Friday, July 4, 2025

Latest Posts

Wheeling : ಹೊಸಕೋಟೆಯಲ್ಲಿ ಮತ್ತೆ ವ್ಹೀಲಿಂಗ್ ಹುಚ್ಛಾಟ ..!

- Advertisement -

Hosakote News: ರಾಜ್ಯದಲ್ಲಿ  ಮತ್ತೆ ಮುಂದುವರೆದಿದೆ ವ್ಹೀಲಿಂಗ್ ಹುಚ್ಚಾಟ. ಇತ್ತೀಚೆಗಷ್ಟೇ ವ್ಹೀಲಿಂಗ್ ಗಳ ಹುಚ್ಚಾಟದ ಬಗ್ಗೆ ಟ್ರಾಫಿಕ್ ಪೊಲೀಸ್ ವಿಭಾಗ ಗಮನ ಹರಿಸಿದ್ದು ಹುಚ್ಚಾಡ ಮಾಡೋರು  ಮಾತ್ರ ಈ ಬಗ್ಗೆ ಗಮನ ಹರೊಸುತ್ತಿಲ್ಲ. ಬದಲಾಗಿ ಮತ್ತೆ ಮತ್ತೆ ವ್ಹೀಲಿಂಗ್ ಮಾಡಿ ಫೋಟೋಗಳನ್ನು ಹರಿ ಬಿಡುತ್ತಲೇ ಇದ್ದಾರೆ.

ಇದೀಗ ಟ್ವಿಟರ್ ನಲ್ಲಿ  NH 75 ಹೈ ವೇ ಹೊಸಕೋಟೆ ಬೆಂಗಳೂರು ಹೈವೇಯಲ್ಲಿ ಸ್ಟಂಟ್ ಮಾಡುವ  ಪುಂಡರ ವೀಡಿಯೋ  ವೈರಲ್ ಆಗಿದೆ. ಇನ್ನು ಈ ಹುಡುಗರ ದೌರ್ಜನ್ಯವನ್ನು ನೀವು ಮಾತ್ರ ನೋಡುತ್ತೀರಿ

ಬೈಕ್ ಸಂಖ್ಯೆ KA53HK0809 ಮತ್ತು ಸಮಯ ಜುಲೈ 16 ರಂದು ಮಧ್ಯಾಹ್ನ 12:15 ಕ್ಕೆ ಎಂಬುದಾಗಿ ಟ್ವಿಟ್ ಮಾಡಿ ಒಬ್ಬರು ಟ್ರಾಫಿಕ್  ಪೊಲೀಸರ ಗಮನಕ್ಕೆ ತಂದಿದ್ದಾರೆ. ನೀವು ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುತ್ತೀರಿ ಎಂದು ಭಾವಿಸುತ್ತೇವೆ ಎಂಬುವುದಾಗಿ ಕೇಳಿಕೊಂಡಿದ್ದಾರೆ.

ಒಟ್ಟಾರೆ ಇಂತಹ ಸ್ಟಂಟ್ ಹುಚ್ಚಾಟಕ್ಕೆ ಸಾರ್ವಜನಿಕರಿಗೆ  ತೊಂದರೆಯಾಗುತ್ತಿದ್ದು ಜೊತೆಗೆ ಪ್ರಾಣಾಪಾಯವು ತಂದೊಡ್ಡುತ್ತಿದ್ದು  ಇದರ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.

- Advertisement -

Latest Posts

Don't Miss