Wednesday, August 20, 2025

Latest Posts

ತಮಿಳುನಾಡು ಶಾಸಕರ ಕನ್ನಡ ಎಷ್ಟು ಚಂದ! ಕನ್ನಡದಲ್ಲೇ ಮಾತು

- Advertisement -

ಈ ಬಾರಿ ಗಣೇಶ ಚತುರ್ಥಿಯನ್ನು ಆಗಸ್ಟ್ 27ರಂದು ಆಚರಿಸಲಾಗುತ್ತದೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ತಮ್ಮ ಏರಿಯಾದಲ್ಲಿ ಗಣೇಶನನ್ನು ಕೂರಿಸಲು ಎಲ್ಲೆಡೆ ಪುಟಾಣಿ ಮಕ್ಕಳು ಕಲೆಕ್ಷನ್ ಶುರು ಹಚ್ಚಿಕೊಂಡಿದ್ದಾರೆ. ಏರಿಯಾದ ಸುತ್ತ ಮುತ್ತ ಓಡಾಡುವ ಬೈಕ್, ಕಾರುಗಳನ್ನು ಅಡ್ಡಗಟ್ಟಿ ಕಲೆಕ್ಷನ್‌ಗೆ ಇಳಿದಿದ್ದಾರೆ.

ಹೀಗೆ ಪುಟಾಣಿ ಮಕ್ಕಳು ಶಾಸಕರ ಬಳಿ ಹಣ ಕೇಳಲು ಮುಂದಾಗಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು, ಗಣೇಶ ಕೂರಿಸಬೇಕು ಅಂತ ಮಕ್ಕಳು ಗೊತ್ತಿಲ್ಲದೇ ಶಾಸಕರ ಕಾರನ್ನು ಅಡ್ಡಗಟ್ಟಿದ್ದಾರೆ. ಇದೇ ವೇಳೆ ಕಾರಿನಲ್ಲಿ ತಮಿಳುನಾಡು ಡಿಎಂಕೆ ಪಕ್ಷದ ಶಾಸಕ ವೈ ಪ್ರಕಾಶ್ ಅವರು ಪ್ರಯಾಣಿಸುತ್ತಿದ್ದರು.

ಮಕ್ಕಳನ್ನು ನೋಡುತ್ತಿದ್ದಂತೆ ಕಾರನ್ನು ನಿಲ್ಲಿಸಿ ಅವರ ಜೊತೆಗೆ ಶಾಸಕ ಮಾತಾಡಿದ್ದಾರೆ. ವಿಶೇಷ ಏನೆಂದರೆ ಮಕ್ಕಳ ಜೊತೆಗೆ ಡಿಎಂಕೆ ಪಕ್ಷದ ಶಾಸಕ ವೈ ಪ್ರಕಾಶ್ ಅವರು ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಹೀಗೆ ಗಣೇಶ ಹಬ್ಬಕ್ಕೆ ಮಕ್ಕಳು ಶಾಸಕರ ಬಳಿ ಹಣ ಕೇಳಲು ಹೋಗಿದ್ದಾರೆ. ಆಗ ತಮಿಳುನಾಡಿನ ಹೊಸೂರು ಶಾಸಕ ಮಕ್ಕಳ ಜತೆ ಕನ್ನಡದಲ್ಲೇ ಮಾತನಾಡಿ, ನಾನು ಯಾರು ಗೊತ್ತಾ ಎಂದು ಮಕ್ಕಳಿಗೆ ಕೇಳಿದ್ದಾರೆ.

ಆಗ ಮಕ್ಕಳು ಗೊತ್ತಿಲ್ಲಾ ಸರ್ ಎಂದು ತಮಿಳಿನಲ್ಲೇ ಹೇಳಿದ್ದಾರೆ. ಆಗ ಗಣೇಶ ಕೂರಿಸಿ ಖುಷಿ ಪಡಲಿ ಎಂದು ಶಾಸಕ 100 ರೂಪಾಯಿ ಕೊಟ್ಟಿದ್ದಾರೆ. ಇದಾದ ಬಳಿಕ ನಿಮ್ಮ ಹೆಸರು ಏನು ಸರ್ ಎಂದು ಮಕ್ಕಳು ಕೇಳಿದ್ದಾರೆ. ಶಾಸಕ ತಮ್ಮ ಹೆಸರನ್ನ ಪೇಪರ್ ಮೇಲೆ ಬರೆಯುವಾಗ ಮಕ್ಕಳು ಶಾಕ್ ಆಗಿದ್ದಾರೆ. ಇವರು ಶಾಸಕ ಪ್ರಕಾಶ್ ಎಂದು ಮಕ್ಕಳು ಖುಷಿ ಪಟ್ಟಿದ್ದಾರೆ. ಶಾಸಕರ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss