www.karnatakatv.net :ಬೆಂಗಳೂರು: ನೀವ್ ಬಿಡಿ ಆಗಿನ್ ಕಾಲದ ಫುಡ್ ತಿಂದೋರು ಅದಕ್ಕೆ ಈಗಲೂ ಇಷ್ಟು ಆರೋಗ್ಯವಾಗಿದ್ದೀರ. ಆದ್ರೆ ನಾವ್ ನೋಡಿ ಎಲ್ಲಾ ಕಲಬರೆಕೆ ಫುಡ್ ತಿಂದು ಈಗಲೇ ಹೀಗಾಗಿದ್ದೀವಿ. ಇನ್ನು ಮುಂದೆ ಹೇಗೋ ಅನ್ನೋದು ಅನ್ನೋದು ಈಗಿನ ಜರೇಷನ್ ನವರ ಮಾತು. ಹೌದು, ನಾವು ತಿಂತಿರೋ ಆಹಾರದಲ್ಲಿ ಸಾರವೇ ಇಲ್ಲ ಅನ್ನೋದು ನಮ್ಗೆಲ್ಲಾ ಗೊತ್ತು. ಆದ್ರೆ ಇದನ್ನ ತಿನ್ನದೇ ಬೇರೆ ಏನನ್ನ ತಿಂದ್ರೆ ಆರೋಗ್ಯವಂತರಾಗಿರ್ಬಹುದು ಅನ್ನೋ ಬಗ್ಗೆ ತಲೆಕೆಡಿಸಿಕೊಳ್ಳೋಕೆ ಹೋಗ್ತಿಲ್ಲ. ಯಾಕಂದ್ರೆ ಇಂತಹ ಆಹಾರಗಳನ್ನ ತಿಂದೇ ನಮಗೆ ಅಭ್ಯಾಸ ಆಗಿಹೋಗಿದೆ.
ಈಗ ಮಾರುಕಟ್ಟೆಗಳಲ್ಲಿ ಸಿಗ್ತಿರೋ ಅಕ್ಕಿಗಳು ಹೇಗಿವೆ ಅಂದ್ರೆ, ಅಕ್ಕಿ ಮೇಲಿನ ಪದರವನ್ನೇ ಪಾಲಿಷ್ ಮಾಡೋ ಮೂಲಕ ಸಾರವನ್ನೇ ತೆಗೆದುಹಾಕಿರ್ತಾರೆ ಹೀಗಾಗಿ ಅನ್ನ ಮಾಡಿದ್ರೂ ಕೂಡ ಅದರ ಪೋಷಕಾಂಶ ನಮ್ಮ ದೇಹ ಸೇರೋದಿಲ್ಲ. ಇನ್ನು ಗೋಧಿ ಹಿಟ್ಟಿನ ಬಗ್ಗ ಕೇಳೋ ಹಾಗೇ ಇಲ್ಲ. ಗೋಧಿಯನ್ನ ನಾನಾ ರೀತಿ ಸಂಸ್ಕರಿಸಿ ಅದರ ಅಸಲಿ ಸತ್ವವನ್ನೇ ಮರೆಮಾಚಲಾಗ್ತಿದೆ. ಹಾಗಾದ್ರೆ ದಿನನಿತ್ಯ ಬಳಸೋ ಅಕ್ಕಿ, ಗೋಧಿ ಬಿಟ್ಟು ಬೇರೇನು ಬಳಸ್ಬೇಕು ಅಂತ ಚಿಂತೆ ಮಾಡ್ಬೇಡಿ. ಯಾಕಂದ್ರೆ ಸಾವಿರಾರು ವರ್ಷಗಳ ಹಿಂದೆ ನಮ್ಮ್ ಪೂರ್ವಜರು ಬಳಸ್ತಿದ್ದ ಸಿರಿಧಾನ್ಯಗಳು ಈಗ ನಮ್ಗೆಲ್ಲಾ ಸುಲಭವಾಗಿ ಸಿಗ್ತಿದೆ.
ಹೌದು, ಸಿರಿಧಾನ್ಯಗಳು ಅಂದ್ರೆ ರಾಗಿ, ಜೋಳ, ಸಜ್ಜೆ, ನವಣೆ, ಬರಗು, ಸಾಮೆ, ಊದಲು, ಅರ್ಕ, ಕೊರಲೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕ ಸತ್ವಗಳಾದ ಮೆಗ್ನೀಷಿಯಂ, ತಾಮ್ರ, ಪಾಸ್ಪರಸ್ ಮತ್ತು ಮ್ಯಾಂಗನೀಸ್ ಅಂಶಗಳಿವೆ. ಇತರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳ ಲಾಭವೇ ಹೆಚ್ಚು. ಸಿರಿಧಾನ್ಯಗಳಲ್ಲಿ ಯಾವುದೇ ಬಗೆಯ ಗ್ಲುಟೆನ್ ಅಂಶ ಮತ್ತು ಆಮ್ಲದ ಅಂಶ ಇರುವುದಿಲ್ಲ. ಹೀಗಾಗಿ ಇದು ಶುಗರ್ ಇರೋರಿಗೆ ಹೇಳಿ ಮಾಡಿಸಿದ ಆಹಾರ.
ಸಿರಿಧಾನ್ಯಗಳಲ್ಲಿ ಅತಿ ಕಡಿಮೆ ಕ್ಯಾಲೊರಿ ಇದೆ ಅಲ್ಲದೆ ಸುಲಭವಾಗಿ ಜೀರ್ಣವಾಗೋದಿಲ್ಲ. ಇದು ತೂಕ ಇಳಿಸಿಕೊಳ್ಳಬೇಕು ಅನ್ನೋರಿಗೆ ಒಂದು ವರ ಅಂದ್ರೆ ತಪ್ಪಾಗೋದಿಲ್ಲ.
ಸಿರಿಧಾನ್ಯಗಳಲ್ಲಿ ದೇಹಕ್ಕೆ ಅವಶ್ಯವಿರುವ ಅಗತ್ಯವಾದ ಪ್ರೊಟೀನ್, ಕೊಬ್ಬಿನ ಅಂಶಗಳು ಅದರಲ್ಲೂ ನೈಸರ್ಗಿಕ ಕೊಬ್ಬಿನ ಆಮ್ಲಗಳಿವೆ. ನಮ್ಮ ದೇಹದ ಮಾಂಸ – ಖಂಡಗಳ ಮೇಲೆ ಶೇಖರಣೆಯಾಗೋ ಕೊಲೆಸ್ಟ್ರಾಲ್ ಅಂಶಗಳನ್ನು ಮತ್ತು ಕೊಬ್ಬಿನ ಅಂಶಗಳನ್ನು ನಿಯಂತ್ರಿಸಿ ಪಾರ್ಶ್ವ ವಾಯು, ಬಿಪಿ, ಹೃದಯ ಸ್ತಂಭನ ಮತ್ತು ಹಾರ್ಟ್ ಅಟ್ಯಾಕ್ ಸೇರಿದಂತೆ ಇತರೆ ಹೃದ್ರೋಗಗಳಿಗೆ ಕಡಿವಾಣ ಹಾಕುತ್ತೆ.
ಇನ್ನು ಸಿರಿಧಾನ್ಯಗಳಲ್ಲಿ ಅತಿ ಹೆಚ್ಚು ಬಳಕೆಯಾಗ್ತಿರೋ ಸಜ್ಜೆ, ಕೊರಲೆ ಮತ್ತು ಸಾಮೆಗಳಲ್ಲಿ ಹೆಚ್ಚಿನ ಕಬ್ಬಿಣಾಂಶವಿದ್ದು ರಕ್ತಹೀನತೆಯಿಂದ ದೂರ ಇಡುತ್ತೆ. ಸಿರಿಧಾನ್ಯಗಳಲ್ಲಿ ಬಿಸಿಬೇಳೆ ಬಾತ್, ಉಪ್ಪಿಟ್ಟು, ಹೋಳಿಗೆ, ದೋಸೆ, ಇಡ್ಲಿ ಹೀಗೆ ಸಾಕಷ್ಟು ವೆರೈಟಿಯ ಆಹಾರವನ್ನ ತಯಾರಿಸಬಹುದು.
ಪ್ರೋಟೀನ್, ವಿಕಮಿನ್ಸ, ಮೆಗ್ನೀಷಿಯಂ ಮತ್ತಿತರ ಖನಿಜಗಳನ್ನ ಹೊಂದಿರೋ ಈ ಸಿರಿಧಾನ್ಯಗಳ ದಿನನಿತ್ಯದ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಆರೋಗ್ಯಯುತ ಜೀವನ ನಡೆಸಬಹುದಾಗಿದೆ.
ಕರ್ನಾಟಕ ಟಿವಿ – ಬೆಂಗಳೂರು