Sunday, September 8, 2024

Latest Posts

Hospital visit: ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಡೀರ್ ಭೇಟಿ ನೀಡಿದ ವಿಜಯ್ ಸಿಂಗ್

- Advertisement -

ಬೀದರ್: ಜಿಲ್ಲೆಯ ಹುಲಸೂರು ತಾಲೂಕು ಕಚೇರಿಗಳಿಗೆ ಧಿಡೀರ್ ಭೇಟಿ ನೀಡಿದ ಕಾಂಗ್ರೆಸ್ ನಾಯಕ ಮಾಜಿ ವಿಧಾನಪರಿಷತ್ ಸದಸ್ಯ ವಿಜಯ್ ಸಿಂಗ್ ಅವರು ಹುಲಸೂರ ತಾಲೂಕಿನ ಆರೋಗ್ಯ ಸಮುದಾಯ ಕೇಂದ್ರ.ತಾಲೂಕು ಪಂಚಾಯಿತಿ ಕಚೇರಿ.ತಹಶೀಲ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗಬಾರದು ಎಂದು ಸಿಬ್ಬಂದಿಗಳಿಗೆ ಏಚ್ಚರಿಕೆ ನೀಡಿದರು .ಯಾವುದೇ ರೀತಿ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತರಬೇಕು ನಿಮ್ಮ ಬೆನ್ನಿಗೆ ಕಾಂಗ್ರೆಸ್ ಸರ್ಕಾರವಿದೆ ಎಂದು ತಿಳಿಸಿದರು.

ಇನ್ನು ತಾಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಹುಲಸೂರ ನಗರದಲ್ಲಿ ಮೂಲ ಸೌಕರ್ಯ ಕೊರತೆ ಎದ್ದು ಕಾಣುತ್ತಿದ್ದು ಕೂಡಲೆ ಸಾರ್ವಜನಿಕ ಶೌಚಾಲಯ.ಬಸ್ ನಿಲ್ದಾಣ ಮಾಡಿಸಬೇಕು ಎಂದು ತಿಳಿಸಿದರು. ನಂತರ ತಹಸಿಲ್ ಕಚೇರಿಗೆ ಆಗಮಿಸಿದ ಅವರು ಗೃಹ ಜ್ಯೋತಿ ಗೃಹ ಲಕ್ಷ್ಮಿ ನೊಂದಣಿಗಳ ಬಗ್ಗೆ ಮಾಹಿತಿ ಪಡೆದರು..

ಇದೆ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಮಾಜಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.ರಾಜ್ಯ ಸಚಿವ ಈಶ್ವರ ಖಂಡ್ರೆ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುತ್ತೆನೆ ಈಗಾಗಲೆ ಅವರ ಮೇಲೆ ಎಫ್ ಐ ಆರ್ ದಾಖಲಾಗಿದೆ ಅರಗ ಜ್ಞಾನೇಂದ್ರ ಅವರಿಗೆ ಅವರ ತಪ್ಪಿನ ಅರ್ಥ ಅವರಿಗಾಗಿದೆ ಎಂದು ತಿಳಿಸಿದರು

ಬಿಜೆಪಿಗರು ಸೋತಿರುವ ಹತಾಶಯದಲ್ಲಿ ರಾಜ್ಯ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಆರೋಪ ಸತ್ಯವಿದ್ಧರೆ ಕೂಡಲೆ ದಾಖಲೆಗಳು ತೋರಿಸಬೇಕು ಎಂದು ತಿಳಿಸಿದರು.

SDPI: ದೇಶದಲ್ಲಿನ ಹಿಂಸಾಚಾರ ವಿರೋಧಿಸಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ

Gruha jyothi: ಗೃಹ ಜ್ಯೋತಿ ಉದ್ಘಾಟನೆ: ಖರ್ಗೆ ತವರು ನೆಲದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜು

Hubli college: ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ರಕ್ಷಣೆ ಇಲ್ಲದಂತಾಗಿದೆ.

- Advertisement -

Latest Posts

Don't Miss