ಕ್ರೆಡಿಟ್ ಕಾರ್ಡ್. ಇಂದಿನ ಯುವಪೀಳಿಗೆಯ ಕೆಲ ಮಕ್ಕಳ ಐಷಾರಾಮಿ ಜೀವನದ ಒಂದು ಭಾಗ. ಅದ್ರಲ್ಲೂ ಕ್ರೆಡಿಟ್ ಕಾರ್ಡ್ ಏನಾದ್ರೂ ಅವರಪ್ಪನ ಅಮ್ಮನ ಹೆಸರಲ್ಲಿದ್ದುಬಿಟ್ರೆ ಮುಗೀತು. ಕಣ್ಣಿಗೆ ಕಂಡಿದ್ದೆಲ್ಲ ಪರ್ಚೇಸ್ ಮಾಡಿ ಕೊನೆಗೆ ಫಜೀತಿ ತಂದುಕೊಂಡು ಬಿಡ್ತಾರೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಹುಷಾರಾಗಿರಬೇಕು ಅನ್ನೋದು.
ಕೆಲವರಿಗೆ ಕ್ರೆಡಿಟ್ ಕಾರ್ಡ್ ಬಳಸೋದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಕ್ರೆಡಿಟ್ ಕಾರ್ಡ್ ಆಫರ್ ಮಾಡೋ ಬ್ಯಾಂಕ್‌ಗಳಿಗೇನು ಕಡಿಮೆ ಇಲ್ಲ. ಆನ್‌ಲೈನ್ ಶಾಪಿಂಗ್ ಹುಚ್ಚು ಹೆಚ್ಚಾಗಿ, ಕ್ರೆಡಿಟ್ ಕಾರ್ಡ್ ಇದೆ ಅನ್ನೋ ಭ್ರಮೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಕೊಂಡುಕೊಳ್ತಾರೆ. ಅದರಲ್ಲೂ ಕ್ರೆಡಿಟ್ ಕಾರ್ಡ್ ಮೇಲೆ ಡಿಸ್ಕೌಂಟ್ ಕೊಟ್ಟರಂತೂ ಮುಗೀತು.
ಬ್ಯಾಂಕ್‌ನವರು ಭರ್ಜರಿ ಬಡ್ಡಿ ಹಾಕಿದಾಗ ಎಚ್ಚರಗೊಳ್ಳುವ ಕೆಲವರಿಗೆ ಕ್ರೆಡಿಟ್ ಕಾರ್ಡ್ ತೊಂದೊಡ್ಡುವ ಪರಿಸ್ಥಿತಿಯ ಬಗ್ಗೆ ತುಂಬಾ ಲೇಟ್ ಆಗಿ ತಿಳಿಯುತ್ತದೆ. ಅಷ್ಟುಹೊತ್ತಿಗೆ ಬಡ್ಡಿ ಹಣ 20ರಿಂದ 30 ಸಾವಿರ ರೂಪಾಯಿ ಸರ್‌್ ಅಂತಾ ಕೈ ಜಾರಿ ಹೋಗಿರುತ್ತದೆ. ಇಂಥ ತಪ್ಪುಗಳು ನಿಮ್ಮಿಂದ ಆಗಬಾರದು ಎಂದದಲ್ಲಿ ಕ್ರೆಡಿಟ್ ಕಾರ್ಡ್ ಹೇಗೆ ಬಳಸಬೇಕೆಂಬುದರ ಬಗ್ಗೆ ತಿಳಿದುಕೊಳ್ಳಿ.
ಕ್ರೆಡಿಟ್ ಕಾರ್ಡ್‌ನಿಂದಾಗುವ ಲಾಭಗಳೇನು..?
ಕ್ರೆಡಿಟ್ ಕಾರ್ಡ್‌ನಿಂದ ಆನ್‌ಲೈನ್ ಶಾಪಿಂಗ್ ಮಾಡಬಹುದು. ಪೆಟ್ರೋಲ್ ಹಾಕಿಸುವಾಗ ಕ್ರೆಡಿಟ್ ಕಾರ್ಡ್ ಬಳಸಬಹುದು. ಎಟಿಎಂನಿಂದ ದುಡ್ಡು ತೆಗಿಯಬಹುದು.
ಕ್ರೆಡಿಟ್ ಕಾರ್ಡ್‌ನಿಂದಾಗುವ ನಷ್ಟಗಳೇನು..?
ಕ್ರೆಡಿಟ್ ಕಾರ್ಡಿಗೆ ಸಮಯಕ್ಕೆ ಸರಿಯಾಗಿ ಕರೆಕ್ಟ್ ಅಮೌಂಟ್ ನೀವೂ ಕಟ್ಟದಿದ್ದಲ್ಲಿ ಭಾರೀ ಮೊತ್ತದ ಬಡ್ಡಿ ಕಟ್ಟಬೇಕಾಗುತ್ತದೆ.
ಅಲ್ಲದೇ ಒಮ್ಮೆ ಸಿಬಿಲ್ ಸ್ಕೋರ್ ಹಾಳಾದರೆ ಮುಂದೆ ನಿಮಗೆ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಸುಲಭವಾಗಿ ಸಿಗುವುದಿಲ್ಲ.
ಇನ್ನು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬೇಕಾ ಬೇಡ್ವಾ..? ಇದರಿಂದ ಲಾಭಾನಾ ಇಲ್ಲಾ ನಷ್ಟಾನಾ ಎಂಬ ಪ್ರಶ್ನೆಗೆ ಉತ್ತರ ಇದೆಲ್ಲ ನೀವೂ ಕ್ರೆಡಿಟ್ ಕಾರ್ಡ್ ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಡಿಪೆಂಡ್ ಆಗಿರುತ್ತದೆ. ನೀವೂ ಸ್ಮಾರ್ಟ್ ಆಗಿ, ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಬಳಸಿ, ಕಾಲ ಕಾಲಕ್ಕೆ ತಕ್ಕಂತೆ ದುಡ್ಡು ಕಟ್ಟಿದರೆ ನಿಮಗೆ ಯಾವುದೇ ನಷ್ಟ ಸಂಭವಿಸುವುದಿಲ್ಲ.
ಕ್ರೆಡಿಟ್ ಕಾರ್ಡ್ ಬಳಸೋದು ಹೇಗೆ..?
ಕ್ರೆಡಿಟ್ ಕಾರ್ಡ್ ಬಳಸುವಾಗ ನಿಮ್ಮ ಸಂಬಳದ ಅರ್ಧ ಭಾಗಕ್ಕಿಂತ ಹೆಚ್ಚು ಹಣವನ್ನ ಕ್ರೆಡಿಟ್ ಕಾರ್ಡ್ ಮೂಲಕ ವ್ಯಯಿಸಬೇಡಿ.
ಕ್ರೆಡಿಟ್ ಕಾರ್ಡ್ ಹಣ ಕಟ್ಟುವಾಗ ಯಾವಾಗಲೂ ಪೂರ್ತಿ ಹಣವನ್ನ ಕಟ್ಟಿಬಿಡಿ. ಅಲ್ಲಿ ನಿಮಗೆ ಮಿನಿಮಮ್ ಡ್ಯೂ ಎಂಬ ಆಪ್ಷನ್ ತೋರಿಸುತ್ತದೆ. ಆದ್ರೆ ಆ ಆಪ್ಷನ್ ಎಂದಿಗೂ ಫಾಲೋ ಮಾಡಬೇಡಿ. ನೀವೂ ಹಾಗೇ ಮಾಡಿದ್ದೇ ಆದಲ್ಲಿ ಬಡ್ಡಿಯ ಮೊತ್ತ ದುಪ್ಪಟ್ಟು ಆಗುತ್ತ ಹೋಗುತ್ತದೆ. ನಂತರ 50ರಿಂದ ಒಂದು ಲಕ್ಷದ ತನಕ ಬಡ್ಡಿ ಕಟ್ಟುವ ಪರಿಸ್ಥಿತಿ ಬಂದೊದಗುತ್ತದೆ.
ಇನ್ನು ಈ ಕಷ್ಟವನ್ನ ನೀವು ಈಗಾಗಲೇ ಅನುಭವಿಸಿದ್ದರೆ, ಮೊದಲು ಬಡ್ಡಿ ಹಣವನ್ನ ಕಟ್ಟಿ, ನಂತರ ಕ್ರೆಡಿಟ್ ಕಾರ್ಡ್ ಬಳಕೆಯನ್ನ ಜಾಣ್ಮೆಯಿಂದ ಮಾಡಿ. ಇಲ್ಲದಿದ್ದರೆ ದಿನದಿಂದ ದಿನಕ್ಕೆ ಬಡ್ಡಿ ದರ ಹೆಚ್ಚುತ್ತಾ ಹೋಗುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ