ಹುಬ್ಬಳ್ಳಿ : ಶ್ರೀಮಂತ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರೊಂದಿಗೆ ಸಲುಗೆಯನ್ನು ಬೆಳೆಸಿ ಹನಿಟ್ರ್ಯಾಪ್ ಮಾಡಿ ಹಣವನ್ನು ಕಿತ್ತುಕೊಳ್ಳುತ್ತಿದ್ದ ಗ್ಯಾಂಗ್ ಗೆ ಶಿಕ್ಷೆ ವಿಧಿಸಿ ಹುಬ್ಬಳ್ಳಿಯ 5ನೇ ಆಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್. ಗಂಗಾಧರ ತೀರ್ಪು ನೀಡಿದರು.
ಪ್ರಕರಣದ ಹಿನ್ನೆಲೆ…
30-07-2017 ಆರೋಪಿ ಅನುಭಾ ವಡವಿ ಎಂಬುವಳು ಪಿರ್ಯದಿದಾರನ್ನು ಕಾರವಾರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಉಳಿದ ಆರೋಪಿತರಿಗೆ ಅಲ್ಲಿಗೆ ಬರುವಂತೆ ತಿಳಿಸಿದಾಗ ಆರೋಪಿತರು ಬಂದು ಪಿರ್ಯಾದಿಗೆ ನೀನು ನಮ್ಮ ಹುಡುಗಿಗೆ ರೇಪ್ ಮಾಡಲು ಕರೆದುಕೊಂಡು ಬಂದಿದ್ದಿಯ ಅಂತಾ 4-5 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದಾರೆ. ಆಗ ಪಿರ್ಯಾದುದಾರ ಹಣವಿಲ್ಲ ಎಂದು ಹಣ ಕೊಡಲು ಒಪ್ಪದಿದ್ದಾಗ ಆತನ ಕಿವಿಯ ಹಿಂಭಾಗದಲ್ಲಿ ಬಲಗೈ ಹಾಗೂ ಹೊಟ್ಟೆಯ ಮೇಲೆ ಮಾರಣಾಂತಿಕವಾಗಿ ಗಾಯಪಡಿಸಿ, ಆತನ ಬಳಿಯಿದ್ದ ಮೊಬೈಲ್ ಪೋನ್ ಎ.ಟಿ.ಎಂ ಕಾರ್ಡ್‌ನಿಂದ ಹಣವನ್ನು ತೆಗೆಸಿಕೊಂಡು ಸಿದ್ದಾರೂಢ ಮಠದ ಬಳಿ ಬಿಟ್ಟು ಹೋಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ
ಆರೋಪಿತರಾದ ಗಣೇಶ ಶೆಟ್ಟಿ, ಆನಭಾ ವಡವಿ, ರಮೇಶ ಹಜಾರೆ ಹಾಗೂ ವಿನಾಯಕ ಹಜಾತೆ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 10,000 ರೂ. ದಂಡಣ ದಂಡದ ಮೊತ್ತ ಪಾವತಿಸುವಲ್ಲಿ ತಪ್ಪಿದಲ್ಲಿ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಾದವನ್ನು ಶ್ರೀಮತಿ ಸುಮಿತ್ರಾ ಎಂ. ಆಂಚಟಗೇರಿ ವಾದ ಮಂಡಿಸಿದರು.