Horoscope: ಹಣ ಉಳಿಸುವುದರಲ್ಲಿ ಈ ರಾಶಿಯವರು ತುಂಬಾ ಜಾಣರು

Horoscope: ಇಂದಿನ ಕಾಲದಲ್ಲಿ ಹಣವಿಲ್ಲವೆಂದಲ್ಲಿ ಏನೂ ಇಲ್ಲ. ಖುಷಿಯಾಗಿರಬೇಕು. ಬೇಕಾದ್ದನ್ನು ಖರೀದಿಸಬೇಕು. ಸಂಬಂಧ ಉತ್ತಮವಾಗಿರಬೇಕು. ಬಂಧು ಮಿತ್ರರು ಜೊತೆಗಿರಬೇಕು. ಹೀಗೆ ಎಲ್ಲದಕ್ಕೂ ಬೇಕಾಗಿರುವುದು ಕಾಸು. ಹಾಗಂತಲೇ ಹಿರಿಯರು ದುಡ್ಡಿಲ್ಲದವನನ್ನು ನಾಯಿನೂ ಮೂಸಲ್ಲ ಅನ್ನೋ ಮಾತು ಹೇಳಿರೋದು. ಈ ಮಾತನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ರಾಶಿಯ ಬಗ್ಗೆ ನಾವಿಂದು ವಿವರಣೆ ನೀಡಲಿದ್ದೇವೆ.

ವೃಷಭ ರಾಶಿ: ವೃಷಭ ರಾಶಿಯವರು ಎಲ್ಲರ ಕಷ್ಟಕ್ಕೆ ಸ್ಪಂದಿಸುವವರು. ಇವರಿಗೆ ಕೆಲಸವಿರಲಿ, ಇಲ್ಲದಿರಲಿ, ಉಡುಗೊರೆಯಾಗಿ ಸಿಕ್ಕ ಹಣ, ಅಥವಾ ಮನೆ ಖರ್ಚಿಗೆ ಯಾರಾದರೂ ಹಣ ನೀಡಿದರೆ, ಅದನ್ನು ಜಾಣತನದಿಂದ ಉಳಿತಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ಅವಶ್ಯಕತೆಗೆ ತಕ್ಕಂತೆ ಖರ್ಚು ಮಾಡುವ ಬುದ್ಧಿವಂತಿಕೆಯ ಸ್ವಭಾವ ಇವರದ್ದಾಗಿರುತ್ತದೆ.

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಎಷ್ಟು ಹಣ ಖರ್ಚು ಮಾಡಬೇಕೋ ಅಷ್ಟೇ ಹಣವನ್ನು ಅವಶ್ಯಕತೆಗಾಗಿ ಮಾತ್ರ ಖರ್ಚು ಮಾಡುತ್ತಾರೆ. ಇವರು ಕೂಡ ಹಣ ಉಳಿತಾಯ ಮಾಡುವ ಬುದ್ಧಿ ಹೊಂದಿದ್ದು, ಆ ಹಣವನ್ನು ತಮ್ಮವರ ಕಷ್ಟಕ್ಕಾಗಿ ಬಳಸುತ್ತಾರೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಶ್ರಮಜೀವಿಗಳು. ಹಿಡಿದ ಕೆಲಸವನ್ನು ಛಲ ಬಿಡದೇ ಸಾಧಿಸುವವರು. ಹಾಗಾಗಿ ಇವರು ಶ್ರಮಪಟ್ಟು ದುಡಿದ ಹಣವನ್ನು ಶೋಕಿ ಮಾಡಲು ಬಳಸುವುದಿಲ್ಲ. ಬದಲಾಗಿ ಜಾಣತನದಿಂದ ಹಣವನ್ನು ಮನೆ ಖರೀದಿಸಲು, ಅಥವಾ ಇನ್ನಿತರ ಕೆಲಸಗಳಲ್ಲಿ ಹೂಡಿಕೆ ಮಾಡಿ, ಭವಿಷ್ಯಕ್ಕಾಗಿ ಹಣ ಉಳಿಸುವಲ್ಲಿ ಯಶಸ್ವಿಯಾಗುತ್ತಾರೆ.

ಧನು ರಾಶಿ: ಹೆಸರಿನಲ್ಲೇ ಧನವನ್ನು ಹೊಂದಿರುವ ರಾಶಿಯವರು ಇವರು. ಹಣ ಉಳಿತಾಯ ಮಾಡುವುದರಲ್ಲಿ ಮತ್ತು ಹಣ ಗಳಿಸುವುದರಲ್ಲಿ ಈ ರಾಶಿಯವರು ನಿಸ್ಸೀಮರು. ಎಲ್ಲಿ ಹಣ ಹೂಡಿಕೆ ಮಾಡಬೇಕು. ಯಾವ ಸಲುವಾಗಿ ಹಣ ಖರ್ಚು ಮಾಡಬೇಕು. ಮತ್ತು ಯಾವ ರೀತಿ ಜಾಣತನದಿಂದ ದುಡ್ಡು ಸಂಪಾದನೆ ಮಾಡಬೇಕು ಅಂತಾ ಈ ರಾಶಿಯವರಿಗೆ ತಿಳಿದಿರುತ್ತದೆ.

About The Author