Thursday, December 4, 2025

Latest Posts

 ಭಾರತೀಯ ಸೇನೆಯಿಂದ ಉಗ್ರರ ಮನೆ ಢಮಾರ್‌..! : ಪಾಕ್‌ಗೆ ಶುರುವಾಯ್ತು ನಡುಕ..!

- Advertisement -

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ ಕ್ರೌರ್ಯ ಮೆರೆದಿದ್ದ ಉಗ್ರರ ವಿರುದ್ಧ ಭಾರತೀಯ ಸೇನೆಯು ದಿಟ್ಟ ಉತ್ತರ ನೀಡುತ್ತಿದೆ. ಗುರುವಾರವಷ್ಟೇ ಇಬ್ಬರು ಉಗ್ರರನ್ನು ಇಲ್ಲವಾಗಿಸಿದ್ದ ಹೆಮ್ಮೆಯ ಯೋಧರು ಇಂದು ಉಗ್ರರಿಬ್ಬರ ಮನೆಯನ್ನೇ ಧ್ವಂಸ ಮಾಡುವ ಮೂಲಕ ನಾವು ಭಯೋತ್ಪಾದನೆಯನ್ನು ಬೆಂಬಲಿಸಲ್ಲ ಎಂಬ ನೇರ ಸಂದೇಶವನ್ನು ಪಾಕಿಗಳಿಗೆ ರವಾನಿಸಿದ್ದಾರೆ.

ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್‌ ಆಸೀಫ್‌ ಶೇಖ್‌, ಹಾಗೂ ಉಗ್ರ ಅದಿಲ್ ತೋಕರ್ ಮನೆಯನ್ನು ತಡರಾತ್ರಿ ಭಾರತೀಯ ಸೇನೆ ಸಂಪೂರ್ಣವಾಗಿ ನೆಲಸಮಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಮೊಂಘಮಾ ಪ್ರದೇಶದಲ್ಲಿ ನಡೆದ ಪ್ರಬಲ ಸ್ಫೋಟದಲ್ಲಿ ಸಕ್ರಿಯ ಭಯೋತ್ಪಾದಕನ ಮನೆ ನಾಶವಾಗಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಸೇನೆಯು ಆತನ ಮನೆಯನ್ನು ಸ್ಫೋಟಿಸಿ ತಕ್ಕ ಉತ್ತರ ನೀಡಿದೆ.

ಉಗ್ರರ ಹೆಸರು ಬಹಿರಂಗ..!

ಪಹಲ್ಗಾಮ್‌ನ ದಾಳಿಯ ಬಳಿಕ ಅಲ್ಲಿ ದಿನ ಕಳೆದಂತೆ ಪರಿಸ್ಥಿತಿ ತೀವ್ರ ಉದ್ವಿಗ್ನ ಸ್ವರೂಪ ಪಡೆಯುತ್ತಿದೆ. ಭಾರತದ ಗಡಿ ಪ್ರದೇಶವನ್ನು ಗುರಿಯಾಗಿಸಿಯೇ ನರಿ ಬುದ್ಧಿಯ ಪಾಕಿಸ್ತಾನ ಗುಂಡಿನ ದಾಳಿಯನ್ನು ನಡೆಸುತ್ತಿದೆ. ಇದಕ್ಕೆ ತಕ್ಕ ಪ್ರತಿ ದಾಳಿಯನ್ನು ಭಾರತದ ಸೇನೆಯು ಮಾಡುವ ಮೂಲಕ ಪಾಕಿಸ್ತಾನಕ್ಕೆ ನಡುಕ ಶುರುವಾಗುವಂತೆ ಮಾಡಿದ್ದಾರೆ. ಇನ್ನೂ ಪಹಲ್ಗಾಮ್‌ನ ದಾಳಿಯಲ್ಲಿ ಭಾಗಿಯಾಗಿರುವ ಆಸಿಫ್ ಹೌಜಿ, ಅಲಿಬಾಯ್ ಹಾಗು ಹಾಸಿಂ ಪಾಕಿಸ್ತಾನದವರಾದರೆ, ಉಳಿದಿಬ್ಬರು ಜಮ್ಮು ಕಾಶ್ಮೀರದ ಪುಲ್ವಾಮಾ ಮೂಲದವರಾಗಿದ್ದಾರೆ. ಅದರಲ್ಲಿ ಅಲ್ಸಾನ್ ಹಾಗೂ ಅನಂತನಾಗ್ ಜಿಲ್ಲೆಯ ಆದಿಲ್ ಹುಸೈನ್ ತೊಕರ್ ಎಂದು ತಿಳಿದುಬಂದಿದೆ. ಸದ್ಯ ಇವರು ಪೀರ್ ಪಂಜಾಲ್ ಪರ್ವತ ಶ್ರೇಣಿಯಲ್ಲಿ ಅಡಗಿ ಕುಳಿತಿದ್ದಾರೆ ಎಂದು ತಿಳಿದುಬಂದಿದೆ.

ಸೇನೆಯ ಶಪಥ..!

ಕಳೆದ ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 23ರಂದು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಜನ ಪ್ರವಾಸಿಗರನ್ನು ಕೊಂದಿದ್ದರು. ಆ ಬಳಿಕ, ಭದ್ರತಾ ಪಡೆಗಳು ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿವೆ. ಅಮಾಯಕ ಭಾರತೀಯರ ಜೀವ ಬಲಿದ ರಣಹೇಡಿಗಳ ವಿರುದ್ಧ ನಾವು ಪ್ರತೀಕಾರ ತೀರಿಸಿಕೊಳ್ಳದೆ ಸುಮ್ಮನೇ ಇರುವುದಿಲ್ಲ ಎಂದು ಶಪಥ ಮಾಡಿ ಅವರನ್ನು ಬಗ್ಗು ಬಡಿಯಲು ತನ್ನ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಭಾರತೀಯ ಸೇನೆಗೆ ಹೆದರಿ ಪಾತಕಿಗಳು ಅಡಗಿಕೊಳ್ಳುತ್ತಿದ್ದಾರೆ. ಅಲ್ಲದೆ ಭಾರತ ತನ್ನ ವಿರುದ್ಧ ನಡೆಸುತ್ತಿರುವ ನಿರಂತರ ದಾಳಿಯಿಂದ ಕಂಗಾಲಾಗಿರುವ ಪಾಕಿಸ್ತಾನ ಹತಾಶ ಭಾವನೆಯಿಂದ ಮತ್ತೆ ಕಾಲು ಕೆದರಿ ಜಗಳಕ್ಕಿಳಿಯುತ್ತಿದೆ.

- Advertisement -

Latest Posts

Don't Miss