Tuesday, December 17, 2024

Latest Posts

ಶಿರಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗಿವೆ…?

- Advertisement -

state news

ಶಿರಾ(ಫೆ.20): ಶಿರಾ ಬೈ ಎಲೆಕ್ಷನ್ ನಲ್ಲಿ ಗೆದ್ದ ಬಿಜೆಪಿ ಶಾಸಕ ರಾಜೇಶ್ ಗೌಡ ಹಳ್ಳಿಗಳಿಗೆ ಭೇಟಿ ನೀಡಿ ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅಭಿವೃದ್ಧಿ ಕೆಲಸಗಳಲ್ಲಿ ಮುನ್ನಡೆಯುತ್ತಿದ್ದಾರೆ. ಹೌದು, ಶಿರಾದ ಬಿಜೆಪಿ ಶಾಸಕ, ಡಾ. ಸಿ ಎಂ ರಾಜೇಶ್ ಗೌಡ ತಾಲೂಕಿನ ಸುಮಾರು ಹಳ್ಳಿಗಳ ಕಡೆ ಕಾಲಿಡುತ್ತಿದ್ದು, ಜನರ ಜೊತೆ ಬೆರೆಯುತ್ತಿದ್ದಾರೆ. ಇವರು ಸುಮಾರು ಎರಡು ಕೋಟಿಗೂ ಹೆಚ್ಚು ಅಧಿಕ ಭೂಮಿ ಪೂಜೆ ನೆರವೇರಿಸಿದ್ದಾರೆ. ಈಗಾಗಲೇ ಶಿರಾ ತಾಲೂಕಿನಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಸಿಸಿ ರಸ್ತೆ ಹಾಗೂ ಚರಂಡಿ, ಡಾಂಬರೀಕರಣ ಕಾಮಗಾರಿಗಳು ನಡೆಯುತ್ತಿದ್ದು,  ಹಲವು ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ.

ಇನ್ನು ಶಾಸಕರು ಸಿರಾ ನಗರದಲ್ಲಿ ಎ.ಪಿ.ಎಂ.ಸಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ತುಂತುರು ನೀರು ಹನಿ (ಸ್ಪಿಂಕ್ಲರ್ ) ಪೈಪ್‌ಗಳನ್ನು ಸುಮಾರು 3,600 ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳ ಜೊತೆ ಮಾತನಾಡಿದ ಅವರು, ಅತ್ಯಧಿಕ ಪೈಪ್ ಗಳನ್ನು ವಿತರಿಸಲಾಗಿದ್ದು,  ತಾಲೂಕಿನ ರೈತರು ಇಂತಹ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇನ್ನು ಮಹಾಶಿವರಾತ್ರಿಯ ಪ್ರಯುಕ್ತ ಶಿರಾ ತಾಲೂಕಿನ ಗ್ರಾಮಾಂತರ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಪಟ್ಟನಾಯಕನಹಳ್ಳಿ ಶ್ರೀ ಶ್ರೀ ನಂಜಾವದ ಸ್ವಾಮೀಜಿ ಅವರ ಮಠಕ್ಕೆ ಭೇಟಿ ನೀಡಿ ಕಲ್ಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಹೀಗೆ, ಶಿರಾದಲ್ಲಿ ರಾಜೇಶ್ ಗೌಡ್ರು ಜನರಪರ ಕೆಲಸಗಳಲ್ಲಿ ಮಂದುವರೀತಾ ಇದ್ದು, ಶಿರಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ.

ಒಟ್ನಲ್ಲಿ ತುಮಕೂರಿನ  ಸರಳತೆಯ ಶಾಸಕ ಡಾ. ರಾಜೇಶ್ ಗೌಡ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಶಿರಾ ತಾಲೂಕಿನ ಜನರಿಗೆ ಹತ್ತಿರವಾಗುತ್ತಾ, ಕೆಲಸ ಕಾರ್ಯಗಳಿಂದ ಜನಮನಸ್ಸಿನಲ್ಲಿ ಉಳಿದುಕೊಳ್ಳುವ ಶಾಸಕರಾಗಿ ಹೊರಹೊಮ್ಮುತ್ತಾ, ಜನರ ಪಾಲಿಗೆ ದಾರಿದೀಪವಾಗ್ತಿದ್ದಾರೆ ಅನ್ನೋದು ಮಾತ್ರ ಸುಳ್ಳಲ್ಲ. ಹೀಗೆ ಜನಹಿತ ಕಾರ್ಯಗಳಿಂದ ಗುರುತಿಸಿಕೊಂಡು ಮುನ್ನಡೆಯಲಿ ಅನ್ನೋದು ನಮ್ಮ ಆಶಯ.

 

- Advertisement -

Latest Posts

Don't Miss