂಬಾಳೆ ಬ್ಯಾನರ್ ಅಡಿ ಮೂಡಿ ಬರ್ತಿರೋ ಎಂಟನೇ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟಿಸುವುದು ಪಕ್ಕಾ ಆಗಿದೆ.

ಮುರುಳಿ ಹುಟ್ಟುಹಬ್ಬಕ್ಕೆ ‘ಹೊಂಬಾಳೆ’ ಕೊಡುಗೆ

ಶ್ರೀಮುರುಳಿ ಹುಟ್ಟುಹಬ್ಬದ ದಿನವಾದ ಇಂದು ಹೊಂಬಾಳೆ ಫಿಲ್ಮಂಸ್ ತಮ್ಮ ಮುಂದಿನ ಸಿನಿಮಾದ ಟೈಟಲ್ ಜೊತೆಗೆ ಖಡಕ್ ಪೋಸ್ಟರ್ ಕೂಡ ರಿವೀಲ್ ಮಾಡಿದೆ. ಬಘೀರ ಅನ್ನೋ ಟೈಟಲ್ ನಡಿ ಹೊಂಬಾಳೆ ಸಿನಿಮಾ ಮಾಡ್ತಿದ್ದು, ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಡಾ.ಸೂರಿ‌ ಬಘೀರ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಅಂದಹಾಗೇ ಬಘೀರ ಜಂಗಲ್ ಬುಕ್ ಸಿನಿಮಾದ ವಿಶೇಷ ಪಾತ್ರವೊಂದರ ಹೆಸ್ರು. ಇದೇ ರೀತಿಯ ಹೆಸ್ರು ಶ್ರೀಮುರುಳಿ ಸಿನಿಮಾಕ್ಕೆ ಇಟ್ಟಿರುವುದು ಕೂತೂಹಲ ಮೂಡಿಸಿದೆ.

- Advertisement -

Latest Posts

Don't Miss