ದುಡ್ಡು ಮಾಡು ಇಲ್ಲ ದುಡಿತಾ ಇರು ಎನ್ನು ಗಾದೆ ಇತ್ತೀಚಿನ ದಿನಗಳಲ್ಲಿ ಬಾರಿ ಅನ್ವಯವಾಗುತ್ತದೆ. ಮೊದಲೆಲ್ಲ ಹಣ ಇಲ್ಲದಿದ್ದರೂ ಹಳ್ಳಿಗಳಲ್ಲಿ ಆರಾಮವಾಗಿ ನಮ್ಮ ಹಿರಿಯರು ಸುಖವಾಗಿ ಜೀವನ ನಡೆಸುತಿದ್ದರು. ಆದರೆ ಕಾಲ ಬದಲಾದಂತೆ ಹಣಕ್ಕೆ ಬಹಳ ಮಹತ್ವ ಬಂದಿದೆ. ಹಣ ಕಂಡರೆ ಹೆಣ ಕೂಡಾ ಬಾಯಿಬಿಡುತ್ತೆ ಅನ್ನುತ್ತಾರೆ ಈ ಮಾತು ಇಂದಿನ ದಿನಮಾನದಲ್ಲಿ ಯಶಸ್ವಿಯಾಗಿ ಚಾಲ್ತಿಯಲ್ಲಿದೆ. ಯಾಕೆಂದರೆ ಹಣ ಒಂದಿದ್ದರೆ ಏನ್ನು ಬೇಕದರೂ ಕೊಂಡುಕೊಳ್ಳಬಹುದು. ಯಾರನ್ನ ಬೇಕಾದರೂ ಹೆಂಗೆ ಬೇಕಾದರೂ ಆಟ ಆಡಿಸಬಹುದು.ಹಾಗೆಯೆ ಆಧುನಿಕ ಯುಗದಲ್ಲಿ ಪ್ರತಿಯೊಂದಕೊ ಹಣ ಬೇಕು ಅಷ್ಟೊಂದು ಝರ್ಚು ಇದೆ ದಿನಬೆಳಗಾದರೆ ಮೊಬೈಲ್ ರಿಚಾರ್ಜ ಬೈಕ್ ಪೆಟ್ರೋಲ್ ಬಟ್ಟೆ ಹೀಗೆ ಇವೆಲ್ಲವು ಸಾಮಾನ್ಯ ಜನರ ಜೀವನದ ಅಗತ್ಯ ವಸ್ತುಗಳಾಗಿವ ಇಂದಿನ ದಿನಗಳಲ್ಲಿ . ಹೀಗಿರುವಾಗ ದುಡಿದ ಹಣದಲ್ಲಿ ತನ್ನ ಅಗತ್ಯಗಳನ್ನು ತೀರಿಸಿಕೊಂಡು ಮಿಕ್ಕ ಹಣವನ್ನು ಮನೆಗೆ ಕಳುಹಿಸಬೇಕು . ಹಾಗಿದ್ದರೆ ಗಂಡು ಹಡಣ್ಣು ಸಮನಾಗಿ ದುಡಿಯುವ ಈ ಯುಗದಲ್ಲಿ ಯಾರು ಹೆಚ್ಚು ಹಣವನ್ನು ತಮ್ಮ ಮನೆಗಳಿಗೆ ಕಳುಹಿಸುತ್ತಾರೆ ಎಂಬುದರ ಬಗ್ಗೆ ಸಮಿಕ್ಷೆ ನಡೆಸಿದಾಗ ತಿಳಿದ ಬಂದ ಸಂಗತಿ ಎಂದರೆ ಪುರುಷರಿಗಿಂತ ಮಹಿಳೆಯರೆ ಹೆಚ್ಚು ಹಣವನ್ನು ಉಳಿತಾಯ ಮಾಡಿ ಮನೆಗೆ ಕಳುಹಿಸುತ್ತಾರೆ ಎಂದು ಸಮಿಕ್ಷೆ ಹೊರಬಂದಿದೆ.
ಕುಟುಂಬ ವ್ಯವಸ್ಥೆಯಲ್ಲಿನ ಪರಿವರ್ತನೆ, ವಿವಿಧ ಕಾರಣಗಳಿಗಾಗಿ ವಲಸೆ ತೆರಳುವ ಪ್ರಕ್ರಿಯೆಯು ಕುಟುಂಬದ ಸದಸ್ಯರ ನಡುವಣ ಹಣ ವರ್ಗವಾಣೆಯಸ್ವರೂಪವನ್ನೇ ಬದಲಾಯಿಸಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಸಾಮಾಜಿಕ ಸ್ಥಾನಮಾನ, ಸಂಪತ್ತು, ಭೂ ಮಾಲೀಕತ್ವ ಕೂಡ ಪಾಲಕರು ಮತ್ತು ಮಕ್ಕಳ ನಡುವಣ ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬೆಂಗಳೂರಿನ ‘ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ ’ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಭೂಮಿ ಅಥವಾ ಇತರ ಮಾದರಿಯ ಸಂಪತ್ತು ಹೊಂದಿರುವ ಪಾಲಕರು ಹಣ ಪಡೆಯುವುದು, ಕಳುಹಿಸುವುದನ್ನು ಮಾಡುತ್ತಾರೆ ಎಂದು ಸಮೀಕ್ಷಾ ವರದಿಯನ್ನು ಉಲ್ಲೇಖಿಸಿ ಕಿಂಕರ್ ಮಂಡಲ್ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಸಮೀಕ್ಷೆಯಲ್ಲಿ 60 ಹಾಗೂ 80 ವರ್ಷ ಮೇಲ್ಪಟ್ಟವರು ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ.