ಮೈಸೂರು: ಮೈಸೂರು ನಗರ ಪೊಲೀಸರು ನೂತನ ನಿಯಮ ಜಾರಿಗೆ ತಂದಿದ್ದು, ಇನ್ಮುಂದೆ ಮನೆ ಬಾಡಿಗೆ ಪಡೆಯಬೇಕಾದರೆ ಸ್ಥಳೀಯ ಪೊಲೀಸ್ ಠಾಣಾಯಿಂದ ಕ್ಲಿಯರೆನ್ಸ್ ಸರ್ಟಿಫಿಕೆಟ್ ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಉಗ್ರ ನಕಲಿ ದಾಖಲೆಗಳನ್ನು ನೀಡಿ ಮನೆ ಬಾಡಿಗೆ ಪಡೆದಿದ್ದ ಎಂದು ತಿಳಿದುಬಂದಿದ್ದರಿಂದ ಮೈಸೂರು ನಗರ ಪೊಲೀಸರು ಈ ನಿಯಮ ಜಾರಿಗೆ ತಂದಿದ್ದಾರೆ.
ನ. 27ರಂದು ಹಾಸನದಲ್ಲಿ ಸ್ವದೇಶಿ-ವಿದೇಶಿ ತಳಿಯ ಶ್ವಾನ ಪ್ರದರ್ಶನ
ಮನೆ ಬಾಡಿಗೆ ಕೊಡುವ ಮಾಲಿಕರು ಮೊದಲು ಬಾಡಿಗೆದಾರರಿಂದ ಕಡ್ಡಯವಾಗಿ ಕ್ಲೀಯರೆನ್ಸ್ ಸರ್ಟಿಫಿಕೆಟ್ ಪಡೆದು ಬಾಡಿಗೆ ಕೊಡಬೇಕೆಂದು ಪೊಲೀಸ್ ಇಲಾಖೆ ಸೂಚಿಸಿದೆ. 100ರೂ. ಪಾವತಿಸಿ ಅರ್ಜಿ ಪಡೆದು ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು. ಬ್ಯಾಚುಲರ್, ಕುಟುಂಬಗಳಿಗೆ, ಪಿಜಿ ನಡೆಸುವವರಿಗೆ ಪ್ರತ್ಯೇಕ ಅರ್ಜಿ ಹಾಕಬೇಕು ಈಗಿರುವ ಬಾಡಿಗೆದಾರರ ಬಗ್ಗೆ ಮಾಹಿತಿ ನೀಡಬೇಕು. ಈ ನಿಯಮವನ್ನು ಎಲ್ಲಾ ಠಾಣೆಗಳು ಕಡ್ಡಾಯವಾಗಿ ಪಾಲಿಸಲು ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಸುತ್ತೋಲೆ ಹೊರಡಿಸಿದ್ದಾರೆ.
ಇಂದು ಸುಪ್ರೀಂಕೋರ್ಟ್ ನಲ್ಲಿ ಆಯೋಜಿಸಲಾದ ಸಂವಿಧಾನ ದಿನಾಚರಣೆಯಲ್ಲಿ ಮೋದಿ ಭಾಗಿ : ವಿವಿಧ ಯೋಜನೆಗಳೆಗೆ ಚಾಲನೆ