Friday, April 11, 2025

Latest Posts

Darshan Case: ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್​ಗೆ ರಾಜಾತಿಥ್ಯ? ಜೈಲಿನ 7 ಅಧಿಕಾರಿಗಳ ಅಮಾನತು ಮಾಡಿದ ಸರ್ಕಾರ

- Advertisement -

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್ ಜೈಲಿನಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಜೈಲಿನಲ್ಲಿ ಕುಳಿತು ದರ್ಶನ್ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್​ ಹಿಡಿದುಕೊಂಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದರ ಜೊತೆಗೆ ದರ್ಶನ್ ಯುವಕನೊಬ್ಬ ಜೊತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ್ದ ದೃಶ್ಯ ಕೂಡ ಲೀಕ್ ಆಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗೃಹಸಚಿವ ಡಾ. ಜಿ.ಪರಮೇಶ್ವರ್, ಜೈಲಿನ ಏಳು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

 

 

‘‘ಈ ಪ್ರಕರಣದಲ್ಲಿ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ. ಪ್ರಕರಣದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪದೇ ಪದೇ ಈ ರೀತಿಯ ಘಟನೆ ನಡೆಯಬಾರದು. ಜೈಲಿನ ಮೇಲಾಧಿಕಾರಿಗಳನ್ನು ಟ್ರಾನ್ಸ್​ಫಾರ್​​ ಮಾಡುತ್ತೇವೆ. ಎಲ್ಲಾ ಬಂಧಿಕಾನೆಗಳಲ್ಲಿ ಸಿಸಿಟಿವಿ ಹಾಕುತ್ತಿದ್ದೇವೆ. ಜಾಮರ್ ಕೂಡ ಅಳವಡಿಸುತ್ತಿದ್ದೇವೆ. ಆದಾಗ್ಯೂ ಈ ರೀತಿಯ ಘಟನೆಗಳು ನಡೆಯುತ್ತಿದೆ’ ಎಂದು ಗೃಹ ಸಚಿವ ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ. ಜೈಲಿನಲ್ಲಿ ದರ್ಶನ್​ಗೆ ಚಿಕನ್ ಬಿರಿಯಾನಿ ಕೊಡುತ್ತಿರುವ ಆರೋಪವನ್ನು ಗೃಹಸಚಿವರು ತಳ್ಳಿ ಹಾಕಿದ್ದಾರೆ. ದರ್ಶನ್​ಗೆ ಜೈಲಿನಲ್ಲಿ ಚಿಕನ್ ಬಿರಿಯಾನಿ ಕೊಟ್ಟಿಲ್ಲ. ಜೈಲಿನ ನಿಯಮದಂತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

 

ಸಸ್ಪೆಂಡ್ ಆದವರು ಯಾರು?
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲರ್​​​ಗಳಾದ ಶರಣಬಸವ ಅಮೀನ್​​ಗಢ, ಖಂಡೇವಾಲ್, ಸಹಾಯಕ ಜೈಲರ್​ಗಳಾದ ಪುಟ್ಟಸ್ವಾಮಿ, ಶ್ರೀಕಾಂತ್​ ತಲವಾರ್​, ಜೈಲಿನ ಹೆಡ್​​ ವಾರ್ಡರ್​ಗಳಾದ ವೆಂಕಪ್ಪ, ಸಂಪತ್ ಮತ್ತು ವಾರ್ಡರ್​​​ ಬಸಪ್ಪ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

- Advertisement -

Latest Posts

Don't Miss