ಮಾರುತಿ ಸುಜುಕಿ Baleno ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ. ಇದು ಉತ್ತಮವಾದ ವಿನ್ಯಾಸ ಹಾಗೂ ಅತ್ಯಾಕರ್ಷಕ ವೈಶಿಷ್ಟ್ಯಗಳಿಗೂ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಪ್ರಯಾಣಿಕರ ರಕ್ಷಣೆಗಾಗಿ ಈ ಕಾರನ್ನು ನವೀಕರಿಸಿಯೂ ಬಿಡುಗಡೆಗೊಳಿಸಲಾಗಿದೆ.
ಇನ್ಮುಂದೆ ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್‌ನ ಪ್ರತಿಯೊಂದು ವೇರಿಯೆಂಟ್ಗಳು ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್‌ನೊಂದಿಗೆ ಖರೀದಿಗೆ ದೊರೆಯಲಿವೆ. ಹೀಗಾಗಿ, ಈ ಬಲೆನೊ ಕಾರಿನ ದರವನ್ನು 0.5% ಹೆಚ್ಚಳ ಮಾಡಲಾಗಿದ್ದು, ಎಕ್ಸ್-ಶೋರೂಂ ಬೆಲೆಯಲ್ಲಿ ರೂ.6.70 ಲಕ್ಷದಿಂದ 9.92 ಲಕ್ಷ ಇದೆ.
ಇತ್ತಿಚೀಗೆ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ, ಇದೇ ಮಾರುತಿ ಸುಜುಕಿ ಬಲೆನೊವನ್ನು ಅತ್ಯಂತ ಸುರಕ್ಷಿತ ಕಾರೆಂದು ತೀರ್ಮಾನಿಸಿತು. ಜೊತೆಗೆ ವಿವಿಧ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ, 4-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿತ್ತು. ನೂತನ ಮಾರುತಿ ಸುಜುಕಿ ಬಲೆನೊ 6 ಏರ್‌ಬ್ಯಾಗ್‌ನೊಂದಿಗೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 3 – ಪಾಯಿಂಟ್ ಸೀಟ್‌ಬೆಲ್ಟ್‌ಗಳು, ರೇರ್ ಪಾರ್ಕಿಂಗ್ ಸೇನಾರ್ಸ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಹೊಸ ಮಾರುತಿ ಬಲೆನೊ ಸಿಗ್ಮಾ, ಡೆಲ್ಟಾ, ಜಿಟಾ ಮತ್ತು ಆಲ್ಪಾ ಎಂಬ ವೇರಿಯೆಂಟ್ಗಳೊಂದಿಗೆ ಲಭ್ಯವಿದೆ. 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದ. ಹೆಚ್ಚಿನ ಲಗೇಜ್ ಸಾಗಿಸಲು 318 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ. ಇನ್ನು, ಈ ಮೊದಲು ಮಾರುತಿ ಸುಜುಕಿ ಬಲೆನೊ ಕಾರಿನ ಟಾಪ್ ಎಂಡ್ ವೇರಿಯೆಂಟ್ ಮಾತ್ರ 6 ಏರ್‌ಬ್ಯಾಗ್‌ನೊಂದಿಗೆ ಖರೀದಿ ಲಭ್ಯವಾಗುತ್ತಿದ್ದವು. ಉಳಿದ ರೂಪಾಂತರಗಳನ್ನು 2 ಏರ್‌ಬ್ಯಾಗ್ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಪ್ರಸ್ತುತ ಎಲ್ಲ ರೂಪಾಂತರಗಳನ್ನು 6 ಏರ್‌ಬ್ಯಾಗ್‌ನೊಂದಿಗೆ ಮೇಲ್ದರ್ಜೆರಿಸಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ