‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ‘ಹನಿಮೂನ್’ ವೆಬ್ ಸಿರೀಸ್ ಈಗಾಗಲೆ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ವೂಟ್ ಸೆಲೆಕ್ಟ್‌ನಲ್ಲಿ ಈ ವೆಬ್ ಸಿರೀಸ್ ರಿಲೀಸ್ ಆಗಿದ್ದು, ನಾಗಭೂಷಣ್ ಮತ್ತು ಸಂಜನಾ ಆನಂದ್ ಈ ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ವೆಬ್ ಕಂಟೆಂಟ್‌ಗಳು ಬಹಳ ಕಡಿಮೆ. ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ವೆಬ್ ಸಿರೀಸ್‌ಗಳು ಬಂದು ಯಶಸ್ವಿಯೂ ಕೂಡ ಆಗಿವೆ. ಈ ಹಿಂದೆ ಕನ್ನಡದಲ್ಲಿ ‘ಹಂಬಲ್ ಪೊಲಿಟಿಶಿಯನ್ ನೋಗರಾಜ್’ ಸಿರೀಸ್ ಬಿಡುಗಡೆಯಾಗಿ ತಕ್ಕ ಮಟ್ಟಿಗೆ ಯಶಸ್ವಿ ಆಗಿತ್ತು. ಈಗ ‘ಹನಿಮೂನ್’ ವೆಬ್ ಸಿರೀಸ್ ಕನ್ನಡದ ಮಟ್ಟಿಗೆ ಹೊಸ ಪ್ರಯತ್ನವಾಗಿದೆ.
ಪ್ರವೀಣ್ ಮತ್ತು ತೇಜಸ್ವಿನಿ ಮದುವೆಯಾಗಿ ಹನಿಮೂನ್‌ಗೆ ಹೋದಾಗ ನಡೆಯುವ ಪ್ರಸಂಗಗಳೇ ಈ ಸಿರೀಸ್‌ನ ಕಥಾ ವಸ್ತು. ಹನಿಮೂನ್ ಎಂದು ಹೇಳಿದ ತಕ್ಷಣ ವಯಸ್ಕರ ಕಂಟೆಂಟ್ ಇರಬಹುದು ಎಂಬ ಆಲೋಚನೆ ಹಲವರಲ್ಲಿ ಬರುತ್ತದೆ. ಆದರೆ ಈ ಸಿರೀಸ್‌ನ ಬರವಣಿಗೆ ಹಾಗಿಲ್ಲ. ಯಾವುದೇ ದೃಶ್ಯಗಳು ಸಹ ವಯಸ್ಕರ ಕಂಟೆಂಟ್ ಎನಿಸುವುದಿಲ್ಲ. ಆಧುನಿಕ ಜಗತ್ತಿನಲ್ಲಿ ಮದುವೆ, ಸಂಸಾರದ ಬಗ್ಗೆ ಹೆಚ್ಚು ತಿಳಿದುಕೊಂಡಿರದ ಯುವಕನೊಬ್ಬ ಅಗಾಧ ಕನಸು ಕಟ್ಟಿಕೊಂಡು ಮದುವೆಯಾದಾಗ ಆಗುವಂತಹ ಒಂದಷ್ಟು ಎಡವಟ್ಟುಗಳನ್ನು ಇಲ್ಲಿ ತೋರಿಸಲಾಗಿದೆ.
ಪ್ರವೀಣ್ ಆಗಿ ತಾವು ಪಾತ್ರದೊಳಗೆ ನಟಿಸುತ್ತಾರೆ ಎನ್ನುವುದಕ್ಕಿಂತ ವರ್ತಿಸುತ್ತಾ ಹೋಗುತ್ತಾರೆ. ನಾಯಕಿ ಸಂಜನಾ ಆನಂದ್ ಸ್ಯಾಂಡಲ್‌ವುಡ್‌ಗೆ ಸಿಕ್ಕ ಮತ್ತೊಂದು ಪ್ರತಿಭೆ. ಈಗಿನ ಕಾಲದ ಹುಡುಗಿಯರು ಹೇಗೆ ಇರುತ್ತಾರೋ ಹಾಗೆ ಸರಳವಾಗಿ, ಸುಂದರವಾಗಿ ನಟಿಸಿದ್ದಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ಬದುಕು ಬಹಳ ಸುಂದರ ಎಂಬುದು ಈ ಸಿರೀಸ್‌ನ ಒಟ್ಟಾರೆ ಸಾರಾಂಶ. ಆದರೆ ಅದನ್ನು ಆರು ಎಪಿಸೋಡ್‌ಗಳಲ್ಲಿ ಹೇಗೆ ತೋರಿಸಿದ್ದಾರೆ ಎಂಬುದೇ ಆಸಕ್ತಿದಾಯಕ ವಿಷಯವಾಗಿದೆ.
ಕ್ರೈಮ್ ಥ್ರಿಲ್ಲರ್ ಮಾದರಿಯ ಸಿರೀಸ್‌ಗಳ ನಡುವೆ ರೊಮ್ಯಾಂಟಿಕ್ ಜಾನರ್‌ನಲ್ಲಿ ಎಲ್ಲಾ ವರ್ಗದವರು ಕುಳಿತು ನೋಡುವಂತಹ ಸಿರೀಸ್ ಇದಾಗಿದೆ. ಇನ್ನು ಈ ಸಿರೀಸ್ ವೂಟ್ ಆ್ಯಪ್‌ನಲ್ಲಿದ್ದು, ಅದಕ್ಕೆ ಸಬ್‌ಸ್ಕ್ರೈಬ್ ಆಗಿ ನೋಡಬಹುದಾಗಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ