Thursday, May 30, 2024

Latest Posts

ಆರೋಪಿ ಫಯಾಜ್ ಮೊಬೈಲ್ನಲ್ಲಿದ್ದ ಫೋಟೋಗಳು ಲೀಕ್ ಆಗಿದ್ದು ಹೇಗೆ?: ಪ್ರಹ್ಲಾದ್ ಜೋಶಿ ಪ್ರಶ್ನೆ..

- Advertisement -

Dharwad News: ಧಾರವಾಡ: ಜೈಲಿನಲ್ಲಿರುವ ಆರೋಪಿ ಫಯಾಜ್ ಮೊಬೈಲ್​ನಲ್ಲಿದ್ದ ಫೋಟೋಗಳು ಹೊರಗೆ ಬಂದಿದ್ದು ಹೇಗೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ. ನೇಹಾ ಹಿರೇಮಠ ಕೊಲೆಯಾದಾಗ ಇದೇ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಮಂತ್ರಿ ಜಿ.ಪರಮೇಶ್ವರ್ ಅತ್ಯಂತ ಹಗುರಾಗಿ ಮಾತಾಡಿದ್ದರು. ನಾವು ಮೊದಲೇ ಫಾಸ್ಟ್ ಟ್ರ್ಯಾಕ್ ಕೋರ್ಟ್​​ಗೆ ಒತ್ತಾಯ ಮಾಡಿದ್ದೇವೆ. ಇವತ್ತು ಇವರು ಸಿಐಡಿಗೆ ಪ್ರಕರಣ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಇವರಿಗೆ ಜನ ಪ್ರತಿಭಟನೆಗೆ ಇಳಿದ ಮೇಲೆ‌ ಬುದ್ದಿ ಬಂದಿದೆ. ಕಾಂಗ್ರೆಸ್​ ಹಿಂದೂಗಳ‌ ಪರ ಇಲ್ಲಾ ಎಂದು ಪಕ್ಕಾ‌ ಆಗಿದೆ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ನಾವು ಹೋರಾಟ ಮಾಡಿದ್ದೇವೆ. ಅದಕ್ಕೆ ನೇಹಾ ಹಿರೇಮಠ ತಂದೆ ನನ್ನ ಪರ ಇದ್ದಾರೆ ಎಂದು ಹೇಳಿದ್ದಾರೆ. ನೀವು‌ ಹಿರೇಮಠ ಅವರ ಹೆಸರು ಕೆಡಿಸಲು ನೋಡಿದಿರಿ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಜೋಶಿ ಆರೋಪ

ಮಾನ, ಮರ್ಯಾದೆ ತರುವ ಕೆಲಸ ನೀವು ಮಾಡೋದಿಲ್ಲ. ಆರೋಪಿಯ ಮೊಬೈಲ್ನಲ್ಲಿದ್ದ ಫೋಟೊ ಲೀಕ್ ಮಾಡಿಸಿದ್ದಾರೆ, ಇವರಿಗೆ ನಾಚಿಕೆಯಾಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದರು.

ಹಿಂದೂ‌ ಸಮಾಜ ಗಟ್ಟಿ ಇರುವ ಕಡೆಯೇ ಹೀಗೆ ಆಗಿದೆ ಇನ್ನು ಬೇರೆ ಕಡೆ ಏನು‌ ಗತಿ ಎಂದು ಪ್ರಶ್ನಿಸಿದ ಪ್ರಹ್ಲಾದ್ ಜೋಶಿ, ಇಲ್ಲಿ ಜನಪ್ರತಿನಿಧಿಗಳು ಎಲ್ಲ ಸಮಾಜಕ್ಕೆ ಒಳ್ಳೆಯ ರೀತಿ‌ ನೋಡಿಕೊಂಡು ಹೋಗುತ್ತಿದ್ದಾರೆ. ನಾಳೆ ನಮ್ಮ ಸಂಸ್ಕೃತಿ ಉಳಿಸುವದು ಕಷ್ಟ ಆಗಿದೆ ಎಂದು ಪ್ರಹ್ಲಾದ್ ಜೋಶಿ ಆತಂಕ ವ್ಯಕ್ತಪಡಿಸಿದರು.

ಬರ ಪರಿಹಾರ ವಿಚಾರಕ್ಕೆ ಜೋಶಿ ಪ್ರತಿಕ್ರಿಯೆ

ಬರ‌ ಪರಿಹಾರ ಆದೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷದ ಇದರಲ್ಲಿ ರಾಜಕಾರಣ ಮಾಡುತ್ತಿದೆ. ನಾವು ಚುನಾವಣಾ ಆಯೋಗ ಅನುಮತಿ ಪಡೆದದ್ದು ಅವರಿಗೆ ತಿಳಿಸಿದ್ದಾರೆ. ಎಸ್ಡಿಆರ್ಎಫ್ನಲ್ಲಿ 900 ಕೋಟಿ ರೂಪಾಯಿ ಕೊಡಲಾಗಿದೆ. 900 ಕೋಟಿ ಅಡ್ವಾನ್ಸ್ ಆಗಿ ಕೊಡಲಾಗಿದೆ. ಆದರೆ‌ ನೀವು 1ಯುಪಿಎ ಸರ್ಕಾರ ಸಂದರ್ಭದಲ್ಲಿ ಈ ಫಂಡ್ ಕೂಡಾ ಬಿಡುಗಡೆ ಮಾಡಿರಲಿಲ್ಲ ಎಂದು ಹೇಳಿದರು.

ಹಿಜಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯನ್ನಾಗಿ ನೋಡಬಯಸುತ್ತೇನೆ: ಒವೈಸಿ

ನಾಲಾಯಕ್ ಪದ ಬಳಕೆ: ವಿಯಜೇಂದ್ರ ವಿರುದ್ಧ ಮರಾಠ ಸಮೂದಾಯದಿಂದ ಪ್ರತಿಭಟನೆ

ಕರ್ನಾಟಕದಲ್ಲಿ 18 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲೋದು ಗೊತ್ತಾದ ಮೇಲೆ ಇಂತಹ ಸುಳ್ಳು ಹೇಳ್ತಾ ಹೋಗ್ತಿದ್ದಾರೆ: ಕೋನರೆಡ್ಡಿ

- Advertisement -

Latest Posts

Don't Miss