Thursday, September 19, 2024

Latest Posts

ಉಪ್ಪಿನಕಾಯಿ ಮಾರುತ್ತಿದ್ದ ಮಹಿಳೆ ಇಂದು 4 ಕಂಪನಿಗೆ ಓನರ್

- Advertisement -

ಆಕೆ ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಉಪ್ಪಿನಕಾಯಿ ಮಾರುತ್ತಿದ್ದ ಮಹಿಳೆ. ಮನೆ ಮನೆ ಬಾಗಿಲಿಗೆ ಹೋಗಿ ಉಪ್ಪಿನಕಾಯಿ ಬೇಕೇನಮ್ಮಾ ಅಂತ ಕೇಳ್ತಿದ್ದವರು. ಇಡೀ ದಿನವೆಲ್ಲಾ ವ್ಯಾಪಾರ ಮಾಡಿದ್ರೂ 200 ರೂಪಾಯಿ ಸಂಪಾದನೆ ಆಗ್ತಿರಲಿಲ್ಲ. ಆದ್ರೆ ಆ ಮಹಿಳೆ ಇವತ್ತು 4 ದೊಡ್ಡ ಕಂಪನಿಗಳಿಗೆ ಓನರ್.. 200-300 ವ್ಯಾಪಾರ ಮಾಡ್ತಿದ್ದ ಮಹಿಳೆ ಈಗ ಕೋಟಿಗಟ್ಟಲೆ ಬ್ಯುಸಿನೆಸ್ ಮಾಡ್ತಿದ್ದಾರೆ.. ದೆಹಲಿಯ ನಜಾಫ್​​ಗಢದ ನಿವಾಸಿ ಶ್ರೀಮತಿ ಕೃಷ್ಣ ಯಾದವ್ ಎಂಬುವವರ ಸಕ್ಸಸ್ ಸ್ಟೋರಿ ಇದು.

ಕೃಷ್ಣ ಯಾದವ್ ಮೂಲತಃ ಉತ್ತರ ಪ್ರದೇಶದ ಬುಲಂದ್ ಶಹರ್ ನವರು. 1995-96ರಲ್ಲಿ ಅವರ ಕುಟುಂಬ ಹಣಕಾಸಿನ ಸಮಸ್ಯೆ ಎದುರಿಸಿತ್ತು. ಪತಿ ಗೋವರ್ಧನ್​​​ಗೆ ಕೆಲಸ ಇಲ್ಲದೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ರು. ಮಡದಿ ಕೃಷ್ಣ ಯಾದವ್ ಧೃಢ ಸಂಕಲ್ಪ ಮತ್ತು ಧೈರ್ಯದಿಂದ ಕುಟುಂಬವನ್ನ ಕಾಪಾಡೋ ಹೊಣೆ ಹೊತ್ರು. ಸ್ನೇಹಿತನಿಂದ ಕೇವಲ 500 ರೂಪಾಯಿ ಸಾಲ ಪಡೆದು ಕುಟುಂಬ ಸಮೇತ ದೆಹಲಿಗೆ ಬರರೋಕೆ ಕೃಷ್ಣ ಯಾದವ್ ನಿರ್ಧರಿಸಿದ್ದರು. ದೆಹಲಿಗೆ ಬಂದ ಜಮೀನು ಒಂದನ್ನು ಬಾಡಿಗೆ ಪಡೆದು ಅದ್ರಲ್ಲಿ ತರಕಾರಿ ಬೆಳೆಯೋಕೆ ಪ್ರಾರಂಭಿಸಿದ್ರು. ಹೀಗೆ ತರಕಾರಿಯನ್ನ ಬೆಳೆದ ಕೃಷ್ಣ ಯಾದವ್, ಅವುಗಳಿಂದ್ಲೇ ಉಪ್ಪಿನಕಾಯಿ ಮಾಡೋಕೆ ಪ್ರಾರಂಭಿಸಿದ್ರು. ಈ ಕೆಲಸಕ್ಕೆ ಮತ್ತೆ ಸ್ನೇಹಿತರ ಬಳಿ 3 ಸಾವಿರ ಸಾಲ ಪಡೆದು ಹೂಡಿಕೆ ಮಾಡಿದ್ರು.. ತಮ್ಮದೇ ಹೊಲದಲ್ಲಿ ಬೆಳೆದಿದ್ದ ಮೆಣಸಿನ ಕಾಯಿ ಹಾಗೂ ಕ್ರಾನ್​​ಬೆರಿಯಿಂದ ಉಪ್ಪಿನಕಾಯಿ ತಯಾರಿಸಿದ್ರು ಮೊದಲ ಬಾರಿ ಅವ್ರು ಸುಮಾರು 100 ಕೆಜಿ ಕ್ರಾನ್​ಬೆರಿ ಉಪ್ಪಿನಕಾಯಿ, ಹಾಗೇ 5 ಕೆಜಿಯಷ್ಟು ಮೆಣಸಿನಕಾಯಿ ಉಪ್ಪಿನಕಾಯಿ ತಯಾರಿಸಿದ್ರು.. 3 ಸಾವಿರ ಬಂಡವಾಳದಲಲ್ಲಿ ಮೊದಲ ಬಾರಿ ಅವ್ರಿಗೆ 5 ಸಾವಿರ ಲಾಭ ಬಂದಿತ್ತು.. ಇಷ್ಟಾಗಿದ್ದೇ ತಡ ಕೃಷ್ಣಾ ಯಾದವ್ ತನ್ನ ವ್ಯಾಪಾರ ಮುಂದುವರೆಸಿದ್ರು. ತಾವೇ ಬೀದಿ ಬೀದಿ ಸುತ್ತಿ ಉಪ್ಪಿನಕಾಯಿ ಮಾರಾಟ ಮಾಡೋಕೆ ಮುಂದಾದ್ರು.. ಸ್ವಲ್ಪ ಸ್ವಲ್ಪವೇ ಬ್ಯುಸಿನೆಸ್ ಕೈ ಹಿಡಿದ್ಮೇಲೆ ‘ಶ್ರೀ ಕೃಷ್ಣ ಪಿಕಲ್ಸ್’ ಹೆಸರಿನ ಕಂಪನಿಯೊಂದನ್ನೂ ಶುರುಮಾಡಿದ್ರು. ಮಾವಿನಕಾಯಿ, ನಿಂಬೆ, ಸೇರಿ ಹಲವು ಬಗೆಯ ಉಪ್ಪಿನಕಾಯಿಗಳನ್ನ ಶುರುಮಾಡಿದ್ರು. ಕೆಲವೇ ವರ್ಷದಲ್ಲಿ ಅವ್ರ ಬ್ಯುಸಿನೆಸ್ 5 ಕೋಟಿಗೂ ಅಧಿಕವಾಗಿತ್ತು.

ಅಷ್ಟೇನೂ ವಿದ್ಯಾವಂತೆ ಅಲ್ಲದ ಕೃಷ್ಣ ಯಾದವ್ ಚಿಕ್ಕ ರೂಂ ಒಂದ್ರಲ್ಲಿ ವ್ಯವಹಾರ ಪ್ರಾರಂಭಿಸಿದ್ರು. ಆದ್ರೆ ಈಗ ಅದು 4 ದೊಡ್ಡ ಕಂಪನಿಗಳಿಗೆ ವಿಸ್ತರಿಸಿದೆ. ಸ್ಕೂಲ್​​ ಮುಖವನ್ನೇ ನೋಡದ ಕೃಷ್ಣಾ ಇವತ್ತು 5 ಕೋಟಿ ಬ್ಯುಸಿನೆಸ್ ಮಾಡ್ತಿದ್ದಾರೆ. ಇಂಥಾ ಕೃಷ್ಣಯಾದವ್ ಪರಿಶ್ರಮ ಪರಿಗಣಿಸಿದ ಭಾರತ ಸರ್ಕಾರ 2015ರಲ್ಲಿ ಅವರಿಗೆ ನಾರಿ ಶಕ್ತಿ ಸಮ್ಮಾನ್​​ಗೂ ಆಯ್ಕೆ ಮಾಡಿ ಗೌರವಿಸಿದೆ. ಈಗ ಕೃಷ್ಣಾ ದೆಹಲಿಯಲ್ಲಿ ದೊಡ್ಡ ಬ್ಯುಸಿನೆಸ್ ವುಮೆನ್.. ಬಾಟಲಿಯಲ್ಲಿ ಉಪ್ಪಿನಕಾಯಿ ತುಂಬಿಕೊಂಡು ರೋಡ್ ರೋಡ್​​ನಲ್ಲಿ ಮಾರುತ್ತಿದ್ದ ಕೃಷ್ಣಾ ಇವತ್ತು 4 ದೊಡ್ಡ ಕಂಪನಿ ಕಟ್ಟಿದ್ದಾರೆ. ಶ್ರೀ ಕೃಷ್ಣಾ ಪಿಕಲ್ಸ್ ಈಗ ದೆಹಲಿಯಲ್ಲಿ ಸಖತ್ ಫೇಮಸ್. ನೂರಾರು ಜನ ಕೃಷ್ಣಾ ಅವ್ರ ಕಂಪನಿಯಲ್ಲಿ ಕೆಲಸಮಾಡ್ತಿದ್ದಾರೆ. ಕೃಷ್ಣಾ ಅವ್ರು ಈಗಲೂ ತಾವೇ ಮುಂದೆ ನಿಂತು ಫ್ಯಾಕ್ಟರಿಯಲ್ಲಿ ಉಪ್ಪಿನಕಾಯಿ ತಯಾರಿಸ್ತಾರೆ. ನಾರಿ ಮನಸ್ಸಿ ಮಾಡಿದ್ರೆ ಏನ್ ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಕೃಷ್ಣಾ ಯಾದವ್ ಅವ್ರೇ ಸಾಕ್ಷಿ.

- Advertisement -

Latest Posts

Don't Miss