ನಾವು ಹೊಟೇಲ್, ತಿಂಡಿ- ಪಾನೀಯಗಳ ಅಂಗಡಿ ಏನೋ ಇಡ್ತೀವಿ. ಆದ್ರೆ ಅದು ಲಾಭವಾಗೋ ಸ್ಥಳದಲ್ಲಿ ಇದೆಯಾ ಇಲ್ಲವಾ ಅನ್ನೋದನ್ನ ನೋಡೋದೇ ಇಲ್ಲ. ನಾವಿವತ್ತು ತಿಂಡಿ ಅಂಗಡಿ ಇಟ್ಟರೆ ಲಾಭವಾಗುವಂಥ ಸ್ಥಳಗಳನ್ನ ಹೇಳ್ತೀವಿ.
ಶಾಲಾ- ಕಾಲೇಜಿನ ಬಳಿ: ದೂರ ದೂರದಿಂದ ಮಕ್ಕಳು ಶಾಲೆ ಕಾಲೇಜಿಗೆ ಬರ್ತಾರೆ. ಅಂಥವರು ಮೊದಲು ಹುಡುಕೋದು ಶಾಲಾ ಕಾಲೇಜಿನ ಬಳಿ ಎಲ್ಲಾದ್ರೂ ತಿಂಡಿ ಅಥವಾ ಜ್ಯೂಸ್ ಅಂಗಡಿ ಇದೆಯಾ ಅಂತಾ. ಆದ್ದರಿಂದ ಶಾಲಾ ಕಾಲೇಜಿನ ಬಳಿ ನೀವು ಚಾಟ್ಸ್ ಅಂಗಡಿ, ಹೊಟೇಲ್, ಐಸ್‌ಕ್ರೀಮ್ ಪಾರ್ಲರ್, ಜ್ಯೂಸ್ ಅಗಡಿ, ಕಬ್ಬಿನ ಹಾಲಿನ ಅಂಗಡಿ, ಫ್ರೂಟ್ ಸಲಾಡ್ ಅಂಗಿಡಯನ್ನ ಇಡಬಹುದು.
ಕಚೇರಿಗಳ ಬಳಿ: ಕಚೇರಿಗೆ ಬರುವವರಲ್ಲಿ ಹಲವರು ಸಮಯದ ಅಭಾವದಿಂದಲೋ ಅಥವಾ ಅಡುಗೆ ಮಾಡಲು ಬರದೇ ಇರುವ ಕಾರಣ, ಬ್ಯಾಗ್ ಹಿಡಿದು ಆಫೀಸ್‌ಗೆ ಬಂದು ಬಿಡ್ತಾರೆ. ರೋಡಲ್ಲೇ ಯಾವುದಾದರೂ ಹೊಟೇಲ್ ಇದ್ರೆ ತಿಂಡಿ ಕಟ್ಟಿಸಿಕೊಂಡರಾಯ್ತು ಎಂದು ಬರುವವರು, ಆಫೀಸ್‌ಗೆ ಹೊತ್ತಾಯ್ತು ಅಂತಾ ತಿಂಡಿ ತಿನ್ನೋದನ್ನ ಮರೆತು ಹೋಗ್ತಾರೆ. ಅಂಥವರು ಆಫೀಸ್ ಬಳಿ ತಿನ್ನೋಕ್ಕೆ ಏನಾದ್ರೂ ಸಿಗುತ್ತಾ ಅಂತಾ ನೋಡ್ತಾರೆ. ಆದ್ದರಿಂದ ಕಚೇರಿಗಳ ಬಳಿ ತಿಂಡಿ- ಪಾನೀಯಗಳ ಅಂಗಡಿ ಇಡಬಹುದು.
ಪ್ರವಾಸಿ ತಾಣದ ಬಳಿ: ಜನ ಟೈಮ್ ಸಿಕ್ಕಾಗೆಲ್ಲ ಟ್ರಿಪ್ ಹೋಗೋ ಪ್ಲಾನ್ ಮಾಡ್ತಾರೆ. ಆದ್ರೆ ಟ್ರಿಪ್‌ಗೆ ಬರೋ ಧಾವಂತದಲ್ಲಿ ಅಲ್ಲಿ ತಿನ್ನೋಕ್ಕೆ ತಿಂಡಿ ತೀರ್ಥ ಸಿಗತ್ತೆೋ ಇಲ್ವೋ ಅನ್ನೋ ಯೋಚನೆನೂ ಮಾಡದೇ ಹಾಗೇ ಬರ್ತಾರೆ. ಆಮೇಲೆ ಪ್ರವಾಸಿ ತಾಣದ ಬಳಿ ಬಂದು ತಿಂಡಿ ಹುಡಕ್ತಾರೆ. ಇದರಲ್ಲಿ ಜನ ಹೆಚ್ಚಾಗಿ ಪ್ರವಾಸಕ್ಕೆ ಬರೋದು ಬೇಸಿಗೆಯಲ್ಲಿ. ಹಾಗಾಗಿ ಪ್ರವಾಸಿ ತಾಣದ ಬಳಿ ಫ್ರೂಟ್ ಸಲಾಡ್ ಅಂಗಡಿ, ಜ್ಯೂಸ್, ಐಸ್‌ಕ್ರೀಮ್, ಎಳನೀರಿನ ಅಂಗಡಿ ಇಡುವುದು ಉತ್ತಮ.
ಪ್ರಸಿದ್ಧ ದೇವಸ್ಥಾನಗಳ ಬಳಿ: ಕರ್ನಾಟಕದ ಹೆಚ್ಚಿನ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಇದ್ದೇ ಇರತ್ತೆ. ಆದ್ರೂ ಹಲವು ಭಕ್ತರು ಹೊಟೇಲ್ ಮೊರೆ ಹೋಗ್ತಾರೆ. ಅಲ್ಲದೇ, ಸಂಜೆ ದೇವಸ್ಥಾನದಲ್ಲಿ ತೇರು, ವಿಶೇಷ ಪೂಜೆ ಇದ್ದರೆ. ಅದನ್ನ ನೋಡಲು ಕಾದು, ಸಂಜೆ ಹೊತ್ತು ದೇವಸ್ಥಾನದ ಅಕ್ಕಪಕ್ಕದ ಜಾಗಗಳಿಗೆ ಭೇಟಿ ನೀಡ್ತಾರೆ. ಈ ವೇಳೆ ಬಿಸಿ ಬಿಸಿ ಟೀ ಕಾಫಿ, ಚಾಟ್ಸ್ ಸಿಕ್ಕರೆ ತಿಂತಾರೆ. ಆದ್ದರಿಂದ ದೇವಸ್ಥಾನದ ಬಳಿ ನೀವೂ ಟೀ- ಕಾಫಿ ಅಂಗಡಿ, ಚಾಟ್ಸ್ ಅಂಗಡಿ ಇಟ್ಟರೆ ಒಳ್ಳೆಯ ಲಾಭವಿದೆ. ಅಲ್ಲದೇ, ಸಸ್ಯಹಾರಿ ಹೊಟೇಲ್, ಜ್ಯೂಸ್ ಸೆಂಟರನ್ನ ಸಹ ಇಡಬಹುದು.
ಈ ಕೆಲಸ ಮಾಡುವಾಗ ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ವಿಷಯ ಅಂದ್ರೆ, ಶುಚಿತ್ವವನ್ನ ಕಾಪಾಡಬೇಕು. ಗ್ರಾಹಕರಿಗೆ ಒಳ್ಳೆಯ ಆಹಾರವನ್ನ ಸಪ್ಲೈ ಮಾಡಬೇಕು. ಫಸ್ಟ್ ಇಂಪ್ರೆಷನ್ ಈಸ್ ಬೆಸ್ಟ್ ಇಂಪ್ರೆಷನ್ ಅನ್ನೋ ರೀತಿ, ನಿಮ್ಮ ಆಹಾರಾನ ಟೇಸ್ಟ್ ಮಾಡಿದ ಜನ ಭೇಷ್ ಅನ್ನುವಂತಿರಬೇಕು. ಒಮ್ಮೆ ರುಚಿಗೆಟ್ಟರೆ ಜನ ಮತ್ತೆ ಆ ಹೊಟೇಲ್‌ಗೆ ಭೇಟಿ ನೀಡಲು ಹಿಂಜರಿಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನೀವು ಅಂಗಡಿ ಇಡುವ ಜಾಗ ಉತ್ತಮವಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ