ಚಂದ್ರು ಹತ್ಯೆಗೆ ಬೈಕ್ ಗಲಾಟೆ ಕಾರಣ: ಅರ್ಧಗಂಟೆಯಲ್ಲೇ ಉಲ್ಟಾ ಹೊಡೆದ ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಹತ್ಯೆಯಾಗಿದ್ದಂತ ಚಂದ್ರು ಎಂಬಾತನ ಕೊಲೆಗೆ ಕನ್ನಡ ಮಾತನಾಡದ್ದೇ ಕಾರಣ ಎಂಬುದಾಗಿ ಹೇಳಿಕೆ ನೀಡಿದಂತ ಅರ್ಧ ಗಂಟೆಯಲ್ಲೇ, ಗೃಹ ಸಚಿವ ಅರಗ ಜ್ಞಾನೇಂದ್ರ ತಮ್ಮ ಹೇಳಿಕೆ ಬದಲಾವಣೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, ಚಂದ್ರು ಹತ್ಯೆಯ ಬಗ್ಗೆ ಕಮೀಷನರ್ ಅವರಿಂದ ಮಾಹಿತಿ ಪಡೆದಿದ್ದೇನೆ. ಚಂದ್ರು ಕೊಲೆಗೆ ಬೈಕ್ ಗಲಾಟೆಯೇ ಕಾರಣವಾಗಿದೆ. ನಾನು ಆ ಕ್ಷಣದಲ್ಲಿ ಹೇಳಿಕೆ ತಪ್ಪಾಗಿ ನೀಡಿದ್ದೇನೆ. ಚಂದ್ರು ಹತ್ಯೆಯ ಹಿಂದೆ ಬೈಕ್ ಗಲಾಟೆಯೇ ಕಾರಣವಾಗಿರೋದಾಗಿ ಸ್ಪಷ್ಟ ಪಡಿಸಿದ್ದಾರೆ.

ಅಂದಹಾಗೇ ಇದಕ್ಕೂ ಮೊದಲು ಗೃಹ ಸಚಿವರು ಚಂದ್ರು ಎಂಬಾತನನ್ನು ಉರ್ದು ಮಾತನಾಡು ಎಂದಾಗ, ಕನ್ನಡ ಬಿಟ್ಟು ಉರ್ದು ಬರೋದಿಲ್ಲ ಎಂಬ ಕಾರಣದಿಂದಾಗಿ ಹತ್ಯೆ ಮಾಡಲಾಗಿದೆ. ಉರ್ದು ಮಾತನಾಡೋದಕ್ಕೆ ಬರೋಲ್ಲ ಎಂದಿದ್ದೇ ಚಂದ್ರು ಹತ್ಯೆಗೆ ಕಾರಣ ಎಂಬುದಾಗಿ ತಿಳಿಸಿದ್ದರು. ಹೀಗೆ ಹೇಳಿದಂತ ಅರ್ಧ ಗಂಟೆಯಲ್ಲೇ ಗೃಹ ಸಚಿವ ಅರಗ ಜ್ಞಾನೇಂದ್ರ ತಮ್ಮ ಹೇಳಿಕೆಯನ್ನು ಬದಲಾವಣೆ ಮಾಡಿ, ಹೇಳಿಕೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

About The Author