ಬೆಂಗಳೂರು: ಪ್ರತಿ ದಿನ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಅಗತ್ಯ ಸ್ತುಗಳ ಬೆಲೆ ಏರಿಕೆಯಿಂದಾಗೆ ಬೆಂಗಳೂರಿನ ಹೊಟೆಲ್ ಗಳಲ್ಲಿ ಆಹಾರ ದರ ಏರಿಕೆ ಕುರಿತು ಹೊಟೆಲ್ ಮತ್ತು ರೆಸ್ಟೋರೆಂಟ್ ಮಾಲಿಕರ ಸಂಘವು ಚರ್ಚೆ ನಡೆಸಿದ್ದಾರೆ. ರೆಸ್ಟೊರೆಂಟ್‌ಗಳು ಮತ್ತು ಫಾಸ್ಟ್ ಫುಡ್ ಮಳಿಗೆಗಳಲ್ಲಿ ಆಹಾರದ ಬೆಲೆಯನ್ನು ಶೇಕಡಾ 10 ರಿಂದ 15 ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಹೋಟೆಲ್ ಮಾಲೀಕರ ಸಂಘವು ಜುಲೈ 25 ರಂದು ಕರೆದಿರುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ
ಹೆಚ್ಚಳವಾಗುತ್ತಿರುವ ಸರಕುಗಳ ಬೆಲೆ ತರಕಾರಿ ಬೆಲೆ ವಿದ್ಯುತ್ ಬೆಲೆ ಏರಿಕೆಯಿಂದಾಗಿ ಮೊದಲಿನಂತೆ ಅದೇ ದರದಲ್ಲಿ ಕೊಡಲು ಸಾದ್ಯವಿಲ್ಲ ಹಾಗಾಗಿ ಹೋಟೆಲ್‌ಗಳಲ್ಲಿ ನೀಡುವ ಆಹಾರದ ಬೆಲೆ ಕನಿಷ್ಠ ಶೇ 10ರಷ್ಟು ಹೆಚ್ಚಳ ಅನಿವಾರ್ಯ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.ಈಗಾಗಲೇ ಕೆಲವು ಹೋಟೆಲ್ ಮಾಲೀಕರು ಬೆಲೆ ಏರಿಕೆ ಮಾಡಿದ್ದು, ಇನ್ನು ಕೆಲವರು ಆಷಾಢ ಮುಗಿಯಲು ಕಾಯುತ್ತಿದ್ದಾರೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
.ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಭೀಮಾ ನಾಯ್ಕ್ ನೇತೃತ್ವದ ನಿಯೋಗ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಂದಿನಿ ಹಾಲಿನ ದರವನ್ನು ಲೀಟರ್‌ಗೆ 5 ರೂ. ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ಇಟ್ಟಿದೆ.ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಅದರ ಆಧಾರದ ಮೇಲೆ ಜುಲೈ 25 ರಂದು ಕರೆಯಲಾದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. hಆಗಾಗಿ ಈಗಾಗಲೆ ನಗರದಲ್ಲಿ ಕೆಲವು ಹೊಟೆಲ್ ಗಳಲ್ಲಿ ಆಹಅರ ಬೆಲೆ ಹೆಚ್ಚಿಸಿವೆ.
Veerappa Moily : ಬಿಜೆಪಿಯು ಸೇಡಿನ ರಾಜಕೀಯ ಮಾಡುತ್ತಿದೆ : ಎಂ.ವೀರಪ್ಪ ಮೊಯ್ಲಿ
Free checkup-ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನಿಂದ ಪತ್ರಕರ್ತರಿಗೆ ಆರೋಗ್ಯ ತಪಾಸಣೆ