www.karnatakatv.net : ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಿನ್ನೆ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಬೇಜವಾಬ್ದಾರಿಯುತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಹೊರರಾಜ್ಯದ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ರಾಜ್ಯವೇ ಬೆಚ್ಚಿಬೀಳಿಸಿದೆ. ಅಲ್ಲದೆ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗ್ತಿದ್ದು ಪ್ರತಿಭಟನೆಯೂ ನಡೆಯುತ್ತಿದೆ. ಈ ಮಧ್ಯೆ ಘಟನೆ ಕುರಿತು ಪ್ರತಿಕ್ರಿಯಿಸಿರೋ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತ್ರ ಪ್ರತಿಪಕ್ಷಗಳಿಗೆ ಟಾಂಗ್ ನೀಡೋ ಭರದಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.
ಹೌದು, ಘಟನೆಯನ್ನ ಖಂಡಿಸಿರೋ ಕಾಂಗ್ರೆಸ್ ಸಹಜವಾಗಿ ಆಡಳಿತ ಪಕ್ಷವನ್ನೇ ಹೊಣೆಯನ್ನಾಗಿಸೋದು ಕಾಮನ್. ಆದ್ರೆ ಇವೆಲ್ಲಕ್ಕೂ ಸೂಕ್ತವಾಗಿ ಪ್ರತಿಕ್ರಿಯಿಸಬೇಕಿದ್ದ ಹೋಮ್ ಮಿನಿಸ್ಟರ್ ಅರಗ ಜ್ಞಾನೇಂದ್ರ, ಈ ಕಾಂಗ್ರೆಸ್ ನವರು ನನ್ನನ್ನ ರೇಪ್ ಮಾಡೋ ಪ್ರಯತ್ನ ಮಾಡ್ತಿದ್ದಾರೆ, ಅಷ್ಟೇ ಅಲ್ಲದೆ ರಾತ್ರಿ 7.30ಕ್ಕೆ ಅವರು ಅಲ್ಲಿಗೆ ಹೋಗಿದ್ದಾರೆ. ಮೊದಲನೇದಾಗಿ ಆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಮೊದಲನೆದಾಗಿ ಅವರು ಅಲ್ಲಿಗೆ ಹೋಗಬಾರದಿತ್ತು ಅಂತ ಹೇಳೋ ಮೂಲಕ ಅರಗ ಜ್ಞಾನೇಂದ್ರ ನಾಲಗೆ ಹರಿಬಿಟ್ಟು ರಾಜ್ಯಾದ್ಯಂತ ಟೀಕೆಗೆ ಗುರಿಯಾಗಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರೇಪ್ ಅನ್ನೋ ಪದ ಅವರಿಗೆ ಪ್ರಿಯವಾದ ಪದ. ಅದಕ್ಕೆ ಆ ಪದವನ್ನು ಗೌರವವಯುತವಾಗಿ ಬಳಸ್ತಿದ್ದಾರೆ. ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡ್ತಿದ್ದಾರೆ ಅಂತ ಹೇಳಿದ್ರೆ ಈ ರಾಜ್ಯದ ಆಡಳಿತದ ಗತಿಯೇನು ಅಂತ ಟಾಂಗ್ ನೀಡಿದ್ರು. ಅಲ್ಲದೆ ಯಾರೇ ಅತ್ಯಾಚಾರ ಮಾಡಿದ್ರೂ ಮುಲಾಜಿಲ್ಲದೆ ಅವರ ಮೇಲೆ ಕೇಸ್ ಹಾಕಿ ಬಂಧಿಸಿ ಅಂತ ಡಿಕೆಶಿ ವ್ಯಂಗ್ಯವಾಡಿದ್ರು.